ಬೃಹತ್ ಬೆಂಗಳೂರು ಪಾಲಿಕೆ ಮಟ್ಟದಲ್ಲಿ (ಇಲ್ಲಿ ಇನ್ನು ಮುಂದೆ ಬಿಬಿಎಂಪಿ ಎಂದು ಉಲ್ಲೇಖಿಸಲಾಗಿದೆ) ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಖಾಲಿ ಸ್ಥಾನಗಳನ್ನು ಭರ್ತಿಮಾಡಲು ನೇಮಕಾತಿಗಾಗಿ ಅಭ್ಯರ್ಥಿಗಳ ಆಯ್ಕೆಗಾಗಿ ಈ ಮುಂದಿನ ಸದಸ್ಯರನ್ನೊಳಗೊಂಡ ಆಯ್ಕೆ ಸಮಿತಿಯನ್ನು ರಚಿಸತಕ್ಕದ್ದು, ಎಂದರೆ:-
| 1 | ವಿಶೇಷ ಆಯುಕ್ತರು (ಆಡಳಿತ), ಬಿಬಿಎಂಪಿ | - | ಅಧ್ಯಕ್ಷರು |
| 2 | ಉಪ ಆಯುಕ್ತರು (ಆಡಳಿತ), ಬಿಬಿಎಂಪಿ | - | ಸದಸ್ಯರು |
| 3 | ಎಲ್ಲಾ ವಲಯ ಹೆಚ್ಚುವರಿ/ಜಂಟಿ ಆಯುಕ್ತರು, (ಆರೋಗ್ಯ & ಘನತ್ಯಾಜ್ಯ ನಿರ್ವಹಣೆ ಸೇರಿದಂತೆ) ಬಿಬಿಎಂಪಿ | - | ಸದಸ್ಯರು |
| 4 | ಸಹಾಯಕ ಆಯುಕ್ತರು (ಆಡಳಿತ-2) ಬಿಬಿಎಂಪಿ | - | ಸದಸ್ಯರು |
| 5 | ಕಾನೂನು ಕೋಶದ ಮುಖ್ಯಸ್ಥರು, ಬಿಬಿಎಂಪಿ | - | ಸದಸ್ಯರು |
| 6 | ಮುಖ್ಯ ಲೆಕ್ಕಾಧಿಕಾರಿ, ಬಿಬಿಎಂಪಿ | - | ಸದಸ್ಯರು |
| 7 | ಸಹಾಯಕ ಆಯುಕ್ತರು (ನೇಮಕಾತಿ ಮತ್ತು ವಿಚಾರಣೆ), ಬಿಬಿಎಂಪಿ | - | ಸದಸ್ಯ ಕಾರ್ಯದರ್ಶಿ |