ನಮೂನೆ-V
ಗೆ,
ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ ಆಯೋಗವು ಸಿವಿಲ್ ನ್ಯಾಯಾಲಯದ ಅಧಿಕಾರಗಳನ್ನು ಚಲಾಯಿಸಿ ನಿವಾಸಿಯಾದ _ ರವರಿಗೆ ಸಮನ್ ಅನ್ನು ಜಾರಿ ಮಾಡಲಾಗಿತ್ತು ಆದರೆ ಹಾಜರಾಗಲು ವಿಫಲಗೊಂಡಿರುವುದರಿಂದ (ಸಮನ್ ಜಾರಿಯನ್ನು ತಪ್ಪಿಸಿಕೊಳ್ಳುವ ಉದ್ದೇಶಕ್ಕಾಗಿ ತಲೆಮರೆಸಿಕೊಳ್ಳುವ ಮೂಲಕ) ಈ ಮೂಲಕ ನಿಮ್ಮನ್ನು ದಸ್ತಗಿರಿ ಮಾಡಲು ಮತ್ತು ಸದರಿ ರವರನ್ನು ರಾಜ್ಯ ಆಯೋಗ, ಬೆಂಗಳೂರು ಇವರ ಮುಂದೆ ಹಾಜರುಪಡಿಸಲು ನಿಮಗೆ ಆದೇಶಿಸಲಾಗಿದೆ.
ಅಲ್ಲದೆ ಇದನ್ನು ಜಾರಿಗೊಳಿಸಿದಂಥ ದಿನ ಮತ್ತು ವಿಧಾನ ಅಥವಾ ಇದನ್ನು ಜಾರಿಗೊಳಿಸದಿರುವುದಕ್ಕೆ ಕಾರಣವನ್ನು ಪ್ರಮಾಣಿಕರಿಸಿದ ಹಿಂಬರಹದೊಂದಿಗೆ ನೇ _ ರ 20 _ ರಂದು ಅಥವಾ ಅದಕ್ಕೂ ಮೊದಲೆ ಈ ವಾರೆಂಟ್ ಅನ್ನು ಹಿಂತಿರುಗಿಸಲು ನಿಮಗೆ ಆದೇಶಿಸಲಾಗಿದೆ.
ನೇ _ ರ 20 _ ರಂದು ಸಿವಿಲ್ ನ್ಯಾಯಾಲಯದ ಅಧಿಕಾರಗಳನ್ನು ಚಲಾಯಿಸಿ ರಾಜ್ಯ ಆಯೋಗವು ಮೊಹರಿನೊಂದಿಗೆ ನನ್ನಿಂದ ನೀಡಲಾಗಿರುತ್ತದೆ.
ಸಹಿ
ಮೊಹರು ಸಹಿ
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಎನ್. ನರಸಿಂಹ ಮೂರ್ತಿ ಸರ್ಕಾರದ ಅಧೀನ ಕಾರ್ಯದರ್ಶಿ ಸಮಾಜ ಕಲ್ಯಾಣ ಇಲಾಖೆ