ಈ ಅಧ್ಯಾದೇಶದಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
(ಎ) "ನೇಮಕ" ಎಂದರೆ, ನೇರನೇಮಕಾತಿ ಮೂಲಕ, ವಿಲೀನಗೊಳಿಸುವ ಮೂಲಕ ಅಥವಾ ಬಡ್ತಿಯ ಮೂಲಕ ಮಾಡಿದ ನೇಮಕ;
(ಬಿ) "ನೇಮಕಾತಿ ಪ್ರಾಧಿಕಾರ" ಎಂದರೆ, ಶಿಕ್ಷಕನ ಹುದ್ದೆಗೆ ನೇಮಕ ಮಾಡಲು ಸಕ್ಷಮವಾದ ಪ್ರಾಧಿಕಾರ;
(ಸಿ) "ಸಕ್ಷಮ ಪ್ರಾಧಿಕಾರಿ" ಎಂದರೆ, ಶಿಕ್ಷಕರ ವರ್ಗಾವಣೆ ಆದೇಶಗಳನ್ನು ಹೊರಡಿಸಲು ಸಕ್ಷಮನಾದ ಪ್ರಾಧಿಕಾರಿ;
(ಡಿ) "ಪದವಿಪೂರ್ವ ಕಾಲೇಜು" ಎಂದರೆ, ರಾಜ್ಯಸರ್ಕಾರಕ್ಕೆ ಸೇರಿದ ಪದವಿಪೂರ್ವ ಕಾಲೇಜುಗಳು;
(ಇ) "ಗ್ರಾಮೀಣ ಪ್ರದೇಶ" ಎಂದರೆ,-
i) ಬಿ-ವಲಯ: ನಗರ ಪ್ರದೇಶದ ಎ - ವಲಯದ ಪರಿಮಿತಿಗಳಿಂದ ರಾಜ್ಯ ಸರ್ಕಾರವು ಕಾಲಕಾಲಕ್ಕೆ ಅಧಿಸೂಚಿಸಬಹುದಾದಂಥ ದೂರದಲ್ಲಿರುವ ಸ್ಥಳಗಳನ್ನು ಒಳಗೊಂಡ ಪ್ರದೇಶ; ಮತ್ತು ii) ಸಿ-ವಲಯ: ಬಿ-ವಲಯದ ಪರಿಮಿತಿಗಳನ್ನೂ ದಾಟಿ, ರಾಜ್ಯ ಸರ್ಕಾರವು ಕಾಲಕಾಲಕ್ಕೆ ಅಧಿಸೂಚಿಸಬಹುದಾದಂಥ ಸ್ಥಳಗಳನ್ನು ಒಳಗೊಂಡ ಪ್ರದೇಶ.
(ಎಫ್) "ಶಾಲೆ" ಎಂದರೆ, ಸಂದರ್ಭಾನುಸಾರ ರಾಜ್ಯಸರ್ಕಾರಕ್ಕೆ ಸೇರಿದ ಪ್ರಾಥಮಿಕ ಅಥವಾ ಪ್ರೌಢಶಾಲೆ;
(ಜಿ) "ಅನುಸೂಚಿ" ಎಂದರೆ, ಈ ಅಧ್ಯಾದೇಶಕ್ಕೆ ಲಗತ್ತಿಸಲಾದ ಅನುಸೂಚಿ;
(ಎಚ್) "ಶಿಕ್ಷಕ" ಎಂದರೆ, ರಾಜ್ಯ ಸಿವಿಲ್ ಸೇವೆಗಳಿಗೆ ಸೇರಿದ ಪ್ರಾಥಮಿಕ ಶಾಲಾ ಶಿಕ್ಷಕ ಅಥವಾ ಪ್ರೌಢಶಾಲಾ ಶಿಕ್ಷಕ ಹುದ್ದೆಗಳ ಪ್ರವರ್ಗಕ್ಕೆ ನೇಮಕಗೊಂಡ ಒಬ್ಬ ವ್ಯಕ್ತಿ ಮತ್ತು ಅದು ಪದವಿಪೂರ್ವ ಕಾಲೇಜಿನಲ್ಲಿನ ಉಪನ್ಯಾಸಕರನ್ನು ಮತ್ತು ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಬಹುದಾದಂಥ ಇತರೆ ಹುದ್ದೆಗಳಲ್ಲಿರುವವರನ್ನು ಒಳಗೊಳ್ಳುತ್ತದೆ;
(ಐ) "ವರ್ಗಾವಣೆ" ಎಂದರೆ, ಕೆಲಸದ ಸ್ಥಳಮೊಂದರಲ್ಲಿರುವ ಒಂದು ಹುದ್ದೆಗೆ ಶಿಕ್ಷಕರೊಬ್ಬರ ಸ್ಥಳ ನಿಯುಕ್ತಿ ಮತ್ತು ಒಂದು ಕೆಲಸದ ಸ್ಥಳದಲ್ಲಿನ ಹುದ್ದೆಯಿಂದ ಇನ್ನೊಂದು ಕೆಲಸದ ಸ್ಥಳದ ಹುದ್ದೆಗೆ ಮಾಡಿದ ಸ್ಥಳನಿಯುಕ್ತಿ ಹಾಗೂ ಇದರಲ್ಲಿ ಒಂದೇ ಕೇಡರಿನೊಳಗಡೆ ಒಂದು ಜೇಷ್ಠತಾ ಘಟಕದೊಳಗೆ ಅಥವಾ ಹೊರಗೆ ಮಾಡಿದ ವರ್ಗಾವಣೆಯೂ ಒಳಗೊಳ್ಳುತ್ತದೆ;
(ಜೆ) "ಜೇಷ್ಠತಾ ಘಟಕ" ಎಂದರೆ, ಶಿಕ್ಷಕ ಹುದ್ದೆಗೆ ನೇಮಕ ಮಾಡಲು ಸಕ್ಷಮವಾಗಿರುವ ನೇಮಕಾತಿ ಪ್ರಾಧಿಕಾರದ ಅಧಿಕಾರ ವ್ಯಾಪ್ತಿ.
(ಕೆ) "ನಗರ ಪ್ರದೇಶ" ಎಂದರೆ, ತಾಲ್ಲೂಕು ಕೇಂದ್ರ ಸ್ಥಾನ ಅಥವಾ ಜಿಲ್ಲಾ ಕೇಂದ್ರ ಸ್ಥಾನಗಳ ಪರಿಮಿತಿಗಳ ಮತ್ತು ನಗರ ಪಾಲಿಕೆಯ, ನಗರಸಭೆಯ, ಪುರಸಭೆಯ ಅಥವಾ ಪಟ್ಟಣ ಪಂಚಾಯತಿಯ ಪರಿಮಿತಿಗಳ ಒಳಗಿನ ಯಾವುವೇ ಪ್ರದೇಶಗಳು ಮತ್ತು ಅಂಥ ಪ್ರದೇಶಗಳ ಮಿತಿಗಳಿಂದ ರಾಜ್ಯಸರ್ಕಾರವು ಕಾಲಕಾಲಕ್ಕೆ ಎ-ವಲಯವೆಂದು ಅಧಿಸೂಚಿಸಬಹುದಾದಂಥ ದೂರದಲ್ಲಿರುವ ಪ್ರದೇಶ.