(1) ನೀರು ಸರಬರಾಜು, ಸ್ವಚ್ಚತಾ ಸೌಕರ್ಯಗಳ ಮೇಲ್ವಿಚಾರಣೆ ಕುರಿತು ಪರಿಶೀಲನೆ ಮತ್ತು ನೀರು ಸೋರಿಕೆ, ಪೈಪ್ಲೈನ್, VO noes, ಮುಂತಾದ ಘಟಕಗಳ ಭಾಗಗಳು ಹಾನಿಗೊಳಗಾಗಿದ್ದಲ್ಲಿ ಅವುಗಳನ್ನು ದುರಸ್ತಿಪಡಿಸುವ ಮಾರ್ಗೋಪಾಯಗಳಿಗಾಗಿ ಸಮಿತಿಯು ಎರಡು ತಿಂಗಳಿಗೆ wow ಬಾರಿ ಅಥವಾ ಅನಿವಾರ್ಯಕಾರಣಗಳಿಂದಾಗಿ ಸಭೆ ಸೇರುವುದು ಅಗತ್ಯವೆಂದು ಕಂಡು ಬಂದಾಗಲೆಲ್ಲಾ ಮೂರು ದಿನಗಳು ಮುಂಚಿತವಾಗಿ ನೋಟೀಸು ನೀಡಿ ಸಭೆ ಸೇರತಕ್ಕದ್ದು.
(2 ಸಮಿತಿಯ ಸಭೆಗಳನ್ನು ಅದ್ಯಕ್ಷರು, ತಪ್ಪಿದಲ್ಲಿ ಉಪಾಧ್ಯಕ್ಷರು ಅಥವಾ ಸಮಿತಿ ಸದಸ್ಯ ಕಾರ್ಯದರ್ಶಿ ಕರೆಯತಕ್ಕದ್ದು. ಇವರುಗಳು ತುರ್ತು ಕಾರ್ಯನಿರ್ವಹಣೆಯ ಸಂದರ್ಭಗಳಲ್ಲಿ ಸಭೆಯನ್ನು ಕರೆಯದಿದ್ದಾಗ 1/3 ಭಾಗದ ಸದಸ್ಯರು ಮೂರು ದಿನಗಳು ಮುಂಚಿತವಾಗಿ ನೋಟೀಸು ನೀಡಿ ವಿಶೇಷಸಭೆಯನ್ನು ಕರೆಯಬಹುದು. ಈ ಸಮಿತಿಯು ತೆಗೆದುಕೊಂಡ ನಿರ್ಣಯಗಳನ್ನು ಗ್ರಾಮ ಪಂಚಾಯತಿ ಅಧ್ಯಕ್ಷರ ಗಮನಕ್ಕೆ ತರಬೇಕು ಹಾಗೂ ಈ ನಿರ್ಣಯದ ಅನುಷ್ಠಾನಕ್ಕೆ ಗ್ರಾಮ ಪಂಚಾಯತಿಯ ಅಧ್ಯಕ್ಷರು ಸೂಕ್ತ ಕ್ರಮ ವಹಿಸುವುದು. ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಸಮಿತಿ ಸಭಾ ನಡವಳಿಯನ್ನು ನಿರ್ವಹಿಸಿಕೊಂಡು ಬರತಕ್ಕದ್ದು.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
(ಬಿ. ನವೀನ್ ಕುಮಾರ್)
ಸರ್ಕಾರದ ಅಧೀನ ಕಾರ್ಯದರ್ಶಿ, (ಜಿ.ಪಂ.) (ಪ)
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ