ಕರ್ನಾಟಕ ಅಬಕಾರಿ (ಬ್ರೀವರಿ) ನಿಯಮಗಳು, 1967 (ಇದರಲ್ಲಿ ಇನ್ನು ಮುಂದೆ ಸದರಿ ನಿಯಮಗಳೆಂದು ಉಲ್ಲೇಖಿಸಲಾಗಿದೆ) ರಲ್ಲಿ, 2ನೇ ನಿಯಮದಲ್ಲಿ, ಖಂಡ (ಜಿ) ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
“(ಜಿಜಿ) “ಕ್ರಾಫ್ಟ್ ಬ್ರೀವರಿ” ಎಂದರೆ 4,000 ಚದರ ಅಡಿಗಿಂತ ಕಡಿಮೆ ಇರದ ಸ್ಥಳದಲ್ಲಿ ವರ್ಷಕ್ಕೆ 2 ಲಕ್ಷ ಲೀಟರ್ ಸ್ಥಾಪಿತ ಸಾಮರ್ಥ್ಯ ಮೀರದಂತೆ ಇರುವ ಸಣ್ಣ ಬ್ರೀವರಿ, ಇದರಲ್ಲಿ ಬಾಟಲ್ಡ್ ಬಿಯರ್ನ್ನು ಮಾತ್ರ ತಯಾರಿಸಲಾಗುತ್ತದೆ ಮತ್ತು ಇದು ಬಾಟಲ್ಡ್ ಬಿಯರ್ನ್ನು ಸಂಗ್ರಹಿಸುವ ಅಥವಾ ವಿತರಿಸುವ ಪ್ರತಿಯೊಂದು ಸ್ಥಳವನ್ನು ಒಳಗೊಂಡಿರುತ್ತದೆ”.