ಸದರಿ ನಿಯಮಗಳ 5 ನೇ ನಿಯಮದಲ್ಲಿ “ವಾರ್ಷಿಕ ಇಪ್ಪತ್ತೇಳು ಲಕ್ಷ ರೂಪಾಯಿಗಳು” ಎಂಬ ಪದಗಳ ತರುವಾಯ “ಕ್ರಾಫ್ಟ್ ಬ್ರೀವರಿ ಸನ್ನದು ಮಂಜೂರಾತಿ ಅಥವಾ ನವೀಕರಣಕ್ಕೆ ವಾರ್ಷಿಕ ಶುಲ್ಕ ಐದು ಲಕ್ಷ ರೂಪಾಯಿಗಳು” ಎಂಬ ಪದಗಳನ್ನು ಸೇರಿಸ ತಕ್ಕದ್ದು. 5. 7-ಎ, 8, 8-ಎ, 9, 12, 14, 17, 21, 22, 26 ನೇ ನಿಯಮಗಳ ತಿದ್ದುಪಡಿ:– ಸದರಿ ನಿಯಮಗಳ 7-ಎ, 8, 8-ಎ, 9, 12, 14, 17, 21, 22, 26 ನೇ ನಿಯಮದಲ್ಲಿ, “ಬ್ರೀವರಿ” ಎಂಬ ಪದಗಳು ಎಲ್ಲೆಲ್ಲಿ ಇವೆಯೋ, ಅಲ್ಲಿ “ಬ್ರೀವರಿ ಅಥವಾ ಕ್ರಾಫ್ಟ್ ಬ್ರೀವರಿ” ಎಂಬ ಪದಗಳನ್ನು ಮತ್ತು “ಬ್ರೀವರಿಗಳು” ಎಂಬ ಪದ ಎಲ್ಲೆಲ್ಲಿ ಇವೆಯೋ, ಅಲ್ಲಿ “ಬ್ರೀವರಿಗಳು ಅಥವಾ ಕ್ರಾಫ್ಟ್ ಬ್ರೀವರಿಗಳು” ಎಂಬ ಪದಗಳನ್ನು ಪ್ರತ್ಯಾಯೋಜಿಸತಕ್ಕದ್ದು.
Loading…