(1) ತಾಲ್ಲೂಕು ಪಂಚಾಯಿತಿಯು ಮಾಡಿದ ಒಂದು ಲಕ್ಷ ರೂಪಾಯಿಗಳ ಮೌಲ್ಯವನ್ನು ಮೀರುವ ಯಾವುದೇ ಚರಸ್ವತ್ತಿನ ಆರ್ಜನೆ ಅಥವಾ ಗುತ್ತಿಗೆ, ಮಾರಾಟ ಅಥವಾ ವರ್ಗಾವಣೆಯು, ಅಂಥ ಆರ್ಜನೆ ಅಥವಾ ಗುತ್ತಿಗೆ, ಮಾರಾಟ ಅಥವಾ ಇತರ ವರ್ಗಾವಣೆಗೆ ಜಿಲ್ಲಾ ಪಂಚಾಯತಿಯ ಪೂರ್ವಾನುಮೋದನೆಯನ್ನು ಪಡೆದಿದ್ದ ಹೊರತು, ಸಿಂಧುವಾಗತಕ್ಕದಲ್ಲ.
(2) ತಾಲ್ಲೂಕು ಪಂಚಾಯಿತಿಯ ಯಾವುದೇ ಚರಸ್ವತ್ತಿನ ಪ್ರತಿಯೊಂದು ಆರ್ಜನೆ ಅಥವಾ ಗುತ್ತಿಗೆ, ಮಾರಾಟ ಅಥವಾ ವರ್ಗಾವಣೆಯನ್ನು ಲಿಖಿತವಾಗಿ ಬರೆದುಕೊಡತಕ್ಕದ್ದು.
(3) ತಾಲ್ಲೂಕು ಪಂಚಾಯಿತಿಯು ಯಾವುದೇ ಚರಸ್ವತ್ತನ್ನು ಖರೀದಿಸಲು ಅಥವಾ ತನಗೆ ಸೇರಿದ ಚರಸ್ವತ್ತನ್ನು ಮಾರಾಟ ಮಾಡಲು ಪ್ರಸ್ತಾಪಿಸಿದಲ್ಲಿ, ಖರೀದಿಸಲು ಅಥವಾ ಮಾರಾಟ ಮಾಡಲು ಪ್ರಸ್ತಾಪಿಸಿದ ವಸ್ತುಗಳ ಅಥವಾ ಸರಕುಗಳ ವಿವರಗಳನ್ನು ಉಲ್ಲೇಖಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು ಸಹಿ ಮಾಡಿದ ಒಂದು ನೋಟೀಸನ್ನು ಸಂದರ್ಭಾನುಸಾರ ಉದ್ದೇಶಿತ ಖರೀದಿದಾರನು ಅಥವಾ ಮಾರಾಟಗಾರನು ಮೊಹರು ಟೆಂಡರನ್ನು ಸಲ್ಲಿಸಲು ಕೊನೆಪಕ್ಷ ಒಂದು ವಾರದ ಕಾಲಾವಕಾಶವನ್ನು ಕೊಟ್ಟ ನಂತರ, ತಾಲ್ಲೂಕು ಪಂಚಾಯಿತಿಯ ಕಛೇರಿಯ ಸೂಚನಾ ಫಲಕದ ಮೇಲೆ ಪ್ರಕಟಿಸತಕ್ಕದ್ದು:
ಪರಂತು, ತಾಲ್ಲೂಕು ಪಂಚಾಯಿತಿಗೆ ಸೇರಿದ ಯಾವುದೇ ಚರ ಸ್ವತ್ತನ್ನು ಸಾರ್ವಜನಿಕ ಹರಾಜಿನ ಮೂಲಕ ಮಾರಾಟ ಮಾಡಲು ಪ್ರಸ್ತಾಪಿಸಿದ್ದಲ್ಲಿ, ಹಾಗೆ ಪ್ರಕಟಿಸಲಾದ ನೋಟೀಸನ್ನು ದಿನಪತ್ರಿಕೆಯಲ್ಲಿ ಪ್ರಕಟಿಸಬೇಕು ಮತ್ತು ಅದರಲ್ಲಿ ಅಂಥ ಹರಾಜು ಮಾರಾಟದ ದಿನಾಂಕ, ಸಮಯ ಮತ್ತು ಸ್ಥಳವನ್ನು ನಿರ್ದಿಷ್ಟಪಡಿಸತಕ್ಕದ್ದು.