ಒಬ್ಬ ಶಿಕ್ಷಕನನ್ನು ಆತ ನೇಮಕಗೊಂಡ ಒಂದು ಜೇಷ್ಠತಾ ಘಟಕದಿಂದ ಇನ್ನೊಂದು ಜೇಷ್ಠತಾ ಘಟಕಕ್ಕೆ ವರ್ಗಾವಣೆ ಮಾಡತಕ್ಕದ್ದಲ್ಲ:
ಪರಂತು, ಒಬ್ಬ ಶಿಕ್ಷಕನು, ಜೇಷ್ಠತಾ ಘಟಕದ ಅಧಿಕಾರವ್ಯಾಪ್ತಿಯೊಳಗಿನ ಒಂದು ಗ್ರಾಮೀಣ ಪ್ರದೇಶದಲ್ಲಿ ನೇಮಕಗೊಂಡಿದ್ದಲ್ಲಿ ಅವನನ್ನು ಐದು ವರ್ಷಗಳ ಅವಧಿಯು ಪೂರ್ಣಗೊಳ್ಳುವುದಕ್ಕೆ ಮೊದಲು ಅದೇ ಜೇಷ್ಠತಾ ಘಟಕದೊಳಗಿನ ಗ್ರಾಮೀಣ ಪ್ರದೇಶದಿಂದ ಹೊರಗಿನ ಒಂದು ಸ್ಥಳಕ್ಕೆ ವರ್ಗಾವಣೆ ಮಾಡತಕ್ಕದ್ದಲ್ಲ.