ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನಲ್ಲಿ ಏನೇ ಒಳಗೊಂಡಿದ್ದರೂ ಮೂಸಲಾತಿ ಆದೇಶದಲ್ಲಿ ಉಪಬಂಧಿಸಲಾದಂತೆ ಬಡ್ತಿಯಲ್ಲಿ ಮೂಸಲಾತಿ ನೀತಿಗನುಸಾರವಾಗಿ ಬಡ್ತಿ ಹೊಂದಿದ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ ಸರ್ಕಾರಿ ನೌಕರರು ತತ್ಪರಿಣಾಮದ ಜ್ಯೇಷ್ಠತೆಗೆ ಹಕ್ಕುಳ್ಳವರಾಗಿರತಕ್ಕದ್ದು. ಜ್ಯೇಷ್ಠತೆಯನ್ನು ಒಂದು ವೃಂದದಲ್ಲಿ ಸಲ್ಲಿಸಿದ ಸೇವಾವಧಿಯ ಆಧಾರದ ಮೇಲೆ ನಿರ್ಧರಿಸತಕ್ಕದ್ದು:
ಪರಂತು, ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ ಸರ್ಕಾರಿ ನೌಕರರಿಗೆ ಹಾಗೂ ಮೂಸಲಿಟ್ಟಿರದ ಪ್ರವರ್ಗಕ್ಕೆ ಸೇರಿದ ಸರ್ಕಾರಿ ನೌಕರರಿಗೆ ಒಂದೇ ಆದೇಶದ ಮೂಲಕ ಒಂದೇ ಸಮಯದಲ್ಲಿ ಒಂದು ಪ್ರವರ್ಗಕ್ಕೆ ಬಡ್ತಿ ನೀಡಿದಾಗ ಕೆಳಗಿನ ಕೇಡರಿನಲ್ಲಿ ಅವರ ಪರಸ್ಪರ ಜ್ಯೇಷ್ಠತೆಯ ಆಧಾರದ ಮೇಲೆ ಅವರ ಪರಸ್ಪರ ಜ್ಯೇಷ್ಠತೆಯನ್ನು ನಿರ್ಧರಿಸತಕ್ಕದ್ದು:
ಮತ್ತು ಪರಂತು, ಒಂದು ಕೇಡರಿನಲ್ಲಿಯ ಹುದ್ದೆಗಳನ್ನು ಅವುಗಳಿಗೆ ಅನ್ವಯವಾಗತಕ್ಕ ನೇಮಕಾತಿ ನಿಯಮಗಳಿಗೆ ಅನುಸಾರವಾಗಿ ಕೆಳಗಿನ ಎರಡು ಅಥವಾ ಹೆಚ್ಚು ಕೇಡರುಗಳಿಂದ ಬಡ್ತಿಯ ಮೂಲಕ ತುಂಬ ಬೇಕಾದಾಗ,-
(i) ಕೆಳಗಿನ ಕೇಡರುಗಳ ಪೈಕಿ ಪ್ರತಿಯೊಂದಕ್ಕೆ ಬಡ್ತಿಯ (ಉನ್ನತ) ಕೇಡರಿನಲ್ಲಿ ಲಭ್ಯವಿರುವ ಖಾಲಿ ಸ್ಥಾನಗಳ ಸಂಖ್ಯೆಯನ್ನು ಅದಕ್ಕೆ ಅನ್ವಯವಾಗುವ ನೇಮಕಾತಿ ನಿಯಮಗಳಿಗೆ ಅನುಸಾರವಾಗಿ ಲೆಕ್ಕ ಹಾಕತಕ್ಕದ್ದು; ಮತ್ತು
(ii) ಆ ಕೇಡರುಗಳ ಪೈಕಿ ಪ್ರತಿಯೊಂದು ಕೇಡರಿನ ಸಂಬಂಧದಲ್ಲಿ ಹಾಗೆ ಲೆಕ್ಕ ಹಾಕಲಾದ ಖಾಲಿ ಸ್ಥಾನಗಳಿಗೆ ರೋಸ್ಟರನ್ನು ಪ್ರತ್ಯೇಕವಾಗಿ ಅನ್ವಯಿಸತಕ್ಕದ್ದು.
ಅಲ್ಲದೆ ಪರಂತು, ಮೂಸಲಾತಿ ಆದೇಶದಲ್ಲಿ ನಿರ್ದಿಷ್ಟಪಡಿಸಿದ ರೋಸ್ಟರ್ ಬಿಂದುಗಳ ಕ್ರಮ ಸಂಖ್ಯೆಗಳನ್ನು ಒಂದು ಸಮಯಕ್ಕೆ ಬಡ್ತಿಗಾಗಿ ಮೂಸಲಿಟ್ಟ ಖಾಲಿ ಸ್ಥಾನಗಳ ಸಂಖ್ಯೆಯನ್ನು ಲೆಕ್ಕ ಹಾಕುವುದಕ್ಕಾಗಿ ಮಾತ್ರ ಬಳಸಲು ಉದ್ದೇಶಿಸಲಾಗಿದೆಯೇ ಹೊರತು ಅಂಥ ರೋಸ್ಟರ್ ಬಿಂದುಗಳು, ಒಂದೇ ಕಾಲದಲ್ಲಿ ಬಡ್ತಿ ನೀಡಲಾದ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ ಸರ್ಕಾರಿ ನೌಕರರ ಮತ್ತು ಮೂಸಲಿಟ್ಟಿರದ ಪ್ರವರ್ಗಕ್ಕೆ ಸೇರಿದ ಸರ್ಕಾರಿ ನೌಕರರ ಸಂಬಂಧದಲ್ಲಿ ಪರಸ್ಪರ ಜ್ಯೇಷ್ಠತೆಯನ್ನು ನಿರ್ಧರಿಸುವ ಸಲುವಾಗಿ ಉದ್ದೇಶಿಸಲಾಗಿಲ್ಲ ಮತ್ತು ಅಂಥ ಪರಸ್ಪರ ಜ್ಯೇಷ್ಠತೆಯನ್ನು, ಈ ಅಧ್ಯಾದೇಶಕ್ಕೆ ಅನುಬಂಧಿಸಲಾದ ಅನುಸೂಚಿಯಲ್ಲಿ ದೃಷ್ಠಾಂತ ಪೂರ್ವಕವಾಗಿ ಹೇಳಲಾದಂತೆ ಯಾವ ಕೇಡರಿನಿಂದ ಅವರು ಬಡ್ತಿ ಹೊಂದಿದ್ದಾರೆಯೋ ಆ ಕೇಡರಿನಲ್ಲಿಯ ಅವರ ಪರಸ್ಪರ ಜ್ಯೇಷ್ಠತೆಯ ಮೂಲಕ ನಿರ್ಧರಿಸತಕ್ಕದ್ದು. 4. 1978ರ ಏಪ್ರಿಲ್ 27ರ ತರುವಾಯದಿಂದ ಈಗಾಗಲೇ ನೀಡಲಾಗಿರುವ ತತ್ಪರಿಣಾಮದ ಜ್ಯೇಷ್ಠತೆಯ ಸಂರಕ್ಷಣೆ.- ಈ ಅಧ್ಯಾದೇಶದಲ್ಲಿ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನಲ್ಲಿ ಏನೇ ಒಳಗೊಂಡಿದ್ದರೂ, ಮೀಸಲಾತಿ ಆದೇಶದಲ್ಲಿ ಉಪಬಂಧಿಸಲಾದಂತೆ ಬಡ್ತಿಯಲ್ಲಿ ಮೀಸಲಾತಿ ಆದೇಶ ನೀತಿಗನುಸಾರವಾಗಿ ಹತ್ತೊಂಭತ್ತನೂರಾ ಎಪ್ಪತ್ತೆಂಟರ ಏಪ್ರಿಲ್ ಇಪ್ಪತ್ತೇಳನೇ ದಿನಾಂಕದಿಂದ ಜಾರಿಗೆ ಬರುವಂತೆ ಬಡ್ತಿ ಹೊಂದಿದ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ 1. ತಿದ್ದೋಲೆ ಸಂಖ್ಯೆ ಸಂವ್ಯಶಾಇ 14 ಶಾಸನ 2002 ದಿನಾಂಕ: 24.9.2002 ಸರ್ಕಾರಿ ನೌಕರರಿಗೆ ಈಗಾಗಲೇ ನೀಡಲಾಗಿರುವ ತತ್ಪರಿಣಾಮದ ಜ್ಯೇಷ್ಠತೆಯು, ಸಿಂಧುವಾಗಿರತಕ್ಕದ್ದು ಮತ್ತು ಅದನ್ನು ಸಂರಕ್ಷಿಸತಕ್ಕದ್ದು ಹಾಗೂ ಅದನ್ನು ಭಂಗಗೊಳಿಸತಕ್ಕದ್ದಲ್ಲ.