(1) ಈ ಸಮಿತಿಯಲ್ಲಿನ ಗ್ರಾಮ ಪಂಚಾಯತಿ ಸದಸ್ಯರುಗಳ ಅವಧಿ ಸಮಿತಿ ರಚನೆಯಾದ ದಿನಾಂಕದಿಂದ ಮೂವತ್ತು ತಿಂಗಳುಗಳ ಅವಧಿಯಾಗಿರತಕ್ಕದ್ದು. ಅಥವಾ ಗ್ರಾಮ ಪಂಚಾಯತಿಯು, ಯಾವುದಾದರೂ ಕಾರಣಗಳಿಂದ ಅದರ ಅವಧಿಯು ಮುಕ್ತಾಯವಾದಲ್ಲಿ ಇದರಲ್ಲಿ ಯಾವುದು ಮೊದಲೋ ಆ ಅವಧಿಯವರೆಗೆ ಕಾರ್ಯ ನಿರ್ವಹಿಸುವುದು.
(2) ಸಮಿತಿಯ ನಾಮನಿರ್ದೇಶಿತ ಸದಸ್ಯರುಗಳ ಅವಧಿಯ ನಾಮನಿರ್ದೇಶನಗೊಂಡ ದಿನಾಂಕದಿಂದ ಮೂವತ್ತು ತಿಂಗಳುಗಳ ಅವಧಿಗೆ ಇರತಕ್ಕದ್ದು ಗ್ರಾಮ ಪಂಚಾಯತಿಯ ಅವಧಿಯು ಮುಕ್ತಾಯವಾದರೂ ಮತ್ತೆ ಗ್ರಾಮ ಪಂಚಾಯತಿಯ ರಚನೆಯಾಗುವವರೆಗೂ, ಸಮಿತಿಯ ಇತರ ಸದಸ್ಯರುಗಳು ಸಮಿತಿಯ ಜವಾಬ್ದಾರಿಗಳನ್ನು ನಿರ್ವಹಿಸತಕ್ಕದ್ದು.