ಎ ಯ ಸೇರ್ಪಡೆ:-
ಸದರಿ ನಿಯಮಗಳ ನಮೂನೆ 2 ಮತ್ತು ನಮೂದುಗಳ ತರುವಾಯ, ಈ ಮುಂದಿನ ನಮೂನೆಯನ್ನು ಸೇರಿಸತಕ್ಕದ್ದು, ಎಂದರೆ:-
“ನಮೂನೆ 2-ಎ (3-ಡಿ ನಿಯಮವನ್ನು ನೋಡಿ) ಕ್ರಾಫ್ಟ್ ಬ್ರೀವರಿ ಸನ್ನದು ಕರ್ನಾಟಕ ರಾಜ್ಯದ ಅಬಕಾರಿ ಆಯುಕ್ತನಾದ..........................ಎಂಬ ಹೆಸರಿನ ನಾನು..................ಕರ್ನಾಟಕ ಅಬಕಾರಿ (ಬ್ರೀವರಿ) ನಿಯಮಗಳು, 1967 ರ ನಿಯಮ 3-ಡಿಯ ಉಪಬಂಧಗಳಿಗನುಸಾರವಾಗಿ...............ಅವರಿಗೆ (ಇನ್ನು ಮುಂದೆ ಸನ್ನದುದಾರ ಎಂದು ಉಲ್ಲೇಖಿಸಲಾಗುವುದು) ....................ಆವರಣದಲ್ಲಿ...................ಇಂದ...... ...ವರೆಗೆ ಈ ಕೆಳಕಂಡಂತೆ ಹೆಸರಿಸಿರುವ ಷರತ್ತುಗಳಿಗೆ ಬದ್ಧವಾಗಿ ಕ್ರಾಫ್ಟ್ ಬ್ರೀವರಿಯಲ್ಲಿ ಬಾಟಲ್ಡ್ ಬಿಯರ್ ಉತ್ಪಾದನೆ, ಸಂಗ್ರಹ ಮತ್ತು ಮಾರಾಟ ಮಾಡಲು ಸನ್ನದು ಮಂಜೂರು ಮಾಡುತ್ತಿದ್ದೇನೆ.
ಷರತ್ತುಗಳು 1. ಸನ್ನದುದಾರನು ಕರ್ನಾಟಕ ಅಬಕಾರಿ ಅಧಿನಿಯಮ, 1965 ರ ಉಪಬಂಧಗಳು ಮತ್ತು ಅವುಗಳ ಅಡಿಯಲ್ಲಿ ರಚಿಸಲಾದ ಅಧಿಸೂಚನೆಗಳು, ನಿಯಮಗಳು ಮತ್ತು ಆದೇಶಗಳು ಹಾಗೂ ಕರ್ನಾಟಕ ಅಬಕಾರಿ (ಬ್ರೀವರಿ) ನಿಯಮಗಳು, 1967 ಕ್ಕೆ ಬದ್ದನಾಗಿರಬೇಕು. 2. ಸನ್ನದುದಾರನು ರಾಜ್ಯಸರ್ಕಾರವು ಗೊತ್ತುಪಡಿಸಿದ ನಿಯಮಗಳನ್ನು ಅಥವಾ ಬಾಟಲ್ಡ್ ಬಿಯರ್ ಉತ್ಪಾದನೆ, ಸ್ವಾಧೀನತೆ ಮತ್ತು ಮಾರಾಟ ಅಥವಾ ವಿತರಣೆಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಅಬಕಾರಿ ಆಯುಕ್ತರು ನೀಡುವಂತಹ ಸೂಚನೆಗಳು ಮತ್ತು ಆದೇಶಗಳನ್ನು ಪಾಲಿಸಬೇಕು. 3. ಸನ್ನದುದಾರನು ಬಿಯರ್ ಉತ್ಪಾದಿಸುವ ಪ್ರಕ್ರಿಯೆ ಮತ್ತು ಉತ್ಪಾದಿಸಬೇಕಾದ ಬಿಯರ್ನ ಮಾನದಂಡ ಮತ್ತು ಗುಣಮಟ್ಟಕ್ಕೆ ಸಂಬಂಧಿಸಿದಂತೆ ರಾಜ್ಯಸರ್ಕಾರ ಅಥವಾ ಅಬಕಾರಿ ಆಯುಕ್ತರು ಹೊರಡಿಸುವ ಆದೇಶಗಳಿಗೆ ಬದ್ಧನಾಗಿರಬೇಕು. 4. ಸನ್ನದುದಾರನು ಕ್ರಾಫ್ಟ್ ಬ್ರೀವರಿಯಲ್ಲಿ ವೋರ್ಟ್ನ ಗುರುತ್ವವನ್ನು ಪರೀಕ್ಷಿಸಲು ಅಬಕಾರಿ ಆಯುಕ್ತರು ಅನುಮೋದಿಸಬೇಕಾದ ಸ್ಯಾಕರೋಮೀಟರ್ ಮತ್ತು ಒಂದು ರೀತಿಯ ಥರ್ಮೊಮೀಟರ್ ಅನ್ನು ಒದಗಿಸಬೇಕು. ಬಿಯರ್ನ ತೀಕ್ಷ್ಣತೆಯನ್ನು ಪರೀಕ್ಷಿಸಲು ಹೈಡ್ರೋಮೀಟರ್ ಸಹ ಒದಗಿಸಬೇಕು. ಕ್ರಾಫ್ಟ್ ಬ್ರೀವರಿಯಲ್ಲಿನ ಮಳಿಗೆಗಳು, ಫರ್ಮೆಂಟೇಷನ್ ಕೊಠಡಿಗಳು, ಎಲ್ಲಾ ನಿಶ್ಚಲಗಳು ಮತ್ತು ಉಪಕರಣಗಳನ್ನು ಸ್ವಚ್ಚವಾಗಿಡಬೇಕು. ಕ್ರಾಫ್ಟ್ ಬ್ರೀವರಿಯ ಆವರಣವನ್ನು ಸಹ ಸ್ವಚ್ಚವಾಗಿ ಮತ್ತು ನೈರ್ಮಲ್ಯ ಸ್ಥಿತಿಯಲ್ಲಿಡಬೇಕು. 5. ಸನ್ನದುದಾರನು ನಿರ್ದಿಷ್ಟವಾಗಿ ಸೂಚಿಸಿದವುಗಳನ್ನು ಹೊರತುಪಡಿಸಿ ಉಳಿದ ಬಾಟಲ್ಡ್ ಬಿಯರ್ ಅನ್ನು ತಯಾರಿಸುವುದನ್ನು ನಿಷೇಧಿಸಲಾಗಿದೆ. 6. ಸನ್ನದುದಾರನು ಕರ್ನಾಟಕ ಅಬಕಾರಿ (ದೇಶಿ ಮತ್ತು ವಿದೇಶಿ ಮದ್ಯಗಳ ಮಾರಾಟ) ನಿಯಮಗಳು, 1968 ರಡಿಯಲ್ಲಿ ವಿತರಕ ಸನ್ನದು ಹೊಂದಿರುವ ವ್ಯಕ್ತಿಗೆ ಮಾತ್ರ ಬಾಟಲ್ಡ್ ಬಿಯರ್ ವಿತರಣೆ ಮಾಡಬೇಕು. 7. ವೋರ್ಟ್ ಮತ್ತು ಬಿಯರ್ಗೆ ಸಂಬಂಧಿಸಿದ ಕ್ರಾಫ್ಟ್ ಬ್ರೀವರಿಯಲ್ಲಿನ ವಹಿವಾಟಿನ ಲೆಕ್ಕವನ್ನು ಅಬಕಾರಿ ಆಯುಕ್ತರು ನಿರ್ದಿಷ್ಟಪಡಿಸಿದ ನಮೂನೆಯಲ್ಲಿ ಮತ್ತು ಅಗತ್ಯವಿರುವ ರೀತಿಯಲ್ಲಿ ನಿರ್ವಹಿಸಬೇಕು. 8. ಸನ್ನದುದಾರನು ವೋರ್ಟ್ ಮತ್ತು ಬಿಯರ್ ಗೆ ಸಂಬಂಧಿಸಿದ ಯಾವುದೇ ಅಂಕಿ-ಅಂಶಗಳನ್ನು ಯಾವುದೇ ಸಕ್ಷಮ ಪ್ರಾಧಿಕಾರವು ಕೇಳಿದಾಗ ಒದಗಿಸಬೇಕು. 9. ಸನ್ನದು ಷರತ್ತುಗಳು ಅಥವಾ ನಿಯಮಗಳ ಉಲ್ಲಂಘನೆಗಾಗಿ, ಅಬಕಾರಿ ಆಯುಕ್ತರು ಹದಿನಾಲ್ಕು ದಿನಗಳ ನೋಟೀಸ್ನ್ನು ನೀಡಿದ ನಂತರ ಸನ್ನದನ್ನು ಅಮಾನತ್ತುಗೊಳಿಸಬಹುದು ಅಥವಾ ರದ್ದುಪಡಿಸಬಹುದು. ಅಂತಹ ಅಮಾನತ್ತು ಅಥವಾ ರದ್ದತಿಯ ಕಾರಣದಿಂದ ಸನ್ನದುದಾರನು ಯಾವುದೇ ರೀತಿಯ ಪರಿಹಾರಕ್ಕೆ ಅರ್ಹನಾಗಿರುವುದಿಲ್ಲ. ಅಬಕಾರಿ ಆಯುಕ್ತರು”