ಒಂದು ಲಕ್ಷ ರೂಪಾಯಿಗಳ ಮೌಲ್ಯವನ್ನು ಮೀರುವ ಯಾವುದೇ ಸ್ಥಿರ ಸ್ವತ್ತಿನ ಗುತ್ತಿಗೆ, ಮಾರಾಟ ಅಥವಾ ಅಡಮಾನದ ಮೂಲಕ ವರ್ಗಾವಣೆಯು, ದಾನದ ಮೂಲಕ ವರ್ಗಾವಣೆ, ವಿನಿಮಯದ ಮೂಲಕ ವರ್ಗಾವಣೆ ಅಂಥ ವರ್ಗಾವಣೆಗಾಗಿ ಜಿಲ್ಲಾ ಪಂಚಾಯತಿಯ ಪೂರ್ವಾನುಮೋದನೆಯನ್ನು ಪಡೆದ ಹೊರತು ಸಿಂಧುವಾಗತಕ್ಕದ್ದಲ್ಲ. ತಾಲ್ಲೂಕು ಪಂಚಾಯಿತಿಯ ಸ್ಥಿರ ಸ್ವತ್ತಿನ ಪ್ರತಿಯೊಂದು ಗುತ್ತಿಗೆ, ಮಾರಾಟ, ಅಡಮಾನ ಅಥವಾ ಇತರೆ ವರ್ಗಾವಣೆಯ ಪತ್ರವು ಅನುಸೂಚಿಯಲ್ಲಿ ಗೊತ್ತುಪಡಿಸಿದ ಸಂಬಂಧಿಸಿದ ನಮೂನೆಯಲ್ಲಿ ಇರತಕ್ಕದ್ದು.
Loading…