ಯಾವ ನ್ಯಾಯಾಲಯವೂ, ಸರ್ಕಾರಿ ರಾಜ್ಯಪತ್ರದಲ್ಲಿ ಈ ಬಗ್ಗೆ ಪ್ರಕಟಿಸಲಾದ ಅಧಿಸೂಚನೆಯ ಮೂಲಕ ಸರ್ಕಾರದಿಂದ ಅಧಿಕಾರಪಡೆದ ಒಬ್ಬ ಅಧಿಕಾರಿಯು ಲಿಖಿತ ದೂರು ಸಲ್ಲಿಸಿದ ಮೇಲೆ ಹೊರತು, ಈ ಅಧ್ಯಾದೇಶದ ಅಡಿಯಲ್ಲಿನ ಯಾವುದೇ ಅಪರಾಧವನ್ನು ಸಂಜ್ಞಾನಕ್ಕೆ ತೆಗೆದುಕೊಳ್ಳತಕ್ಕದ್ದಲ್ಲ.