(ಎ) ಸಂಬಂಧಪಟ್ಟ ಗ್ರಾಮದ ಎಲ್ಲಾ ಗ್ರಾಮ ಪಂಚಾಯತಿಯ ಸದಸ್ಯರು, ಸಮಿತಿ ಕಾರ್ಯದರ್ಶಿ, ನಾಮನಿರ್ದೇಶಿತ ಸದಸ್ಯರು ಎಲ್ಲರನ್ನು ಒಳಗೊಂಡು ಗರಿಷ್ಠ 10 ಸದಸ್ಯರನ್ನೊಳಗೊಂಡ ಗ್ರಾಮ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿಯಾಗಿರಬೇಕು;
(ಬಿ) ಗ್ರಾಮ ಸಭೆಯಲ್ಲಿ ಸ್ಥಳೀಯ ಔಪಚಾರಿಕ /ಅನೌಪಚಾರಿಕ AOP ಸಂಸ್ಥೆಗಳ ಅಂದರೆ ರೈತ ಸಂಘಗಳು, ಮಹಿಳಾ ಸ್ವಸಹಾಯ ಸಂಘಗಳ ಪ್ರತಿನಿಧಿಗಳು ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಇದೇ ತೆರನಾದ ಸಂಘಟನೆಗಳಿಗೆ ಸೇರಿದ ಸದಸ್ಯರುಗಳನ್ನು ಗ್ರಾಮ ಸಭೆಯ ಮುಖಾಂತರ ನಾಮನಿರ್ದೇಶನ ಮಾಡುವುದು;
(A) ಗ್ರಾಮ ನೀರು. ಸರಬರಾಜು ಮತ್ತು ನೈರ್ಮಲ್ಯ ಸಮಿತಿಯ ಒಟ್ಟಾರೆ ಸದಸ್ಯರ ಸಂಖ್ಯೆಯಲ್ಲಿ ಶೇಕಡ 50 ರಷ್ಟು ಮಹಿಳಾ ಸದಸ್ಯರುಗಳಿರಬೇಕು;
(ಡಿ) ಗ್ರಾಮ ವೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿಯ ಒಟ್ಟಾರೆ ಸದಸ್ಯರ ಸಂಖ್ಯೆಯಲ್ಲಿ ಶೇಕಡ 20ರಷ್ಟು ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡದ ಸದಸ್ಯರುಗಳಿರಬೇಕು;
(ಇ) ಅಧ್ಯಕ್ಷರು ಗ್ರಾಮ ಪಂಚಾಯತಿಯ ಸದಸ್ಯರುಗಳು ಗ್ರಾಮ ಸಭೆಯ ಮುಖಾಂತರ ಆ ಗ್ರಾಮದ ಗ್ರಾಮ ಪಂಚಾಯತಿಯ ಒಬ್ಬ ಸದಸ್ಯರನ್ನು ಆಯ್ಕೆ ಮಾಡುವುದು.
(ಎಫ್) ಉಪಾಧ್ಯಕ್ಷರನ್ನು ಗ್ರಾಮ ಸಭೆಯ ಮುಖಾಂತರ ಆ ಗ್ರಾಮದ ಗ್ರಾಮ ಪಂಚಾಯತಿಯ ಒಬ್ಬ ಸದಸ್ಯನು ಅಥವಾ ಗ್ರಾಮ ಸಭೆಯ ಮುಖಾಂತರ ನಾಮನಿರ್ದೇಶನ ಮಾಡಿದ ಸದಸ್ಯಮ;
(ಜಿ) ಗ್ರಾಮ ಪಂಚಾಯತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಥವಾ ಗ್ರಾಮ ಪಂಚಾಯತಿಯ ಕಾರ್ಯದರ್ಶಿ ಗ್ರೇಡ್-1 ರವರು ಸಮಿತಿ ಸದಸ್ಯ ಕಾರ್ಯದರ್ಶಿಯಾಗಿರಬೇಕು; ಮತ್ತು (ಹೆಚ್) ಸಮಿತಿಯ ಯಾವೊಬ್ಬ ಸದಸ್ಯರಿಗೂ ಗೌರವಧನ ಅಥವಾ ಇತರೆ ಸಂಭಾವನೆ ಇರುವುದಿಲ್ಲ.