(1) ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಅಥವಾ ಸದಸ್ಯರು ವೈಯಕ್ತಕವಾಗಿ ಮತ್ತು ಒಟ್ಟಾಗಿ ನೀರು ಸರಬರಾಜು ಮತ್ತು ನೈರ್ಮಲ್ಯ ಕಾಮಗಾರಿಗಳ ಸಮರ್ಪಕ ಅನುಷ್ಕಾನದಲ್ಲಿ ಗ್ರಾಮ ಮಂ೦ಚಾಯತಿಗೆ ಅಗತ್ಯ ಸಹಕಾರ ನೀಡುವುದು. ಉಸ್ತುವಾರಿ ಮತ್ತು ನೀರು ಸರಬರಾಜು ಮತ್ತು ನೈರ್ಮಲ್ಯದ ಯಾವುದೇ ಕಾಮಗಾರಿಗಳಲ್ಲಿ ನಿರತರಾದ ಸಿಬ್ಬಂದಿ/ ಕೆಲಸಗಾರರ ಕಾರ್ಯನಿರ್ವಹಣೆ ಬಗ್ಗೆ ತೃಪಿಕರವಾಗಿಲ್ಲದಿದ್ದ ಪಕ್ಷದಲ್ಲಿ ಅಂತಹ ಸಿಬ್ಬಂದಿ/ ಕೆಲಸಗಾರರ ವಿರುದ್ದ ನಿಯಮಾನುಸಾರ ಕ್ರಮ ಕೈಗೊಳ್ಳಲು ಗ್ರಾಮ ಪಂಚಾಯತಿಗೆ ಶಿಫಾರಸ್ಸು ಸಲ್ಲಿಸಬಹುದು.
(2) ಸಮಿತಿಯು ಗ್ರಾಮ ಸಮುದಾಯದಿಂದ ನೀರು ಸರಬರಾಜು ಮತ್ತು ನೈರ್ಮಲ್ಯ ಶುಲ್ಕ/ ಬಳಕೆ ಶುಲ್ಕವನ್ನು ವಸೂಲಿ ಮಾಡುವಲ್ಲಿ ಗ್ರಾಮ ಪಂಚಾಯತಿಗೆ ಸಹಕಾರ ನೀಡುವುದು ಮತ್ತು ಶುಲ್ಕಗಳನ್ನು ಪಾವತಿಸುವಂತೆ ಬಳಕೆದಾರರನ್ನು ಮನವೊಲಿಸುವುದು.
(3) ಗ್ರಾಮ ಪಂಚಾಯತಿಯು ಕುಡಿಯುವ ನೀರು ಸರಬರಾಜು ಯೋಜನೆಗಳ ಹಾಗೂ ಸ್ವಚ್ಚತೆ ನೈರ್ಮಲ್ಯ ರಕ್ಷಣೆಗಾಗಿ ಅನುಷ್ಠಾನಗೊಳಿಸುವ ಕಾರ್ಯಾಚರಣೆ ಮತ್ತು ಮೇಲ್ವಿಚಾರಣೆ ವೆಚ್ಚಗಳನ್ನು ಆಧರಿಸಿ, ಬಳಕೆ ಶುಲ್ಕವನ್ನು ನಿಗಧಿಪಡಿಸುವ ಸಂದರ್ಭದಲ್ಲಿ ಸಮಿತಿಯು ಗ್ರಾಮ ಪಂಚಾಯತಿಗೆ ಅಗತ್ಯ ಸಹಕಾರ ನೀಡುವುದು.
(4) ಸಮಿತಿಯ ಕಾರ್ಯಚಟುವಟಿಕೆಗಳ ಬಗ್ಗೆ, ಸಮಿತಿಯ ಸದಸ್ಯ ಕಾರ್ಯದರ್ಶಿಯು ಪ್ರತಿ BONY) ಗ್ರಾಮ ಪಂಚಾಯತಿಗೆ ವರದಿ ನೀಡುವುದು. ಈ ವರದಿಯ ಸಾರಾಂಶವನ್ನು ಪ್ರತಿ ಆರು ತಿಂಗಳಿಗೊಮ್ಮೆ ಪಂಚಾಯತಿ ಅಭಿವೃದ್ಧಿ ಅಧಕಾರಿಯು ಗ್ರಾಮ ಸಭೆಯಲ್ಲಿ ಮಂಡಿಸತ್ಕದ್ದು.