ಸದರಿ ನಿಯಮಗಳ ನಮೂನೆ ಸಿಎಲ್–11ಸಿ ರಲ್ಲಿ:–
(i) ಷರತ್ತು ಸಂಖ್ಯೆ 7 ರ ತರುವಾಯ, ಈ ಮುಂದಿನ ಷರತ್ತನ್ನು ಸೇರಿಸತಕ್ಕದ್ದು, ಎಂದರೆ:–
“8. ಕರ್ನಾಟಕ ಅಬಕಾರಿ (ಅಬಕಾರಿ ಸುಂಕಗಳು ಮತ್ತು ಶುಲ್ಕಗಳು) ನಿಯಮಗಳು, 1968ರ ನಿಯಮ 2–ಎಫ್ ಅಡಿಯಲ್ಲಿ ಘೋಷಿಸಿದಂತೆ ಬಾಟಲಿಗಳ ಲೇಬಲ್ಗಳ ಮೇಲೆ ಸೂಚಿಸಲಾದ ಗರಿಷ್ಠ ಚಿಲ್ಲರೆ ಬೆಲೆಯನ್ನು (MRP) ಮೀರದ ಬೆಲೆಯಲ್ಲಿ ಸನ್ನದುದಾರನು ಭಾರತೀಯ ಮದ್ಯ ಅಥವಾ ವಿದೇಶಿ ಮದ್ಯ ಅಥವಾ ಎರಡನ್ನೂ ಮಾರಾಟ ಮಾಡಬೇಕು ಮತ್ತು ಅದರ ಪ್ರಕಾರ ಗ್ರಾಹಕರಿಗೆ ಬಿಲ್ಗಳನ್ನು ವಿತರಿಸಿಬೇಕು”.
(ii) ಈಗಿರುವ ಷರತ್ತು ಸಂಖ್ಯೆ 8 ನ್ನು ಷರತ್ತು ಸಂಖ್ಯೆ 9 ಎಂದು ಮರುಸಂಖ್ಯೆ ಮಾಡತಕ್ಕದ್ದು; ಮತ್ತು
(iii) ಹೀಗೆ ಮರುಸಂಖ್ಯೆ ಮಾಡಿದ ಷರತ್ತು ಸಂಖ್ಯೆ 9 ರ ನಂತರ, ಈ ಮುಂದಿನ ಷರತ್ತನ್ನು ಸೇರಿಸತಕ್ಕದ್ದು, ಎಂದರೆ:–
“10. ಅಂಗಡಿಗೆ ಆಗಮನಕ್ಕೆ ಮತ್ತು ನಿರ್ಗಮನಕ್ಕೆ ಒಂದೇ ಒಂದು ಪ್ರವೇಶದ್ವಾರವಿರಬೇಕು”.