(1) ಈ ವಿನಿಮಯಗಳಲ್ಲಿ ಅನ್ಯಥಾ ಸಂದರ್ಭವು ಅಗತ್ಯಪಡಿಸಿದ ಹೊರತು,-
(ಎ) ‘ನೇಮಕಾತಿ ಪ್ರಾಧಿಕಾರ’ ಎಂದರೆ, ಬೆಂಗಳೂರು ನಗರದ ನಗರಪಾಲಿಕೆಗಳ ಸೇವೆಗಳು (ಸಾಮಾನ್ಯ) ವೃಂದ ಮತ್ತು ನೇಮಕಾತಿ ವಿನಿಯಮಗಳು, 1971ರ 2(ಸಿ) ವಿನಿಯಮಗಳ ಅಡಿಯಲ್ಲಿ ನಿರ್ದಿಷ್ಟಪಡಿಸಲಾದಂತೆ ಆಯುಕ್ತರು, (ಬಿ) ‘ಗುತ್ತಿಗೆ ಪೌರಕಾರ್ಮಿಕರು’ ಎಂದರೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎರಡು ವರ್ಷಗಳಿಗಿಂತ ಕಡಿಮೆಯಲ್ಲದಂತೆ ಸೇವೆ ಸಲ್ಲಿಸಿರುವ ಮತ್ತು ಈ ನಿಯಮಗಳ ಪ್ರಾರಂಭದ ದಿನಾಂಕದಂದು ಹಾಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತಿರುವ ಎನ್ಎಮ್ಆರ್/ದಿನಗೂಲಿ/ಗುತ್ತಿಗೆ/ ಹೊರಗುತ್ತಿಗೆ/ ಇತರರು
(ಸಿ) ‘ಅನುಸೂಚಿ’ ಎಂದರೆ ಈ ನಿಯಮಗಳಿಗೆ ಲಗತ್ತಿಸಲಾದ ಅನುಸೂಚಿ;
(ಡಿ) ‘ಆಯ್ಕೆ’ ಎಂದರೆ, ಈ ನಿಯಮಗಳ ಉಪಬಂಧಗಳಿಗನುಸಾರವಾಗಿ ಅಭ್ಯರ್ಥಿಗಳ ಆಯ್ಕೆ;
(ಇ) ‘ಆಯ್ಕೆ ಸಮಿತಿ’ ಎಂದರೆ, 3ನಿಯಮದ ಅಡಿಯಲ್ಲಿ ರಚನೆಯಾದ ಆಯ್ಕೆ ಸಮಿತಿ;
(ಎಫ್) ‘ಖಾಲಿ ಸ್ಥಾನಗಳು’ ಎಂದರೆ, ಈ ನಿಯಮಗಳ ಅಡಿಯಲ್ಲಿ ಭರ್ತಿಮಾಡಬೇಕಾದ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಖಾಲಿ ಹುದ್ದೆಗಳ ಸಂಖ್ಯೆ;
(2) ಈ ನಿಯಮಗಳಲ್ಲಿ ಬಳಸಲಾದ ಆದರೆ ಪರಿಭಾಷಿಸಿರದ ಇತರ ಪದಗಳು ಮತ್ತು ಪದಾವಳಿಗಳು, ಬೆಂಗಳೂರು ನಗರದ ನಗರಪಾಲಿಕೆಗಳ ಸೇವೆಗಳು(ಸಾಮಾನ್ಯ) ವೃಂದ ಮತ್ತು ನೇಮಕಾತಿ ವಿನಿಯಮಗಳು, 1971ರಲ್ಲಿ ಅವುಗಳಿಗೆ ಗೊತ್ತುಪಡಿಸಿದ ಅದೇ ಅರ್ಥವನ್ನು ಹೊಂದಿರತಕ್ಕದ್ದು,