ಸದರಿ ನಿಯಮಗಳ 3ನೇ ನಿಯಮದಲ್ಲಿ –
(i) ಉಪ–ನಿಯಮ (4) ರಲ್ಲಿ, 1 ನೇ ಪರಂತುಕದ ಷರತ್ತು ಸಂಖ್ಯೆ (1) ರಲ್ಲಿ, “ಐದು ವರ್ಷಗಳಿಗಿಂತ ಕಡಿಮೆಯಿಲ್ಲದಂತೆ” ಎಂಬ ಪದಗಳ ಬದಲಾಗಿ, “ಹಿಂದಿನ ಮೂರು ವರ್ಷಗಳ ಲೆಕ್ಕಪರಿಶೋಧಿತ ವರದಿಗಳ ಹಾಜರುಪಡಿಸುವಿಕೆಗೆ ಒಳಪಟ್ಟು, ಮೂರು ವರ್ಷಗಳಿಗಿಂತ ಕಡಿಮೆಯಿಲ್ಲದಂತೆ” ಎಂಬ ಪದಗಳನ್ನು ಪ್ರತ್ಯಾಯೋಜಿಸತಕ್ಕದ್ದು.
(ii) ಉಪ–ನಿಯಮ 10ನ್ನು ಬಿಟ್ಟುಬಿಡತಕ್ಕದ್ದು. 4. 4–ಬಿ ನಿಯಮದ ತಿದ್ದುಪಡಿ:– ಸದರಿ ನಿಯಮಗಳ 4–ಬಿ ನಿಯಮದಲ್ಲಿ, ಉಪ–ನಿಯಮ (1) ರಲ್ಲಿ, ಖಂಡ (iv) ರ ಬದಲಾಗಿ, ಈ ಮುಂದಿನದನ್ನು ಪ್ರತಿಸ್ಥಾಪಿಸತಕ್ಕದ್ದು, ಎಂದರೆ:– “(iv) ಅವನು ಇಪ್ಪತ್ತೊಂದು ವರ್ಷಕ್ಕಿಂತ ಕಡಿಮೆ ವಯಸ್ಸಿನವನಾಗಿದ್ದರೆ ಅಥವಾ ಅವಿಮುಕ್ತ ದಿವಾಳಿನಾಗಿದ್ದರೆ ಅಥವಾ ಅಸ್ವಸ್ಥ ಮನಸ್ಸಿನವನಾಗಿದ್ದರೆ;” 5. ನಮೂನೆ ಸಿಎಲ್–2, ಸಿಎಲ್–4, ಸಿಎಲ್–5, ಸಿಎಲ್–6, ಸಿಎಲ್–6ಎ, ಸಿಎಲ್–7, ಸಿಎಲ್–7ಸಿ, ಸಿಎಲ್–8, ಸಿಎಲ್–8ಎ, ಸಿಎಲ್–8ಬಿ, ಸಿಎಲ್–9, ಸಿಎಲ್–11, ಸಿಎಲ್–11ಎ, ಸಿಎಲ್–11ಸಿ, ಸಿಎಲ್–12, ಸಿಎಲ್–14, ಸಿಎಲ್–15, ಸಿಎಲ್–16, ಸಿಎಲ್–17 ಮತ್ತು ಸಿಎಲ್–18 ರ ತಿದ್ದುಪಡಿ.– ಸದರಿ ನಿಯಮಗಳ ನಮೂನೆ ಸಿಎಲ್–2, ಸಿಎಲ್–4, ಸಿಎಲ್–5, ಸಿಎಲ್–6, ಸಿಎಲ್–6ಎ, ಸಿಎಲ್–7, ಸಿಎಲ್–7ಸಿ, ಸಿಎಲ್–8, ಸಿಎಲ್–8ಎ, ಸಿಎಲ್–8ಬಿ, ಸಿಎಲ್–9, ಸಿಎಲ್–11, ಸಿಎಲ್–11ಎ, ಸಿಎಲ್–11ಸಿ, ಸಿಎಲ್–12, ಸಿಎಲ್–14, ಸಿಎಲ್–15, ಸಿಎಲ್–16, ಸಿಎಲ್–17 ಮತ್ತು ಸಿಎಲ್–18 ರ ಷರತ್ತು ಸಂಖ್ಯೆ (1) ರ ಬದಲಾಗಿ, ಈ ಮುಂದಿನದನ್ನು ಪ್ರತ್ಯಾಯೋಜಿಸತಕ್ಕದ್ದು, ಎಂದರೆ:–
“1. ಸನ್ನದುದಾರನು ಕರ್ನಾಟಕ ಅಬಕಾರಿ ಕಾಯಿದೆ, 1965 ರ ಉಪಬಂಧಗಳು, ಅಧಿಸೂಚನೆಗಳು ಮತ್ತು ಅದರಡಿಯಲ್ಲಿ ನಿಗದಿಪಡಿಸಿದ ಯಾವುದೇ ಸಾಮಾನ್ಯ ಅಥವಾ ವಿಶೇಷ ನಿಯಮಗಳು ಮತ್ತು ಕಾಲಕಾಲಕ್ಕೆ ಅಬಕಾರಿ ಆಯುಕ್ತರು/ಜಿಲ್ಲಾಧಿಕಾರಿಗಳು ಹೊರಡಿಸಿದ ಆದೇಶಗಳಿಗೆ ಬದ್ಧರಾಗಿರಬೇಕು”.