(1) ಆಯ್ಕೆ ಸಮಿತಿಯು ಭರ್ತಿಮಾಡಬೇಕಾದ ಖಾಲಿ ಸ್ಥಾನಗಳನ್ನು ಮತ್ತು ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನು ಅಥವಾ ಯಾವುದೇ ಆದೇಶದ ಮೂಲಕ ಅಥವಾ ಅದರಡಿಯಲ್ಲಿ ಕಲ್ಪಿಸಲಾದ ಹುದ್ದೆಗಳ ಮೀಸಲಾತಿಗೆ ಅನುಸಾರವಾಗಿ ವರ್ಗೀಕರಣವನ್ನು ಪರಿಗಣಿಸಿಚ್ಪ ತರುವಾಚಿiು,, ಆಸಕ್ತ ಅಭ್ಯರ್ಥಿಗಳಿಂದ (2)ನೇ ಉಪನಿಯಮದಲ್ಲಿ ನಿರ್ದಿಷ್ಟಪಡಿಸಿದಂತೆ ಚ್ಫಡಿಲೆಗಳನ್ನು ಕ್ಷಿನ್ಲೋಡ್ ಮಡಿ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸತಕ್ಕದ್ದು ಮತ್ತು ಅಚಿಥ ಇ್ಫಹೀರಾತಿನ ಉದ್ದೃತ ¨S್ಫu್ಪವನ್ನು ವ್ಯಾಪಕ ಪ್ರಸರಣವುಳ್ಳ ಕನಿಷ್ಠ ಎರಡು ವಾರ್ತಾ ಪತ್ರಿಕೆಗಳಲ್ಲಿ ಕೂಡಾ ಪ್ರಕಟಿಸತಕ್ಕದ್ದು ಮತ್ತು ಅದರಲ್ಲಿ ಒಂದು ಕನ್ನಡದ್ದಾಗಿರತಕ್ಕದ್ದು,
(2) ಆಯ್ಕೆ ಸಮಿತಿಯು, (1)ನೇ ಉಪನಿಯಮದ ಅಡಿಯಲ್ಲಿ ಮಾಡಲಾದ ಪ್ರಕಟಣೆಗೆ ಅನುಸಾರವಾಗಿ ಅರ್ಜಿಸಲ್ಲಿಸಿದ ಅಭ್ಯರ್ಥಿಗಳ ಪೈಕಿ, ಹೆಚ್ಚುವಯಸ್ಸಾದ ವ್ಯಕ್ತಿಯನ್ನು ಕಡಿಮೆ ವಯಸ್ಸಾದ ವ್ಯಕ್ತಿಗಿಂತ ಹಿರಿಯನೆಂದು ಪರಿಗಣಿಸುವ ಮೂಲಕ ವಯಸ್ಸಿನ ಆದೇಶಾನುಕ್ರಮದಲ್ಲಿ ಆಯ್ಕೆ ಪಟ್ಟಿಯನ್ನು ಸಿದ್ದಪಡಿಸತಕ್ಕದ್ದು;
ಪರಂತು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಎರಡು ವರ್ಷಗಳಿಗಿಂತ ಕಡಿಮೆಯಲ್ಲದ್ದಂತೆ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಮತ್ತು ಈ ನಿಯಮಗಳ ಪ್ರಾರಂಭದ ದಿನಾಂಕದಂದು ಹಾಗೆ ಸೇವೆ ಸಲ್ಲಿಸಿ ಕಾರ್ಯನಿರ್ವಹಿಸುತ್ತಿರುವುದನ್ನು ಮುಂದುವರಿಸುತ್ತಿರುವ ಎನ್ಎಮ್ಆರ್/ದಿನಗೂಲಿ/ಗುತ್ತಿಗೆ/ಹೊರಗುತ್ತಿಗೆ/ಇತರ ಪೌರಕಾರ್ಮಿಕ ವ್ಯಕ್ತಿಗಳಿಗೆ ಆದ್ಯತೆ ನೀಡತಕ್ಕದ್ದು;
ಮತ್ತು ಪರಂತು, ಹೆಚ್ಚು ಸಂಖ್ಯೆಯ ವರ್ಷಗಳು ಕಾರ್ಯನಿರ್ವಹಿಸಿರುವ ವ್ಯಕ್ತಿಗೆ, ಕಡಿಮೆ ಸಂಖ್ಯೆಯ ವರ್ಷಗಳು ಕಾರ್ಯನಿರ್ವಹಿಸಿರುವ ವ್ಯಕ್ತಿಗಿಂತ ಆದ್ಯತೆಯನ್ನು ನೀಡತಕ್ಕದ್ದು;
ಅಲ್ಲದೆ ಪರಂತು, ಹೊರಗುತ್ತಿಗೆ ಪೌರಕಾರ್ಮಿಕರನ್ನು ಪರಿಗಣಿಸುವುದಕ್ಕಾಗಿ, ಬಿಬಿಎಂಪಿಯ ಏಜೆಸ್ಸಿಯು ಕನಿಷ್ಠ ಎರಡು ವರ್ಷಗಳು ಕಾರ್ಯನಿರ್ವಹಿಸಿರುವ ಮತ್ತು ಭವಿಷ್ಯನಿಧಿ, ಇಎಸ್ಐ ಮತ್ತು ಸಂಬಳ ನೀಡಿರುವುದು ಮುಂತಾದವುಗಳ ಕುರಿತು ದಾಖಲೆ ಸಾಕ್ಷ್ಯವಿರತಕ್ಕದ್ದು ಮತ್ತು ಎನ್ಎಂಆರ್/ದಿನಗೂಲಿ/ಗುತ್ತಿಗೆ/ಇತರರಿಗೆ ಬಿಬಿಎಂಪಿ ನಿಧಿಯಿಂದ ಕನಿಷ್ಠ ಎರಡು ವರ್ಷಗಳು ಕಾರ್ಯನಿರ್ವಹಿಸಿರುವ ಮತ್ತು ಕೂಲಿಯನ್ನು ಪಾವತಿಸಿರುವ ದಾಖಲೆ ಸಾಕ್ಷ್ಯವಿರತಕ್ಕದ್ದು.
(3) (2)ನೇ ಉಪ ನಿಯಮದ ಅಡಿಯಲ್ಲಿ ಆಯ್ಕೆ ಮಾಡಬೇಕಾದ ಅಭ್ಯರ್ಥಿಗಳ ಸಂಖ್ಯೆಯು ಅಧಿಸೂಚಿಸಿಚ್ಪ ಖಾಲಿ ಸ್ಥಾನಗಳ ಸಂಖ್ಯೆಗೆ ಸಮನಾಗಿರತಕ್ಕದ್ದು.
(4)ಇಬ್ಬರು ಅಥವಾ ಹೆಚ್ಚಿನ ಅಭ್ಯರ್ಥಿಗಳ ಸೇವಾವಧಿಯು ಸಮನಾಗಿದ್ದಲ್ಲಿ, ಆಗ ಅಂಥ ಅಭ್ಯರ್ಥಿಗಳ ಸಂಬಂಧದಲ್ಲಿ ಆದ್ಯತಾಕ್ರಮವನ್ನು ಅವರ ವಚಿiುಸ್ಸಿನ ಆಧಾರದ ಮೇಲೆ ನಿಗಧಿಪಡಿಸತಕ್ಕದ್ದು, ಹೆಚ್ಚು ವಚಿiುಸ್ಸಾದವರನ್ನು ಚಿಕ್ಕವರಿಗಿಂತ ಮೇಲೆ ಕೂರಿಸತಕ್ಕದ್ದು. ಅಭ್ಯರ್ಥಿಗಳ ಜನ್ಮ ದಿನಾಂಕ ಮತ್ತು ಸೇವೆಚಿiು ದಿನಾಂಕವೂ ಒಚಿದೇ ಆಗಿದ್ದಲ್ಲಿ ಆಗ ಲಾಟರಿಯ ಮೂಲಕ ಆಯ್ಕೆ ಮಾಡತಕ್ಕದ್ದು.
(5)ಆಯ್ಕೆ ಸಮಿತಿಯು, (2)ನೇ ಉಪನಿಯಮದ ಅಡಿಯಲ್ಲಿ ಸಿದ್ದಪಡಿಸಿದ ಮುಖ್ಯ ಪಟ್ಟಿಯಲ್ಲಿ ಸೇರಿಲ್ಲದ ಅಂಥ ಅಭ್ಯರ್ಥಿಗಳ ಹೆಚ್ಚುವರಿ ಪಟ್ಟಿಯನ್ನು ಕೂಡ ಸಿದ್ದಪಡಿಸತಕ್ಕದ್ದು. ಹೆಚ್ಚುವರಿ ಪಟ್ಟಿಯಲ್ಲಿ ಸೇರಿಸಬೇಕಾದ ಅಭ್ಯರ್ಥಿಗಳ ಸಂಖ್ಯೆಯು ಸಾಧ್ಯವಾದಷ್ಟು, ಆಯ್ಕೆ ಮಾಡಬೇಕಾದ ಅಭ್ಯರ್ಥಿಗಳ ಸಂಖ್ಯೆಯ ಶೇಕಡಾ ಇಪ್ಪತ್ತು ಇರತಕ್ಕದ್ದು. ಸಾಧ್ಯವಾದಷ್ಟು ಮಟ್ಟಿಗೆ ಹೆಚ್ಚುವರಿ ಪಟ್ಟಿಯಲ್ಲಿ (2)ನೇ ಉಪ ನಿಯಮದ ಅಡಿಯಲ್ಲಿ ಪಟ್ಟಿಯಲ್ಲಿ ಪ್ರತಿನಿಧಿಸಿದ ಮೀಸಲಾತಿ ಪ್ರವರ್ಗಗಳ (ಸಮಾನಾಚಿತರ ಮತ್ತು ಲಂಬ) ಪ್ರತಿಯೊಂದಕ್ಕೆ ಸೇರಿರುವ ಕನಿಷ್ಟ ಒಬ್ಬ ಅಭ್ಯರ್ಥಿಯಿರತಕ್ಕದ್ದು. (2)ನೇ ಉಪನಿಯಮದ ಅಡಿಯಲ್ಲಿನ ಪಟ್ಟಿಯಲ್ಲಿ ಸೇರಿರುವ ಹೆಸರಿನ ಒಬ್ಬ ಅಭ್ಯರ್ಥಿಯು ನಿಯಮಿಸಲಾದ ಸಮಯದೊಳಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ತಪ್ಪಿದಲ್ಲಿ, ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ತಪ್ಪಿದ ಅಭ್ಯರ್ಥಿಯರೇ ಮೀಸಲಾತಿ ಪ್ರವರ್ಗಕ್ಕೆ ಸೇರಿದ ಅಭ್ಯರ್ಥಿಯನ್ನು ಆ ಮಟ್ಟಿಗೆ ಹೆಚ್ಚುವರಿ ಪಟ್ಟಿಯಿಚಿದ ನೇಮಕ ಮಾಡತಕ್ಕದ್ದು.
(6) (2)ನೇ ಮತ್ತು (5)ನೇ ಉಪನಿಯಮದ ಅಡಿಯಲ್ಲಿ ಹಾಗೆ ಸಿದ್ದಪಡಿಸಲಾದ ಪಟ್ಟಿಗಳನ್ನು ಆಯುಕ್ತರ ಕಛೇರಿಯ ಪ್ರಕಟಣಾ ಫಲಕದ ಮೇಲೆ ಪ್ರಕಟಿಸತಕ್ಕದ್ದು ಹಾಗೂ ಅಭ್ಯರ್ಥಿಗಳಿಗೆ ತಿಳಿಸತಕ್ಕದ್ದು ಮತ್ತು ಬಿ.ಬಿ.ಎಮ.ಪಿ.ಯ ಸಂಬಂಧಪಟ್ಟ ಜಾಲತಾಣದಲ್ಲಿ ಪ್ರಕಟಿಸತಕ್ಕದ್ದು.
(7) ಆಯ್ಕೆ ಸಮಿತಿಯ ಮೂಲಕ ಆಯ್ಕೆಯಾದ ಮತ್ತು ನೇಮಕಾತಿ ಪ್ರಾಧಿಕಾರಕ್ಕೆ ಸಲ್ಲಿಸಿದ ಅಭ್ಯರ್ಥಿಗಳ ಪಟ್ಟಿಯ ಎಲ್ಲಾ ಅಧಿಸೂಚಿತ ಖಾಲಿ ಸ್ಥಾನಗಳು ಭರ್ತಿಯಾಗುವವರೆಗೆ ಅಥವಾ ಆಯ್ಕೆ ಪಟ್ಟಿಯ ಪ್ರಕಟಣೆಯ ದಿನಾಂಕದಿಂದ ಆರು ತಿಂಗಳು ಪೂರ್ಣಗೊಳ್ಳುವವರೆಗೆ, ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಸಿಂಧುವಾಗಿರತಕ್ಕದ್ದು.