ಸದರಿ ನಿಯಮಗಳ ನಮೂನೆ 1-ಎ ರ ತರುವಾಯ, ಈ ಮುಂದಿನ ನಮೂನೆಯನ್ನು ಸೇರಿಸತಕ್ಕದ್ದು, ಎಂದರೆ:-
ನಮೂನೆ 1-ಬಿ
(3-ಡಿ ನಿಯಮವನ್ನು ನೋಡಿ)
ಕ್ರಾಫ್ಟ್ ಬ್ರೀವರಿ ಸನ್ನದು ಅನುಮತಿಗಾಗಿ ಅರ್ಜಿ ಗೆ, ಅಬಕಾರಿ ಆಯುಕ್ತರು, ಕರ್ನಾಟಕ ರಾಜ್ಯ, ಬೆಂಗಳೂರು 1. ಪೂರ್ಣ ಅಂಚೆ ವಿಳಾಸದೊಂದಿಗೆ ಅರ್ಜಿದಾರನ ಹೆಸರು (ಗಳು) 2. ಪ್ರತ್ಯೇಕ ವ್ಯಕ್ತಿ ಅಥವಾ ಸಂಸ್ಥೆ ಅಥವಾ ಕಂಪೆನಿ -
(ಎ) ಸಂಸ್ಥೆಯಾಗಿದ್ದರೆ ಅದರ ಎಲ್ಲಾ ಪಾಲುದಾರರ ಹೆಸರುಗಳು ಮತ್ತು ವಿಳಾಸಗಳನ್ನು ಒದಗಿಸಬೇಕು; ಮತ್ತು ಪಾಲುದಾರಿಕೆ ಪತ್ರವನ್ನು ಸಲ್ಲಿಸಬೇಕು;
(ಬಿ) ಕಂಪೆನಿಯಾಗಿದ್ದರೆ, ಜ್ಞಾಪನ ಪತ್ರ ಹಾಗೂ ಸಂಘದ ನಿಯಮಾವಳಿಗಳ ಪ್ರತಿಯನ್ನು ಸಲ್ಲಿಸಿ ಇದರ ಜೊತೆಗೆ ಕಂಪೆನಿಯ ಎಲ್ಲಾ ನಿರ್ದೇಶಕರ ಹೆಸರುಗಳು ಮತ್ತು ವಿಳಾಸಗಳನ್ನು ತಿಳಿಸುವುದು. 3. ಬಂಡವಾಳ ಹೂಡಲು ಉದ್ದೇಶಿಸಲಾಗಿರುವ ಮೊತ್ತ. 4. ಸ್ಥಳದ ಹೆಸರು ಮತ್ತು ಯಾವ ನಿವೇಶನದಲ್ಲಿ ಕ್ರಾಫ್ಟ್ ಬ್ರೀವರಿ ಕಟ್ಟಡವು ಇದೆ (ಕಟ್ಟಡದ ಯೋಜನೆ ಮತ್ತು ವಿವರಗಳನ್ನು ಸಲ್ಲಿಸಬೇಕು) 5. ನಿಶ್ಚಲಗಳು ಮತ್ತು ಇತರ ಶಾಶ್ವತ ಉಪಕರಣಗಳ ವಿವರಣೆ 6. ಕ್ರಾಫ್ಟ್ ಬ್ರೀವರಿಯ ಅಂದಾಜು ಉತ್ಪಾದನಾ ಸಾಮರ್ಥ್ಯ 7. ಕ್ರಾಫ್ಟ್ ಬ್ರೀವರಿಯನ್ನು ಯಾವ ದಿನಾಂಕದಿಂದ ಆರಂಭಿಸಲು ಅರ್ಜಿದಾರನು ಬಯಸಿದ್ದಾನೆ 8. ಸರ್ಕಾರದ ಪರವಾಗಿ ನಿಗದಿಪಡಿಸಿದ ಸನ್ನದು ಶುಲ್ಕ ಮತ್ತು ಹೆಚ್ಚುವರಿ ಸನ್ನದು ಶುಲ್ಕವನ್ನು ಸಂದಾಯ ಮಾಡಿ ಖಜಾನೆ ಚಲನ್ ಅನ್ನು ಅರ್ಜಿದಾರನು ಲಗತ್ತಿಸಿದ್ದಾನೆಯೇ ಘೋಷಣೆ 1. ನಾನು/ನಾವು ಅರ್ಜಿಯಲ್ಲಿ ಸೂಚಿಸಿದ ವಿವರಗಳು ಸರಿಯಾಗಿದೆ ಎಂದು ಈ ಮೂಲಕ ಘೋಷಣೆ ಮಾಡುತ್ತೇನೆ/ವೆ. 2. ಕರ್ನಾಟಕ ಅಬಕಾರಿ ಅಧಿನಿಯಮ ಅಥವಾ ಅದರಡಿ ಮಾಡಿದ ನಿಯಮಗಳ ಯಾವುದೇ ಸಂಜ್ಞೇಯ ಅಪರಾಧ ಅಥವಾ ಜಾಮೀನು ರಹಿತ ಅಪರಾಧಕ್ಕೆ ನಾನು/ನಾವು ಶಿಕ್ಷಿತನಾಗಿರುವುದಿಲ್ಲ. 3. ಈ ಕೆಳಗೆ ನಾನು/ನಾವು ಸನ್ನದಿಗಾಗಿ ಅರ್ಜಿ ಸಲ್ಲಿಸಿರುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಅಬಕಾರಿ (ಬ್ರೀವರಿ) ನಿಯಮಗಳು, 1967 ಅನ್ನು ತಿಳಿದುಕೊಂಡಿದ್ದೇವೆ ಮತ್ತು ಅದರಲ್ಲಿನ ಉಪಬಂಧಗಳ ತಿಳುವಳಿಕೆಯುಳ್ಳವನ್ನಾಗಿದ್ದೇನೆ. 4. ಸನ್ನದು ಷರತ್ತುಗಳನ್ನು ಮತ್ತು ಕರ್ನಾಟಕ ಅಬಕಾರಿ ಅಧಿನಿಯಮ, 1965 ರ ಉಪಬಂಧಗಳು ಮತ್ತು ನಿಯಮಗಳು ಮತ್ತು ಅದರಡಿ ಮಾಡಿದ ನಿಬಂಧನೆಗಳನ್ನು ಪಾಲಿಸುವುದಾಗಿ ಈ ಮೂಲಕ ಒಪ್ಪಿಕೊಳ್ಳುತ್ತೇನೆ/ವೆ. ಸ್ಥಳ:
ದಿನಾಂಕ: “ಅರ್ಜಿದಾರನ ಹೆಸರು ಮತ್ತು ಸಹಿ”