ಕಾರ್ಯನಿರ್ವಾಹಕ ಅಧಿಕಾರಿಯು ತಾಲ್ಲೂಕು ಪಂಚಾಯಿತಿಯ ಪರವಾಗಿ ಕರಾರು ಪತ್ರವನ್ನು ಅಥವಾ ಒಪ್ಪಂದ ಪತ್ರವನ್ನು ಬರೆದುಕೊಡತಕ್ಕದ್ದು. ಅಂಥ ಕರಾರು ಅಥವಾ ಒಪ್ಪಂದದ ಮೌಲ್ಯವು ಐದು ಸಾವಿರ ರೂಪಾಯಿಗಳನ್ನು ಮೀರಿದಿದ್ದಲ್ಲಿ, ಅಧ್ಯಕ್ಷರ ಪೂರ್ವಾನುಮೋದನೆಯೊಂದಿಗೆ ಅಂಥ ಕರಾರನ್ನು ಅಥವಾ ಒಪ್ಪಂದವನ್ನು ಅವರು ಬರೆದುಕೊಡತಕ್ಕದ್ದು. ಇತರ ಎಲ್ಲಾ ಸಂದರ್ಭಗಳಲ್ಲಿ, ತಾಲ್ಲೂಕು ಪಂಚಾಯಿತಿಯ ಮಂಜೂರಾತಿ ಪಡೆದ ನಂತರವೇ ಅವರು ಕರಾರನ್ನು ಅಥವಾ ಒಪ್ಪಂದವನ್ನು ಬರೆದುಕೊಡತಕ್ಕದ್ದು.
Loading…