ನಮೂನೆ I (5ನೇ ನಿಯಮಗಳನ್ನು ನೋಡಿ) ಮಾರಾಟದ ಮೂಲಕ ವರ್ಗಾವಣೆ
ಸನ್ ಎರಡು ಸಾವಿರದ . . . . . . . . . . . . . . . . .ನೆ ಇಸವಿ. . . . . . . . . ಮಾಹೆ. . . . . .. . .
.ದಿನದಂದು. . . . . .. . . . . . . . . . . ಅವರ ಮಗನಾದ. . . . . . . . . . . . . . . . . . .ನಿವಾಸಿಯಾದ
ಶ್ರೀ . . . . . . . . . . . . . . .ಅವರು (ಇಲ್ಲಿ ಇನ್ನು ಮುಂದೆ “ಮಾರುವವರು” ಎಂದು ಕರೆಯಲಾಗಿದೆ. ಈ ಪದವು ಸಂದರ್ಭವು ಅವಕಾಶ ನೀಡಿದಲ್ಲಿ ಅವರ ವಾರಸುದಾರರು, ನಿರ್ವಾಹಕರು, ಆಡಳಿತಗಾರರು ಮತ್ತು ಕಾನೂನು ಸಮ್ಮತ ಪ್ರತಿನಿಧಿಗಳನ್ನು ಒಳಗೊಳ್ಳುತ್ತದೆ) ಒಬ್ಬ ಪಕ್ಷಕಾರರಾಗಿಯೂ ಮತ್ತು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 (1993ರ ಕರ್ನಾಟಕ ಅಧಿನಿಯಮ ಸಂಖ್ಯೆ 14) ಇದರ ಮೇರೆಗೆ ರಚಿಸಲಾದ . . . . . . . . . ನ . . . . . . . . . . . . . . . . . . . ತಾಲ್ಲೂಕು ಪಂಚಾಯಿತಿಯು (ಇಲ್ಲಿ ಇನ್ನು ಮುಂದೆ “ಖರೀದಿದಾರರು” ಎಂದು ಕರೆಯಲಾಗಿದೆ. ಈ ಪದವು ಸಂದರ್ಭವು ಅವಕಾಶ ನೀಡಿದಲ್ಲಿ ಅವರ ಅಧಿಕಾರ ಸ್ಥಾನದ ಉತ್ತರಾಧಿಕಾರಿ ಮತ್ತು ಹಸ್ತಾಂತರ ಪಡೆದವರನ್ನು ಒಳಗೊಳ್ಳುತ್ತದೆ.) ಇನ್ನೊಂದು ಪಕ್ಷಕಾರರಾಗಿ ತಮ್ಮಗಳ ನಡುವೆ ಮಾಡಿಕೊಂಡ ಕ್ರಯಪತ್ರ ಕ್ರಮ ಏನೆಂದರೆ.-
ಮಾರುವವರು ಈ ಪತ್ರದ ಅನುಸೂಚಿಯಲ್ಲಿ ವಿವರಿಸಲಾದ ಯಾವತ್ತು ಭೂಮಿ ಮತ್ತು ಆವರಣಗಳಿಗೆ ಸಮರ್ಪಕವಾಗಿ ಮತ್ತು ಸಾಕಷ್ಟು ಹಕ್ಕುಳ್ಳವರಾಗಿರುವುದರಿಂದ;
ಮತ್ತು ಖರೀದಿದಾರರು ತಮ್ಮ ಅಧಿಕಾರವನ್ನು ಚಲಾಯಿಸಿ ಈ ಮೂಲಕ ಮಂಜೂರು ಮಾಡಲು, ವರ್ಗಾಯಿಸಲು ಮತ್ತು ಹಸ್ತಾಂತರಗೊಳಿಸಲು ಉದ್ದೇಶಿಸಲಾದ ಸದರಿ ಭೂಮಿ ಮತ್ತು ಆವರಣಗಳನ್ನು ಅದರ ಸಂಬಂಧದಲ್ಲಿ ಸಂದಾಯವಾಗತಕ್ಕ ಜೋಡಿ ಕಂದಾಯ ಯಾವುದಾದರೂ ಇದ್ದರೆ ಅದಕ್ಕೆ ಒಳಪಟ್ಟು ಮತ್ತು ಅನ್ಯಥಾ ಯಾವುದೇ ಋಣಭಾರದಿಂದ ಮುಕ್ತವಾಗಿ ರೂಪಾಯಿಯ ಬೆಲೆಗೆ ಖರೀದಿಸಲು ಮಾರುವವನೊಂದಿಗೆ ಒಪ್ಪಂದ ಮಾಡಿಕೊಂಡಿರುವುದರಿಂದ;
ಈಗ ಈ ಪತ್ರವು ಸದರಿ ಒಪ್ಪಂದಕ್ಕೆ ಅನುಗುಣವಾಗಿ ಮತ್ತು ಖರೀದಿಸುವವರು ಮಾರುವವರಿಗೆ ಅಥವಾ ಈ ಪತ್ರ ಬರೆಯುವುದಕ್ಕೆ ಮುಂಚೆ ಸಂದಾಯ ಮಾಡಿದ . . . . . . . . . . . ರೂಪಾಯಿಯ ಮೊಬಲಗಿಗೆ ಪ್ರತಿಫಲವಾಗಿ (ಸದರಿ ಮೊಬಲಗನ್ನು ಸ್ವೀಕರಿಸಿದ ಬಗ್ಗೆ ಮಾರಾಟಗಾರರು ಈ ಮೂಲಕ ಒಪ್ಪಿಕೊಂಡಿದ್ದಾರೆ) ಮಾರಾಟಗಾರರು ಈ ಮೂಲಕ . . . . . . . . . . . ನಲ್ಲಿ ಇರುವ ಮತ್ತು ಈ ಕೆಳಗೆ ಬರೆಯಲಾದ ಅನುಸೂಚಿಯಲ್ಲಿ ಹೆಚ್ಚು ನಿರ್ದಿಷ್ಟವಾಗಿ ವಿವರಿಸಲಾದ ಮತ್ತು ಅದರಲ್ಲಿ ನಿರ್ಮಿಸಲಾದ ಗೃಹವಾಟಿಕೆ ಅಥವಾ ನಿವಾಸದೊಂದಿಗೆ ಸಾಮಾನ್ಯವಾಗಿ. . . . . . . .ಎಂದು ಕರೆಯಲ್ಪಡುವ ಭೂಮಿಯ ಎಲ್ಲಾ ಭಾಗವನ್ನು ಅದರಲ್ಲಿರುವ ಎಲ್ಲ ಕಟ್ಟಡಗಳು, ಗೋದಾಮುಗಳು, ಮರಗಳು, ಮೈದಾನ, ಸಾಮಾನ್ಯ ಬದುಗಳು, ತಗ್ಗುಗಳು, ಬೇಲಿಗಳು, ದಾರಿಗಳು, ಜಲಮಾರ್ಗಗಳು, ಸ್ವಾತಂತ್ರ್ಯಗಳು, ವಿಶೇಷ ಹಕ್ಕುಗಳ ಅಧಿಕಾರಗಳು, ಅನುಭೋಗ ಹಕ್ಕುಗಳು, ಸೌಲಭ್ಯಗಳು ಯಾವುದೇ ಬಗೆಯ ಲಗತ್ತುಗಳು ಮತ್ತು ಅದಕ್ಕೆ ಯಾವುದೇ ರೀತಿಯಲ್ಲಿ ಲಗತ್ತಾದ ಅಥವಾ ಇದಕ್ಕೆ ಮುಂದೆ ಅದರೊಂದಿಗೆ ಸ್ವಾಧೀನದಲ್ಲಿ ಅನುಭೋಗಿಸುತ್ತಿದ್ದ ಯಾವುದೇ ಗೃಹವಾಟಿಕೆ ಮತ್ತು ಆವರಣದಲ್ಲಿ ಮತ್ತು ಮಾರಾಟಗಾರನು ಹೊಂದಿದ್ದ ಎಲ್ಲಾ ಸಂಪದ ಹಕ್ಕು ಮೂಲ, ಹಿತಾಸಕ್ತಿ, ಸ್ವತ್ತು, ಕ್ಲೇಮು ಮತ್ತು ತಗಾದೆಗಳು ಸೇರಿ, ಮಾರಾಟಗಳನ್ನು ಈ ಮೂಲಕ ಖರೀದಿದಾರರಿಗೆ ನೀಡಿ, ವರ್ಗಾಯಿಸಿ, ಹಸ್ತಾಂತರ ಮಾಡಿದ್ದಾರೆ ಮತ್ತು ಮೇಲೆ ಹೇಳಿದಂತೆ ಖರೀದಿದಾರರಿಗೆ ಮಾರಾಟಗಾರನು ಈ ಮೂಲಕ ನೀಡಿದ ವರ್ಗಾಯಿಸಿದ ಮತ್ತು ಹಸ್ತಾಂತರಗೊಳಿಸಿದ ಆವರಣವನ್ನು ನೀಡಲು, ವರ್ಗಾಯಿಸಲು ಮತ್ತು ಹಸ್ತಾಂತರಗೊಳಿಸಲು ತಕ್ಕ ಹಕ್ಕನ್ನು ಹೊಂದಿರುತ್ತಾರೆಂದು ಮತ್ತು ಇನ್ನು ಮುಂದೆ ಎಲ್ಲಾ ಸಮಯಗಳಲ್ಲೂ ಖರೀದಿದಾರರು ಸದರಿ ಆವರಣವನ್ನು ಯಾವುದೇ ಬಗೆಯ ಋಣಭಾರವಿಲ್ಲದೆ ಶಾಂತವಾಗಿ ಮತ್ತು ನಿರೂಪಾಧಿತವಾಗಿ ಸ್ವಾಧೀನ ಹೊಂದತಕ್ಕದ್ದು ಹಾಗೂ ಅನುಭವಿಸತಕ್ಕದ್ದೆಂದು ಮತ್ತು ಮಾರಾಟಗಾರ ಅಥವಾ ಇತರ ವ್ಯಕ್ತಿಗಳಿಂದ ಕಾನೂನುಬದ್ಧ ಹೊರಹಾಕುವಿಕೆ ತಡೆ, ಕ್ಲೇಮು ಅಥವಾ ತಗಾದೆ ಇಲ್ಲದೆ ಅದರ ಬಾಡಿಗೆ ಮತ್ತು
ಲಾಭಗಳನ್ನು ಪಡೆದುಕೊಳ್ಳಬಹುದೆಂದು ಒಡಂಬಡಿಕೆ ಮಾಡಿಕೊಂಡಿರುತ್ತಾರೆ. ಅಷ್ಟೇ ಅಲ್ಲದೆ ಸದರಿ ಆವರಣದಲ್ಲಿ ಅವುಗಳಲ್ಲಿ ಯಾವುದಾದರೂ ಅಥವಾ ಯಾವುದೇ ಭಾಗದಲ್ಲಿ ಮಾರಾಟಗಾರನಿಂದ ಅಥವಾ ಆತನ ನ್ಯಾಸ ರೂಪವಾಗಿ ಅಥವಾ ಆತನ ಯಾರೇ ಪೂರ್ವಿಕರಿಂದ ಅಥವಾ ಅವರ ಮೇರೆಗೆ ಯಾವುದೇ ಸರಪದ ಹಾಗೂ ಹಿತಾಸಕ್ತಿಯನ್ನು ಕಾನೂನುಬದ್ಧವಾಗಿ ಹಾಗೂ ನ್ಯಾಯಸಮ್ಮತವಾಗಿ ಕ್ಲೇಮು ಮಾಡುತ್ತಿರುವ ಮಾರಾಟಗಾರ ಅಥವಾ ಇತರ ಎಲ್ಲಾ ವ್ಯಕ್ತಿಗಳು ಕಾಲದಿಂದ ಕಾಲಕ್ಕೆ ಮತ್ತು ಇನ್ನು ಮುಂದೆ ಯಾವುದೇ ಸಮಯದಲ್ಲಿ ಖರೀದಿದಾರರು ಕೋರಿಕೆ ಮತ್ತು ವೆಚ್ಚದಲ್ಲಿ ಸದರಿ ಆವರಣವನ್ನು ಮತ್ತು ಅದರ ಪ್ರತಿಯೊಂದು ಭಾಗವನ್ನು ಸಮಂಜಸವಾಗಿ ಅಗತ್ಯವಾಗಿರುವಂತೆ ಮೇಲೆ ಹೇಳಿದ ರೀತಿಯಲ್ಲಿ ಖರೀದಿದಾರರಿಗೆ ಹೆಚ್ಚು ಸಮರ್ಪಕವಾಗಿ ವಹಿಸಿಕೊಡುವುದಕ್ಕೆ ಬೇಕಾದ ಯಾವುದೇ ಬಗೆಯ ಕೃತ್ಯಗಳನ್ನು, ಪತ್ರಗಳನ್ನು ಮತ್ತು ವಿಷಯಗಳನ್ನು ಬರೆಯಿಸಿಕೊಡುವುದಾಗಿಯೂ, ನೋಂದಾಯಿಸಿಕೊಡುವುದಾಗಿಯೂ ಅಥವಾ ಬರೆಯಿಸಿಕೊಡುವಂತೆ, ನೋಂದಾಯಿಸಿಕೊಡುವಂತೆ ಮಾಡುವುದಾಗಿಯೂ ಈ ಮೂಲಕ ಒಡಂಬಡಿಕೆ ಮಾಡಿಕೊಂಡಿರುತ್ತಾರೆ.
ಇದಕ್ಕೆ ಸಾಕ್ಷಿಯಾಗಿ ಮಾರಾಟಗಾರರು ಮೇಲೆ ಹೇಳಿದ ವರ್ಷ, ದಿನಾಂಕ, ಸಮಯದಂದು ಸಹಿ ಹಾಕಿ, ತಮ್ಮ ಮೊಹರನ್ನು ಹಾಕಬೇಕಾಗಿರುತ್ತದೆ.
ಇದರ ಮೇಲೆ ಉಲ್ಲೇಖಿಸಲಾದ ಅನುಸೂಚಿ. . . . . . . . . . . . . . ಜಿಲ್ಲೆಯ. . . . . . . . . . . . . . . .
. . . . . .ಗ್ರಾಮದಲ್ಲಿ ಉತ್ತರಕ್ಕೆ. . . . . . . . . . . . . . . .ದಕ್ಷಿಣಕ್ಕೆ. . . . . . .. . . . . ಪೂರ್ವಕ್ಕೆ. . . . . . . .
. . . . .. ಪಶ್ಚಿಮಕ್ಕೆ. . . . . . . . . . . . .ಚಕ್ಕುಬಂದಿ ಇರುವ . . . . . . . .ವಿಸ್ತೀರ್ಣವುಳ್ಳ (ಅಳತೆ ಅಷ್ಟೆ
ಇರಬಹುದು ಅಥವಾ ಹೆಚ್ಚು ಕಡಿಮೆ ಇರಬಹುದು). . . . ಸರ್ವೆ ನಂಬರಿನ ಯಾವತ್ತು ಭೂಮಿ.
. . . . . . . . . . . . . . . . . ಸಮಕ್ಷಮ ಮೇಲೆ ಹೇಳಿದವರು ಸಹಿ ಹಾಕಿ, ಮುದ್ರೆ ಹಾಕಿ ವಶಾವಣೆ ಮಾಡಿರುತ್ತಾರೆ.