(1) ಕರ್ನಾಟಕ (ರಾಜ್ಯ ಸಿವಿಲ್ ಸೇವೆಗಳಲ್ಲಿಯ ಹುದ್ದೆಗಳಿಗೆ) ಮೂಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿದ ಸರ್ಕಾರಿ ನೌಕರರ ಜ್ಯೇಷ್ಠತೆಯ ನಿರ್ಧಾರಣೆ ಅಧ್ಯಾದೇಶ 2002 (2002ರ ಕರ್ನಾಟಕ ಅಧ್ಯಾದೇಶ 2) ಮತ್ತು ಕರ್ನಾಟಕ (ರಾಜ್ಯ ಸಿವಿಲ್ ಸೇವೆಗಳಲ್ಲಿಯ ಹುದ್ದೆಗಳಿಗೆ) ಮೀಸಲಾತಿಯ ಆಧಾರದ ಮೇಲೆ ಬಡ್ತಿ ಹೊಂದಿದ ಸರ್ಕಾರಿ ನೌಕರರ ಜ್ಯೇಷ್ಠತೆಯ ನಿರ್ಧಾರಣೆ (ತಿದ್ದುಪಡಿ) ಅಧ್ಯಾದೇಶ 2002 (2002ರ ಕರ್ನಾಟಕ ಅಧ್ಯಾದೇಶ 3) ಇವುಗಳನ್ನು ಈ ಮೂಲಕ ನಿರಸನಗೊಳಿಸಲಾಗಿದೆ.
(2) ಹಾಗೆ ನಿರಸನಗೊಂಡಿದಾಗ್ಯೂ ಸದರಿ ಅಧ್ಯಾದೇಶಗಳ ಮೇರೆಗೆ ಮಾಡಿದ ಯಾವುದೇ ಕಾರ್ಯ ಅಥವಾ ಕೈಗೊಂಡ ಯಾವುದೇ ಕ್ರಮವನ್ನು ಈ ಅಧ್ಯಾದೇಶದ ಮೇರೆಗೆ ಮಾಡಲಾಗಿದೆ ಅಥವಾ ಕೈಗೊಳ್ಳಲಾಗಿದೆ ಎಂದು ಭಾವಿಸತಕ್ಕದ್ದು.