(1) ನೀರು ಸರಬರಾಜು ವ್ಯವಸ್ಥೆ, ಸಮಿತಿಯು ಈ ಕೆಳಕಂಡಂತೆ ಗ್ರಾಮದಲ್ಲಿ ನೀರು ಸರಬರಾಜನ್ನು ಮಾಡುವುದು.-
(i) ಸಾರ್ವಜನಿಕರಿಗೆ ಶುದ್ಧವಾದ ಮತ್ತು ಅಗತ್ಯ ಪ್ರಮಾಣದ ನೀರು ಸರಬರಾಜು ಮಾಡುವಲ್ಲಿ ಗ್ರಾಮ ಪಂಚಾಯತಿಗೆ ನೆರವಾಗುವುದು. ಕುಡಿಯುವ ನೀರಿಗಾಗಿ ನೀರಿನ ಮೂಲ, ಹರಿಯುವ ನದಿ, ಹೊಳೆಗಳನ್ನು ಸ್ವಚ್ಛಗೊಳಿಸುವ ಮತ್ತು ಸುಸ್ಥಿತಿಯಲ್ಲಿ ಇಡುವಲ್ಲಿ ಅಗತ್ಯ ಸಹಕಾರ ನೀಡಬೇಕು. ಗ್ರಾಮದ ವ್ಯಾಪ್ತಿಯಲ್ಲಿರುವ ಕೆರೆ, ಬಾವಿ, ತೊರೆ ಹಾಗೂ ಇತರೆ ಜಲಮಾರ್ಗಗಳನ್ನು ಆಗಿಂದ್ದಾಗೆಯೇ ದುರಸ್ಥಿಗೊಳಿಸಲು ಹಾಗೂ ನೀರನ್ನು ಪಡೆಯಲು ಗ್ರಾಮ ಪಂಚಾಯತಿಗೆ ನೆರವಾಗುವುದು. ಕುಡಿಯುವ ನೀರಿನ ಸ್ಥಾವರಗಳ ಮುಂದೆ ಹಾಗೂ ಕುಡಿಯುವ ನೀರಿಯ ಮೂಲ ಸ್ಥಾನದಲ್ಲಿ ಸ್ನಾನ ಮಾಡುವುದನ್ನು , ಬಟ್ಟೆ ಒಗೆಯುವುದನ್ನು, ಪ್ರಾಣಿಗಳನ್ನು ತೊಳೆಯುವುದನ್ನು ಅಥವಾ ಇತರೆ ಯಾವುದೇ ಕಾರಣಗಳಿಂದ ವೀರನ್ನು ಕಲುಷಿತಗೊಳಿಸುವುದನ್ನು ತಡೆಗಟ್ಟುವುದು; ಮತ್ತು
(ii) ಕುಡಿಯುವ ನೀರಿಗೆ ಸಂಬಂಧಿಸಿದ ಕಾಮಗಾರಿಗಳ ನಿರ್ವಹಣೆ, ಯಂತ್ರೋಪಕರಣಗಳನ್ನು ಸಲರಕ್ಷಣೆ ಮಾಡುವಲ್ಲಿ ಗ್ರಾಮ ಪಂಚಾಯತಿಗೆ ಸಹಕಾರ ನೀಡುವುದು . ನೀರನ್ನು ಸರಬರಾಜು ಮಾಡುವುದಕ್ಕೆ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳೂಡನೆ ಗ್ರಾಮ ಪಂಚಾಯತಿಯು ಕರಾರು ಮಾಡಿಕೂಂಡಿದ್ದಲ್ಲಿ ಸದರಿ ಸಂಸ್ಥೆ/ವ್ಯಕ್ತಿಗೆ ಅಗತ್ಯ ಸಹಾಕಾರ ನೀಡುವುದು.
(ii) ಕುಡಿಯುವ ನೀರಿನ ಅಭಾವದ ಪರಿಸ್ಥಿತಿಯಲ್ಲಿ ಖಾಸಗಿ ವ್ಯಕ್ತಿಗಳಿಗೆ ಸಂಬಂಧಿಸಿದ ಬಾವಿಗಳು, ಕೊಳವೆ ಬಾವಿಗಳು ಮತ್ತು ಇತರೆ ಜಲ ಮೂಲಗಳಿಂದ ಗ್ರಾಮಕ್ಕೆ ನೀರು ಒದಗಿಸಬೇಕಾದ ಸಂದರ್ಭದಲ್ಲಿ. ಖಾಸಗಿ. ಬೋರ್. Bex ಮಾಲೀಕರ ಮನವೊಲಿಸುವಲ್ಲಿ ಮತ್ತು ಕರಾರು ಪ್ರಕ್ರಿಯೆಯಲ್ಲಿ ಗ್ರಾಮ ಪಂಚಾಯತಿಗೆ ಅಗತ್ಯ ಸಹಾಕಾರ ನೀಡುವುದು.
(2) ಸ್ವಚ್ಚತೆ, ನೈರ್ಮಲ್ಯೀಕರಣ ಮತ್ತು wdo® ವ್ಯವಸ್ಥೆಯ ಬಗ್ಗೆ ,- ಗ್ರಾಮದಲ್ಲಿ ಸ್ವಚ್ಚತೆ ನೈರ್ಮಲ್ಯೀಕರಣಕ್ಕಾಗಿ ಗ್ರಾಮ ಪಂಚಾಯತಿಗೆ ಈ ಸಮಿತಿಯು ಕೆಳಕಂಡ ಅಂಶಗಳನ್ನು ಕಾರ್ಯಗತಗೊಳಿಸಲು ನೆರವಾಗುವುದು,-
ಗ್ರಾಮದ ಯಾವುದೇ ಕಟ್ಟಡ ಅಥವಾ ಗುಡಿಸಲಿನ ಮಾಲೀಕನು ಅಥವಾ ಅಂಗಡಿ (1) ಮಾಲೀಕನು ಶೌಚ ಗೃಹಗಳನ್ನು ಸ್ವಚ್ಚವಾಗಿ ನಿರ್ವಹಿಸಿದ್ದರೆ ಅಂಥವರಿಗೆ ಸ್ವಚ್ಚತೆಯ ಕುರಿತು ಅರಿವು ಮೂಡಿಸಲು ಯತ್ನಿಸುವುದು. ಸದರಿ ಅನೈರ್ಮಲ್ಯ ಪ್ರವೃತ್ತಿ ಮುಂದುವರೆದ ಸಂದರ್ಭದಲ್ಲಿ ಮಂದಿನ ಅಗತ್ಯ ಕ್ರಮಕ್ಕಾಗಿ ಗ್ರಾಮ ಪಂಚಾಯತಿಯ ಗಮನಕ್ಕೆ ತರುವುದು. ನಿಗದಿತ ಸಮಯದೊಳಗೆ ಸ್ವಚ್ಚತೆಯನ್ನು ಮೂಡಿಸುವಂತೆ ಅಗತ್ಯಪಡಿಸಬಹುದು ಹಾಗೂ ನಿಗದಿತ ಸಮಯದಲ್ಲಿ ಸಂಬಂಧಪಟ್ಟವರು ಸ್ವಚ್ಚ ಮಾಡದಿದ್ದರೆ ಗ್ರಾಮ ಪಂಂಚಾಯತಿಯ ವತಿಯಿಂದ ಆ ಪ್ರದೇಶವನ್ನು ಸ್ವಚ್ಛಗೊಳಿಸಿ, ಅದಕ್ಕೆ ಭರಿಸುವ ವೆಚ್ಚವನ್ನು ಸಂಬಂಧಪಟ್ಟ ಪ್ರದೇಶದ ಮಾಲೀಕರಿಂದ ತೆರಿಗೆ ಬಾಕಿ ರೂಪದಲ್ಲಿ ವಸೂಲಿ ಮಾಡಲು ನೆರವಾಗುವುದು;
ಆರೋಗ್ಯಕ್ಕೆ ಹಾನಿಕರವಾದ ಅಥವಾ ನೆರೆಹೊರೆಯವರಿಗೆ ಅಸಹ್ಯಕರವಾಗಿರುವ (ii) ಅಥವಾ ಉಪದ್ರವವಾಗುವಂತ ಚಟುವಟಿಕೆಗಳನ್ನು ನಡೆಸುವ ಅಥವಾ ನಿವೇಶನಗಳನ್ನು ಹೊಲಸು ಸಂಗ್ರಹಣೆಗಾಗಿ. ಉಪಯೋಗಿಸುವ ಅಥವಾ ನಿವೇಶನವನ್ನು ವಿರಂತರವಾಗಿ ನೀರು ವಿಲ್ಲಲು ಅವಕಾಶ ಮಾಡಿಕೂಟ್ಟಿರುವಂಥಹ ಸ್ಮಳದ ಮಾಲೀಕರಿಗೆ ಸೂಕ್ತ ತಿಳಿವಳಿಕೆ ನೀಡಿ ಅಂತಹ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸುವಂತೆ ಅರಿವು ಮೂಡಿಸುವುದು;
ಖಾಲಿ ನಿವೇಶನದಲ್ಲಿ ಸಾರ್ವಜನಿಕರಿಗೆ ತೊಂದರೆಯುಂಟು ಮಾಡುವ ಕುರುಚಲು (iii) ಗಿಡಗಳು, ಪಾಪುಸುಕಳ್ಳಿಗಳು ಇನ್ನಿತರ ಅಸಯ್ಯಕರವಾದ ಮತ್ತು ಅಪಾಯಕಾರಿಯಾಗಿ ಬೆಳದಿರುವ ಕಳೆಗಳನ್ನು ತೆಗೆದು ಹಾಕುವಂತೆ ಸಂಬಂಧಪಟ್ಟಿ ನಿವೇಶನದ ಮಾಲೀಕರಿಗೆ ತಿಳುವಳಿಕೆ ನೀಡುವುದು;
(iv) ಸಮಿತಿಯು ನೀಡುವ ಸೂಚನೆಯನ್ನು ನಿರಾಕರಿಸಿದರೆ ಅಂತಹ ಪ್ರದೇಶವನ್ನು ಗ್ರಾಮ ಪಂಚಾಯತಿಯಿಂದ ಸ್ವಚ್ಛಗೊಳಿಸುವುದು ಹಾಗೂ ಆ ನಿವೇಶನದ ಅನುಭವದಾರರಿಂದ ಸ್ವಚ್ಚಕ್ಕೆ ವೆಚ್ಚವಾದ ಮೊತ್ತವನ್ನು ತೆರಿಗೆ ಬಾಕಿ ರೂಪದಲ್ಲಿ ವಸೂಲಿ ಮಾಡುವಲ್ಲಿ ಗ್ರಾಮ ಪಂಚಾಯತಿಗೆ ನೆರವಾಗುವುದು.
ಗ್ರಾಮ ಪಂಚಾಯತಿ ವ್ಯಾಪ್ತಿಯ ದೇವಸ್ಥಾನ, ಚರ್ಚ್, ಮಸೀದಿ ಮುಂತಾದ (v) ಆರಾಧನೆಯ ಸ್ಮಳದಲ್ಲಿ ಜಾತ್ರೆಗಳನ್ನು, ಉತ್ಸವಗಳನ್ನು ನಡೆಸಿದಾಗ ಆ ಪ್ರದೇಶದ ಸ್ವಚ್ಛತೆ ನಿರ್ವಹಣೆಗಾಗಿ ಸಂಬಂಧಪಟ್ಟ ಧಾರ್ಮಿಕ ಟ್ರಸ್ಟ್ಗಳು ಮುಂಗಡ ಹಣವನ್ನು ಗ್ರಾಮ ಪಂಚಾಯತಿಗೆ ಪಾವತಿಸುವಂತೆ ನೋಡಿಕೊಳ್ಳುವುದು;
ಈ ವಿಷಯಕ್ಕೆ ಸಂಬಂಧಿಸಿದಂತೆ ಅವಶ್ಯವಿದ್ದಲ್ಲಿ ಸಂಬಂಧಪಟ್ಟ ತಹಶೀಲ್ದಾರ್ (vi) ಅಥವಾ ಜಿಲ್ಲಾಧಿಕಾರಿಯವರ ಮಧ್ಯಸ್ಥಿಕೆಯ ಮೂಲಕ ವಂತಿಗೆಯನ್ನು ಪಡೆದುಕೊಳ್ಳುವಂತೆ ಗ್ರಾಮ ಪಂಚಾಯತಿಗೆ ಸಲಹೆ ನೀಡುವುದು, ಗ್ರಾಮಗಳಲ್ಲಿ ನೀರು, ಕೊಳಚೆ. ನೀರು. ಸರಾಗವಾಗಿ ಹರಿದು ಹೋಗಲು (vii) ಅನುವಾಗುವಂತೆ _ ಪಂಚಾಯತಿ ಪ್ರದೇಶದಲ್ಲಿ ಅಥವಾ ಖಾಸಗಿ ವ್ಯಕ್ತಿಯ ಭೂಮಿಯಲ್ಲಿ ಮಾಲೀಕರ ಸಹಮತಿಯೊಡನೆ ಅಥವಾ ಅವರೊಡನೆ ಕರಾರು ಮಾಡಿಕೊಳ್ಳುವ ಮೂಲಕ WOH ವ್ಯವಸ್ಥೆಯನ್ನು ರೂಪಿಸುವಲ್ಲಿ ಗ್ರಾಮ ಪಂಚಾಯತಿಗೆ ಅನುವು ನೀಡುವುದು. ಗ್ರಾಮದಲ್ಲಿನ ಯಾವುದೇ ವ್ಯಕ್ತಿ ಅವರುಗಳ ಮನೆಯ ಮುಂದೆ ಇರುವ ಚರಂಡಿಯಲ್ಲಿ ಅಡ್ಡಿಯುಂಟು ಮಾಡಿದ್ದರೆ ಅಂತಹ ವ್ಯಕ್ತಿಗೆ ಸ್ವಚ್ಛತೆಯ ಕುರಿತು ಅರಿವು ಮೂಡಿಸುಲು ಯತ್ನಿಸುವುದು. ಸದರಿ ಅನೈರ್ಮಲ್ಯ ಪ್ರವೃತ್ತಿ ಮುಂದುವರೆದ ಸಂದರ್ಭದಲ್ಲಿ ಮುಂದಿನ ಅಗತ್ಯ ಕ್ರಮಕ್ಕಾಗಿ ಗ್ರಾಮ ಪಂಚಾಯತಿಯ ಗಮನಕ್ಕೆ ತರುವುದು;
ಜನ ವಸತಿ ಪ್ರದೇಶದಲ್ಲಿ ಮತ್ತು ಮುಖ್ಯ ರಸ್ತೆಗಳಲ್ಲಿ ಸ್ಮಾಪಿತವಾಗಿರುವ ಅಂಗಡಿಗಳು, (viii) ಹೋಟಿಲ್ಗಳು ಮತ್ತಿತರೆ ತಿಂಡಿ ತಿನಿಸಿನ ಅಂಗಡಿಗಳಲ್ಲಿ ಉಂಟಾಗುವ ತ್ಯಾಜ್ಯವನ್ನು ವೈಜ್ನಾನಿಕವಾಗಿ ವಿಂಗಡಣೆ, ಸಂಗ್ರಹಣೆ, ಸಾಗಾಣಿಕೆ. ಮತ್ತು ಸೂಕ್ತ ಸಂಸ್ಕರಣೆ ವ್ಯವಸ್ಥೆಯನ್ನು ರೂಪಿಸುವಲ್ಲಿ ಗ್ರಾಮ ಪಂಚಾಯತಿಗೆ ಅಗತ್ಯ ಸಹಕಾರ ನೀಡುವುದು; ಜನ ವಸತಿ ಪ್ರದೇಶದಲ್ಲಿ ಮತ್ತು ಮುಖ್ಯ ರಸ್ತೆಗಳಲ್ಲಿ ಸ್ಮಾಪಿತವಾಗಿರುವ ಕೋಳಿ (ix) ಮೀನು ಅಥವಾ ಇತರೆ ಮಾಂಸದ ಅಂಗಡಿಗಳಲ್ಲಿ ಉಂಟಾಗುವ ತ್ಯಾಜ್ಯವನ್ನು ವೈಜ್ನಾನಿಕವಾಗಿ ಸಂಗ್ರಹಿಸಿ, ಸಾಗಾಣಿಕೆ ಮತ್ತು ಸೂಕ್ತ ಸಂಸ್ಕರಣೆ ವ್ಯವಸ್ಥೆಯನ್ನು ರೂಪಿಸುವಲ್ಲಿ ಗ್ರಾಮ ಪಂಚಾಯತಿಗೆ ಅನುವು ಮಾಡಿ ಕೊಡುವುದು;
ಕುಡಿಯುವ ನೀರು ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಎಲ್ಲಾ ಬಳಕೆದಾರರ (x) ಶುಲ್ಕವನ್ನು ಕರ್ನಾಟಕ ರಾಜ್ಯ ನೈರ್ಮಲ್ಯ ಮತ್ತು ತ್ಯಾಜ್ಯ ನಿರ್ವಹಣಾ ನೀತಿ, ಕಾರ್ಯತಂತ್ರ ಹಾಗೂ ಉಪವಿಧಿಗಳು” ಅನ್ವಯ ನಿಗದಿಪಡಿಸಿ ವಸೂಲಾತಿ ಮಾಡುವಲ್ಲಿ ಗ್ರಾಮ ಪಂಚಾಯತಿಗೆ ಅಗತ್ಯ ಸಹಕಾರ ನೀಡಬೇಕು;
ಗ್ರಾಮದ ವ್ಯಾಪ್ತಿಯ ಮುಖ್ಯ ರಸ್ತೆಗಳಲ್ಲಿ ಅಪಘಾತದಿಂದ ಮೃತಪಡುವ ಯಾವುದೇ (xi) ಪ್ರಾಣಿಯ ದೇಹವನ್ನು ಹತ್ತಿರದಲ್ಲಿರುವ ಸರ್ಕಾರಿ ಅಥವಾ ಖಾಸಗಿ ಜಮೀನಿನಲ್ಲಿ ಹೂಳುವುದಕ್ಕೆ ವ್ಯವಸ್ಥೆ ಕಲ್ಪಿಸಲು ಅನುವು ಮಾಡಬೇಕು . ಇದರಿಂದಾಗಿರಸ್ತೆಯಲ್ಲಿ ದುರ್ವಾಸನೆಯಾಗುವುದನ್ನು ಮತ್ತು ಸಾಂಕ್ರಾಮಿಕ ಕಾಯಿಲೆ ಹರಡುವುದನ್ನು ನಿಯಂತ್ರಿಸಬಹುದಾಗಿರುತ್ತದೆ;
(xii) ಗ್ರಾಮದ ನೀರು. ಸರಬರಾಜು ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಎಲ್ಲಾ ಕಾರ್ಯಚಟುವಟಿಕೆಗಳ ಜವಾಬ್ದಾರಿಯನ್ನು ನಿರ್ವಹಿಸಲು ಗ್ರಾಮ ಪಂಚಾಯತಿಗೆ ಈ ಸಮಿತಿಯು ನೆರವಾಗತಕ್ಕದ್ದು;
ಗ್ರಾಮೀಣ ಜನತೆಯಲ್ಲಿ ನೀರು ಸರಬರಾಜು ಮತ್ತು ನೈರ್ಮಲ್ಯ ಬಗ್ಗೆ ತಿಳಿವಳಿಕೆ, (xiii) ಅರಿವು. ಮೂಡಿಸುವುದು ಹಾಗೂ ಯೋಜನೆಯ ನೀತಿ ನಿಯಮಗಳೊಂದಿಗೆ ವಿಶೇಷವಾಗಿ ಆರೋಗ್ಯ ಮತ್ತು ಶುಚಿತ್ವ ಕುರಿತು ಅರಿವು ಮೂಡಿಸುವುದು;
ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮದ ಬಗ್ಗೆ ಸಮುದಾಯದಲ್ಲಿ ಜಾಗೃತಿ (xiv) ಮೂಡಿಸುವುದು ಮತ್ತು ಪ್ಲಾಸಿಕ್ ನಿಷೇಧಕ್ಕೆ ಕ್ರಮ ವಹಿಸುವಲ್ಲಿ ಸಹಕರಿಸುವುದು;
ಸಮುದಾಯವು ಕುಡಿಯುವ ವೀರನ್ನು ಪೋಲು (ವ್ಯರ್ಥ) ಮಾಡದಂತೆ ಜಾಗರೂಕತೆ (xv) ವಹಿಸಲು ಮತ್ತು ನೀರಿನ ಸದ್ಧಳಕೆಯ ಬಗ್ಗೆ ಅರಿವು ಮೂಡಿಸುವುದು;
(xvi) ಯೋಜನೆಯ ಪ್ರಯೋಜನ/ಲಾಭ ಹೊಂ೦ದುವ ಸಮುದಾಯವನ್ನು ವಿಶೇಷವಾಗಿ ನೀರು. ಸರಬರಾಜು ಮತ್ತು ನೈರ್ಮಲ್ಯ ಯೋಜನೆಗಳ ಅನುದಾನ ಮೂಲವಾಗಿ ಸಮುದಾಯ ವಂತೆಗೆ ಸಂಗ್ರಹಣೆಗಾಗಿ (ಯಾವುದಾದರೂ ಇದ್ದರೆ) ಸಕ್ರೀಯವಾಗಿ ತೊಡಗಿಸಿಕೊಳ್ಳುವಂತೆ ಮನವೊಲಿಸುವುದು;
(xvii) ನೀರು. ಸರಬರಾಜು ಮತ್ತು ಸ್ವಚ್ಛತೆಗೆ ಸಂಬಂಧಪಟ್ಟ ಯೋಜನೆ, ನಿರ್ಮಾಣ, ಕಾರ್ಯಾಚರಣೆ, ನಿರ್ವಹಣೆ ಮತ್ತು ಮೇಲ್ವಿಚಾರಣೆಯಲ್ಲಿ ಗ್ರಾಮ ಪಂಚಾಯತಿಗೆ ಅನುವು ಮಾಡುವುದು.
(xviii) ಎಲ್ಲಾ ಕುಟುಂಬಗಳು ಶೌಚಾಯಲಗಳನ್ನು ನಿರ್ಮಿಸಿ, ಕುಟುಂಬದ ಎಲ್ಲಾ ಸದಸ್ಯರು ಬಳಸಿಕೊಳ್ಳುವುದನ್ನು ಖಾರತಿಪಡಿಸಿಕೊಳ್ಳುವುದು. ಗ್ರಾಮದ ಪ್ರತಿ ಕುಟುಂಬವು ಶೌಚಾಲಯವನ್ನು ಬಳಸುತ್ತಿರುವ ಬಗ್ಗೆ ಖಾತರಿಪಡಿಸಿಕೊಳ್ಳುವುದು ಮತ್ತು ಶೌಚಾಲಯದ ವಿರ್ಮಾಣ ಹಾಗೂ ಬಳಕೆಗೆ ಪ್ರೇರೇಪಿಸುವುದು;
ಎಲ್ಲಾ ಕುಟುಂಬಗಳು ಮತ್ತು ವಾಣಿಜ್ಯ ಚಟುವಟಿಕೆಗಳಿಂದ ಉತ್ಪತ್ತಿಯಾಗುವ (xix) ತ್ಯಾಜ್ಯವನ್ನು ಹಸಿ ಮತ್ತು ಒಣ ಕಸವನ್ನು ವಿಂಗಡಿಸುವ ಮತ್ತು ಸಮರ್ಪಕವಾಗಿ ವಿಲೇ ಮಾಡುವ ಬಗ್ಗೆ ಅರಿವು ಮೂಡಿಸುವುದು. ಎಲ್ಲಾ ಮನೆಗಳಿಗೂ ಶುದ್ಧ ಕುಡಿಯುವ ವೀರು ಸರಬರಾಜು ವ್ಯವಸ್ಥೆ, ವೀರಿನ ಶುದ್ಧತೆಯ ಬಗ್ಗೆ ಸುರಕ್ಚಿತತೆಯ ಕ್ರಮ, ನೀರಿನ ಟ್ಯಾಂಕ್ಗಳನ್ನು ಶುಚಿಗೊಳಿಸುವಿಕೆ, ಶುದ್ಧ ಕುಡಿಯುವ ವೀರಿನ ಘಟಕಗಳ ದುರಸ್ಥ್ಮಿಗೊಳಿಸುವಿಕೆ. ಮತ್ತು ಸರಬರಾಜು ವ್ಯವಸ್ಥೆಯಲ್ಲಿ ನೀರು ಕಲುಷಿತವಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಗ್ರಾಮ ಪಂಚಾಯತಿಗೆ ಅನುವು ಮಾಡುವುದು;
ಪ್ರತೀ ವರ್ಷ ಮುಂಗಾರು ಪೂರ್ವ ಮತ್ತು ಹಿಂಗಾರು ನಂತರ ಕಡ್ಡಾಯವಾಗಿ ನೀರಿನ (xx) ಮಾದರಿಗಳನ್ನು ಪರೀಕ್ಷೆ ಮಾಡಿಸಲು ಮತ್ತು ವರದಿಯನ್ನು ಗ್ರಾಮದ ಸಾರ್ವಜನಿಕ ಸ್ಮಳಗಳಲ್ಲಿ ಪ್ರಕಟಿಸಲು ಮತ್ತು ಆ ಮೂಲಕ ಕುಡಿಯುವ ನೀರಿನ ಗುಣಮಟ್ಟ ಕಾಯ್ಕುಸೊಳ್ಳುವಲ್ಲಿ ಗ್ರಾಮ ಪಂಚಾಯತಿಗೆ ನೆರವಾಗುವುದು;
ಸಮಿತಿಯು ಗ್ರಾಮವನ್ನು ಬಯಲು ಬಹಿರ್ದೆಸೆ ಮುಕ್ತ ಸ್ಥಿಶಿಯಲ್ಲಿಡುವ ಮತ್ತು (xxi) ಸುಸ್ಥಿರತೆ ಕಾಯ್ದುಕೊಳ್ಳುವ ಜವಾಬ್ದಾರಿಯನ್ನು ವಹಿಸಿಕೊಳ್ಳುವುದು;
ಸಮುದಾಯದ ಶೌಚಾಲಯ, ಶಾಲಾ, ಅಂಗನವಾಡಿ, ಸರ್ಕಾರಿ ಆಸ್ಪತ್ರೆಗಳು, ಇತರೆ (xxii) ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಿರುವ ಶೌಚಾಲಯಗಳ ಬಳಕೆ ಮತ್ತು ನಿರ್ವಹಣೆ ಬಗ್ಗೆ ಮೇಲ್ವಿಚಾರಣೆ ನಡೆಸುವಲ್ಲಿ ಗ್ರಾಮ ಪಂಚಾಯತಿಗೆ ಸಹಕಾರ ನೀಡುವುದು;
ಗ್ರಾಮ ಸಭೆಯೊಂದಿಗೆ ಸಮಾಲೋಚನೆ BBA, ತನ್ನ ವ್ಯಾಪ್ತಿಯಲ್ಲಿನ ಗ್ರಾಮ/ (xxiii) ಜನವಸತಿಗಳ ನೀರು ಸರಬರಾಜು ಮತ್ತು ನೈರ್ಮಲ್ಯ ಸೌಕರ್ಯಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಕುರಿತು ಯೋಜನೆ ರೂಪಿಸುವಲ್ಲಿ ಗ್ರಾಮ ಪಂಚಾಯತಿಗೆ ಸಹಕಾರ ನೀಡುವುದು;
(xxiv) ಗ್ರಾಮದ ವ್ಯಾಪ್ತಿಯಲ್ಲಿ ಸೃಜಿಸಲಾದ ಮೂಲಭೂತ ಸೌಕರ್ಯಗಳ ಕಾರ್ಯಾಚರಣೆ ಮತ್ತು ಮೇಲ್ವಿಚಾರಣೆಗೆ Doro AAG ನಿರ್ವಹಣೆಗೆ ಬಳಕೆದಾರರ ಶುಲ್ಕ ವಸೂಲಿ ಮಾಡುವಲ್ಲಿ ಗ್ರಾಮ ಪಂಚಾಯತಿಗೆ ಅನುವಾಗುವುದು;
(xxv) ಪ್ರತಿಯೊಂದು ಕುಟುಂಬವು / ವಿಭಾಗ ನೀರು ಸರಬರಾಜು ಮತ್ತು ನೈರ್ಮಲ್ಯ ಸೌಕರ್ಯಗಳನ್ನು ಸರಿಯಾದ ಪ್ರಮಾಣದಲ್ಲಿ ಪಡೆಯುತ್ತಿದೆಯೇ ಮತ್ತು ಅಂತಹ ಸೌಕರ್ಯ/ ಸಂಪನ್ಮೂಲಗಳು ಸಂರಕ್ಷಿಕವಾಗಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳುವುದು; ಮತ್ತು 60%) ಅವಶ್ಯಕತೆ ಕಂಡು ಬಂದಾಗಲೆಲ್ಲಾ, ನೀರು ವಿತರಣಾ ವ್ಯವಸ್ಥೆ ಮೇಲ್ವಿಚಾರಣಾ ಯೋಜನೆಯನ್ನು ತಯಾರಿಸುವಲ್ಲಿ ಮತ್ತು ಪರಿಷ್ಕರಿಸುವಲ್ಲಿ ಗ್ರಾಮ ಪಂಚಾಯತಿಗೆ ಸಲಹೆ ನೀಡುವುದು.