ಈ ಅಧ್ಯಾದೇಶದಲ್ಲಿ ಸಂದರ್ಭವು ಅನ್ಯಥಾ ಅಗತ್ಯ ಪಡಿಸಿದ ಹೊರತು,-
(ಎ) “"ಸರ್ಕಾರ' ಎಂದರೆ, ಕರ್ನಾಟಕ ಸರ್ಕಾರ
(ಬಿ) "ಸರ್ಕಾರಿ ನೌಕರ' ಎಂದರೆ, ಕರ್ನಾಟಕ ರಾಜ್ಯದ ಸಿವಿಲ್ ಸೇವೆಗಳ ಸದಸ್ಯನಾಗಿರುವ ಅಥವಾ ಕರ್ನಾಟಕ ರಾಜ್ಯ ವ್ಯವಹಾರಗಳಿಗೆ ಸಂಬಂಧಿಸಿದಂತೆ ಒಂದು ಸಿವಿಲ್ ಹುದ್ದೆಯನ್ನು ಧಾರಣ ಮಾಡಿದ ಒಬ್ಬ ವ್ಯಕ್ತಿ ಮತ್ತು ಇದು ಯಾರ ಸೇವೆಯನ್ನು ಭಾರತ ಸರ್ಕಾರಕ್ಕೆ, ಇನ್ನೊಂದು ರಾಜ್ಯದ ಸರ್ಕಾರಕ್ಕೆ, ಸ್ಥಳೀಯ ಪ್ರಾಧಿಕಾರಕ್ಕೆ ನಿಗಮಿತವಾಗಿರುವ ಅಥವಾ ಆಗಿಲ್ಲದಿರುವ ಯಾವೊಬ್ಬ ವ್ಯಕ್ತಿ ಅಥವಾ ವ್ಯಕ್ತಿಗಳಿಗೆ ತಾತ್ಕಾಲಿಕವಾಗಿ ಬಿಟ್ಟು ಕೊಡಲಾಗಿದೆಯೋ ಆ ಯಾವನೇ ವ್ಯಕ್ತಿಯನ್ನು ಒಳಗೊಳ್ಳುತ್ತದೆ.
(ಸಿ) "ಮೂಸಲಾತಿ ಆದೇಶ' ಎಂದರೆ, ಕಾಲಕಾಲಕ್ಕೆ ಮಾರ್ಪಾಡು ಮಾಡಲಾದಂತೆ, ಬಡ್ತಿಯಲ್ಲಿ ಮೂಸಲಾತಿ ನೀತಿಯನ್ನು ಒಳಗೊಂಡ ಸರ್ಕಾರಿ ಆದೇಶ ಸಂಖ್ಯೆ: ಡಿಪಿಎಆರ್ 29 ಎಸ್ಬಿಸಿ 77, ದಿನಾಂಕ: 27ನೇ ಏಪ್ರಿಲ್ 1978.