ನಮೂನೆ Iv
ದಾನದ ಮೂಲಕ ವರ್ಗಾವಣೆ
ಸನ್ ಎರಡು ಸಾವಿರದ. . . . . . . . . . . . . . . ಮಾಹೆ . . . . . . . . . . . . .ದಿನದಂದು. . . . . . . . . . . . ನಲ್ಲಿ ವಾಸಿಸುತ್ತಿರುವ . . . . . . . . . ಅವರ ಮಗನಾದ . . . . . . . . . . . . . . . . ಅವರು (ಇಲ್ಲಿ ಇನ್ನು ಮುಂದೆ “ದಾನ ನೀಡುವವರು” ಎಂದು ಕರೆಯಲಾಗಿದೆ. ಈ ಪದವು ಸಂದರ್ಭವು ಅವಕಾಶ ನೀಡಿದಲ್ಲಿ ಅವರ ವಾರಸುದಾರರು, ನಿರ್ವಾಹಕರು ಮತ್ತು ಕಾನೂನು ಸಮ್ಮತ ಪ್ರತಿನಿಧಿಗಳನ್ನು ಒಳಗೊಳ್ಳುತ್ತದೆ) ಒಬ್ಬ ಪಕ್ಷಕಾರರಾಗಿಯೂ ಮತ್ತು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 (1993ರ ಕರ್ನಾಟಕ ಅಧಿನಿಯ ಸಂಖ್ಯೆ 14) ಇದರ ಮೇರೆಗೆ ರಚಿಸಲಾದ. . . . . . . . . . . . . . . ತಾಲ್ಲೂಕು ಪಂಚಾಯತಿಯು (ಇಲ್ಲಿ ಇನ್ನು ಮುಂದೆ “ದಾನ ಪಡೆಯುವವರು” ಎಂದು ಕರೆಯಲಾಗಿದೆ. ಈ ಪದವು ಸಂದರ್ಭವು ಅವಕಾಶ ನೀಡಿದಲ್ಲಿ ಅವರ ಅಧಿಕಾರ ಸ್ಥಾನದ ಉತ್ತರಾಧಿಕಾರಿ ಮತ್ತು ಹಸ್ತಾಂತರ ಪಡೆದವರನ್ನು ಒಳಗೊಳ್ಳುತ್ತದೆ) ಇನ್ನೊಂದು ಪಕ್ಷಕಾರರಾಗಿಯೂ, ತಮ್ಮಗಳ ನಡುವೆ ಮಾಡಿಕೊಂಡ ದಾನಪತ್ರ ಕ್ರಮ ಏನೆಂದರೆ.-
ದಾನ ನೀಡುವವರು ಇಲ್ಲಿ ಇನ್ನು ಮುಂದೆ ವಿವರಿಸಲಾದ ಮತ್ತು ಈ ಮೂಲಕ ನೀಡಲು, ವರ್ಗಾಯಿಸಲು ಮತ್ತು ಹಸ್ತಾಂತರಗೊಳಿಸಲು ಉದ್ದೇಶಿಸಲಾದ ಯಾವತ್ತು ಭೂಮಿಗೆ ಯಾವುದೇ ಋಣಭಾರದಿಂದ ಮುಕ್ತವಾಗಿ, ಪರ್ಯಾಪ್ತವಾಗಿ ಮತ್ತು ಸಮರ್ಪಕವಾಗಿ ಹಕ್ಕುದಾರರಾಗಿರುವುದರಿಂದ;
ಮತ್ತು ದಾನ ನೀಡುವವರು ಈಗಿರುವ ಮತ್ತು ಮುಂಬರುವ ತೆರಿಗೆಗಳನ್ನು, ಋಣಭಾರಗಳನ್ನು ಕಂದಾಯ ನಿರ್ಣಯಗಳನ್ನು ಮತ್ತು ನೆಲ ಬಾಡಿಗೆಗಳನ್ನು ದಾನ ಪಡೆಯುವವರು ಸಂದಾಯ ಮಾಡುವುದಕ್ಕೊಳಪಟ್ಟು ಸದರಿ ಯಾವತ್ತು ಭೂಮಿ ಮತ್ತು ಆವರಣಗಳನ್ನು ದಾನವಾಗಿ ದಾನ ಪಡೆಯುವವರಿಗೆ ವರ್ಗಾಯಿಸಲು ಒಪ್ಪಿಕೊಂಡಿರುವುದರಿಂದ ಮತ್ತು ದಾನ ಪಡೆಯುವವರು ಅದನ್ನು ಅಂಥ ಷರತ್ತಿಗೊಳಪಟ್ಟು ಸ್ವೀಕರಿಸಲು ಒಪ್ಪಿರುವುದರಿಂದ;
ಮತ್ತು ಸದರಿ ಭೂಮಿ ಮತ್ತು ಆವರಣಗಳು ಮುದ್ರಾಂಕ ಶುಲ್ಕದ ಉದ್ದೇಶಕ್ಕಾಗಿ. . . . . . . . . . . . . . . .
ರೂಪಾಯಿ ಮೌಲ್ಯವಾಗಿರುವುದರಿಂದ ಇದಕ್ಕೆ ಸಾಕ್ಷಿಯಾಗಿ ಪತ್ರವು. . . . . . . . . . . . ಜಿಲ್ಲೆಯ. . . . . . . . . . . . .ಗ್ರಾಮದಲ್ಲಿರುವ ಈ ಕೆಳಗೆ ಬರೆದು ಅನುಸೂಚಿಯಲ್ಲಿ ಹೆಚ್ಚು ನಿರ್ದಿಷ್ಟವಾಗಿ ವಿವರಿಸಲಾದ . . . . . . . . . . ಸರ್ವೆ ನಂಬರಿನಲ್ಲಿರುವ ಯಾವತ್ತು ಭೂಮಿಯನ್ನು ಅದರಲ್ಲಿರುವ ಎಲ್ಲಾ ಕಟ್ಟಡಗಳು, ಮರಗಳು, ಮೈದಾನಗಳು, ಸ್ವಾತಂತ್ರ್ಯಗಳು, ವಿಶೇಷ ಹಕ್ಕುಗಳು, ಅನುಭೋಗ ಹಕ್ಕುಗಳು, ಸೌಲಭ್ಯಗಳು ಅದಕ್ಕೆ ಯಾವುದೇ ರೀತಿಯಲ್ಲಿ ಇದಕ್ಕೆ ಮುಂದೆ ಅದಕ್ಕೆ ಸಂಬಂಧಿಸಿದ ಅಥವಾ ಆ ತರುವಾಯ ಅದರೊಂದಿಗೆ ಅನುಭೋಗಿಸಲಾದ ಕಟ್ಟಡಗಳು, ಆವರಣಗಳು ಅಥವಾ ಅದರಲ್ಲಿ ಯಾವುದಾದರೂ ಒಂದರೊಂದಿಗೆ ಮತ್ತು ಎಲ್ಲಾ ಸಂಪದ ಮತ್ತು ಸದರಿ ಆವರಣದಲ್ಲಿ ಮತ್ತು ಅದರ ಮೇಲೆ ದಾನ ನೀಡುವವರು ಎಲ್ಲಾ ಸಂಪದ ಹಕ್ಕು ಮೂಲ, ಹಿತಾಸಕ್ತಿ, ಸ್ವತ್ತು ಕ್ಲೇಮು ಮತ್ತು ಸ್ವತ್ತು ತಗಾದೆ ಯಾವುದಾದರೂ ಇದ್ದರೆ ದಾನ ಪಡೆಯುವವರಿಗೆ ಈ ಮೂಲಕ ದಾನ ನೀಡಿರುತ್ತಾರೆ, ವರ್ಗಾಯಿಸಿರುತ್ತಾರೆ ಹಾಗೂ ಹಸ್ತಾಂತರಗೊಳಿಸಿರುತ್ತಾರೆ ಮತ್ತು ದಾನ ಪಡೆಯುವವರು ಸದರಿ ಭೂಮಿಯನ್ನು ಈ ಮೂಲಕ ಸ್ವೀಕರಿಸಿರುತ್ತಾರೆ ಮತ್ತು ಈ ಮೂಲಕ ನೀಡಲಾದ, ವರ್ಗಾಯಿಸಲಾದ ಮತ್ತು ಹಸ್ತಾಂತರಗೊಳಿಸಲಾದ ಯಾವತ್ತು ಭೂಮಿಯನ್ನು ದಾನ ಪಡೆದು ಸರ್ವಥಾ ಹೊಂದಿದ್ದು ಅದರ ಧಾರಕರಾಗಿರಬಹುದಾಗಿರುತ್ತದೆ ಮತ್ತು ದಾನ ನೀಡುವವರು ತಮಗೆ ಈ ಮೂಲಕ ನೀಡಲಾದ, ವರ್ಗಾಯಿಸಲಾದ ಮತ್ತು ಹಸ್ತಾಂತರಗೊಳಿಸಲಾದ ಆವರಣವನ್ನು ನೀಡಲು, ವರ್ಗಾಯಿಸಲು ಮತ್ತು ಹಸ್ತಾಂತರಿಸಲು ಉತ್ತಮ ಹಕ್ಕು ಇರುತ್ತದೆಂದು ಮತ್ತು ದಾನ ಪಡೆದವರು ಇನ್ನು ಮುಂದೆ ಎಲ್ಲಾ ಕಾಲಕ್ಕೂ ಸದರಿ ಆವರಣಗಳನ್ನು ಎಲ್ಲಾ ಋಣಭಾರದಿಂದ ಮುಕ್ತರಾಗಿ ಯಾವುದೇ ಕಾನೂನು ಬದ್ಧ ಒಕ್ಕಲೆಬ್ಬಿಸುವಿಕೆ, ಅಡೆತಡೆ, ಕ್ಲೇಮು ಮತ್ತು ತಗಾದೆಗಳನ್ನು ದಾನ ನೀಡುವವರಿಂದ ಅಥವಾ ಅವರಿಂದ ವಿಶ್ವಸ್ಥರಾಗಿ ಕ್ಲೇಮು ಮಾಡುತ್ತಿರುವ ಯಾವುದೇ ವ್ಯಕ್ತಿಯಿಂದಾಗಿ ಭಾದೆಗೊಳಗಾಗದೇ ಇನ್ನು ಮುಂದೆ ಶಾಂತಿಯುತವಾಗಿ ಮತ್ತು ನಿರುಪಾಧಿಕವಾಗಿ ಸದರಿ ಆವರಣದ ಸ್ವಾಧೀನದಲ್ಲಿದ್ದುದನ್ನು ಅನುಭವಿಸಬಹುದಾಗಿರುತ್ತದೆ ಎಂದು ದಾನ ಪಡೆದವರೊಂದಿಗೆ ಒಡಂಬಡಿಕೆ ಮಾಡಿಕೊಂಡಿರುತ್ತಾರೆ.
ಅಷ್ಟೆ ಅಲ್ಲದೆ ದಾನ ನೀಡುವವರು ಅಥವಾ ಅವರ ಯಾರೇ ಪೂರ್ವಜರಿಂದ ಮತ್ತು ಅದರ ವಿಶ್ವಸ್ಥರಾಗಿ ಅಥವಾ ಅದರ ಮೇರೆಗೆ ಸದರಿ ಆವರಣದಲ್ಲಿ ಅಥವಾ ಅದರ ಯಾವುದೇ ಭಾಗದಲ್ಲಿ ಯಾವುದೇ ಸಂಪದ ಅಥವಾ ಹಿತಾಸಕ್ತಿಯನ್ನು ಹೊಂದಿರುವ ಅಥವಾ ಕಾನೂನು ಬದ್ಧವಾಗಿ ಇಲ್ಲವೇ ನ್ಯಾಯಬದ್ಧವಾಗಿ ಕೇಮು ಮಾಡುತ್ತಿರುವ ಎಲ್ಲಾ ವ್ಯಕ್ತಿಗಳು ಕಾಲಕಾಲಕ್ಕೆ ಎಲ್ಲಾ ಕಾಲದಲ್ಲೂ ದಾನ ನೀಡುವವನ ಮನವಿ ಮತ್ತು ವೆಚ್ಚದಲ್ಲಿ, ಮೇಲೆ ಹೇಳಿದ ರೀತಿಯಲ್ಲಿ ಅಥವಾ ಸಮಂಜಸವಾಗಿ ಅಗತ್ಯವಾಗಿರತಕ್ಕ ರೀತಿಯಲ್ಲಿ ದಾನ ಪಡೆಯುವವನಿಗೆ ಸದರಿ ಆವರಣದ ಮತ್ತು ಅದರ ಎಲ್ಲಾ ಭಾಗದ ಪೂರ್ಣ ಸ್ವಾಧೀನವನ್ನು ಸಮರ್ಪಕವಾಗಿ ಒದಗಿಸಿಕೊಡಲು ಬೇಕಾದಂತಹ ಎಲ್ಲಾ ಪತ್ರಗಳು ಮತ್ತು ವಿಷಯಗಳನ್ನು ಬರೆದುಕೊಡಲು ಮತ್ತು ನೋಂದಾಯಿಸಿಕೊಡಲು ಅಥವಾ ಬರೆದುಕೊಡುವಂತೆ ಮತ್ತು ನೋಂದಾಯಿಸಿಕೊಡುವಂತೆ ಮಾಡಲು ಒಪ್ಪಿರುತ್ತಾರೆ.
ಇದಕ್ಕೆ ಸಾಕ್ಷಿಯಾಗಿ ಮೇಲೆ ಪ್ರಾರಂಭದಲ್ಲಿ ಹೇಳಲಾದ ದಿನಾಂಕ ಮತ್ತು ವರ್ಷದಲ್ಲಿ ದಾನ ನೀಡುವವರು ಈ ಪತ್ರಕ್ಕೆ ಸಹಿ ಹಾಕಿ ಮುದ್ರೆ ಒತ್ತಿರುತ್ತಾರೆ ಮತ್ತು ದಾನ ಪಡೆಯುತ್ತಿರುವ ತಾಲ್ಲೂಕು ಪಂಚಾಯತಿಯ ಸಾಮಾನ್ಯ ಮೊಹರು ಒತ್ತಲಾಗಿರುತ್ತದೆ.
ಮೇಲೆ ಉಲ್ಲೇಖಿಸಲಾದ ಅನುಸೂಚಿ.-
. . . . . . . . . . . . . . . . ಜಿಲ್ಲೆಯ. . . . . . . . . . . . . . . . . . . . .ಗ್ರಾಮದಲ್ಲಿ ಉತ್ತರಕ್ಕೆ . . . . . . . .
. .ದಕ್ಷಿಣಕ್ಕೆ. . . . . . . . . . . . . . . . .. . ಪೂರ್ವಕ್ಕೆ . . . . . . . . ಪಶ್ಚಿಮಕ್ಕೆ. . . . . . . . . . . . . .ಚಕ್ಕುಬಂದಿ ಇರುವ . . . . . . . . . . .ವಿಸ್ತೀರ್ಣವುಳ್ಳ (ಅಳತೆ ಅಷ್ಟೆ ಇರಬಹುದು ಅಥವಾ ಹೆಚ್ಚು ಕಮ್ಮಿ ಇರಬಹುದು).
. . . . . . . . . . . . . . . . . ಸರ್ವೆ ನಂಬರಿನ ಯಾವತ್ತು ಭೂಮಿ
. . . . . . . . . . . . . . . . . .ಅವರ ಸಮಕ್ಷಮ ಮೇಲೆ ಹೆಸರಿಸಲಾದವರು ಸಹಿ ಹಾಕಿ, ಮುದ್ರೆ ಒತ್ತಿ ವಶಾವಣೆ ಮಾಡಿರುತ್ತಾರೆ.
. . . . . . . . . . . . . . . .ಅವರ ಸಮಕ್ಷಮ ತಾಲ್ಲೂಕು ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಸಹಿ ಹಾಕಿರುತ್ತಾರೆ.
. . . . . . . . . . . . . . . . ಅವರ ಸಮಕ್ಷಮದಲ್ಲಿ ತಾಲ್ಲೂಕು ಪಂಚಾಯಿತಿಯ ಸಾಮಾನ್ಯ ಮೊಹರನ್ನು ಇದಕ್ಕೆ ಒತ್ತಲಾಗಿದೆ.