ಕರ್ನಾಟಕ ಅಬಕಾರಿ (ದೇಶಿ ಮತ್ತು ವಿದೇಶಿ ಮದ್ಯಗಳ ಮಾರಾಟ) ನಿಯಮಗಳು, 1968ರ (ಇದರಲ್ಲಿ ಇನ್ನು ಮುಂದೆ ಸದರಿ ನಿಯಮಗಳೆಂದು ಉಲ್ಲೇಖಿಸಲಾಗಿದೆ), 2ನೇ ನಿಯಮದಲ್ಲಿ, ಖಂಡ (ಎಫ್) ರ ಬದಲಾಗಿ, ಈ ಮುಂದಿನದನ್ನು ಪ್ರತಿಸ್ಥಾಪಿಸತಕ್ಕದ್ದು, ಎಂದರೆ:–
“(ಎಫ್) “ಸನ್ನದುದಾರನು” ಎಂದರೆ, ಸನ್ನದನ್ನು ಯಾರಿಗೆ ನೀಡಲಾಗಿದೆಯೋ ಆ ವ್ಯಕ್ತಿ ಅಥವಾ ಸಂಸ್ಥೆ ಅಥವಾ ಕಂಪನಿ ಅಥವಾ ಕಾನೂನು ಸಮ್ಮತ ವಾರಸುದಾರರು”.