(1) ಪ್ರತಿಯೊಂದು ನೇಮಕಾತಿ ಪ್ರಾಧಿಕಾರವು, ಶಾಲೆಗಳಲ್ಲಿ ಅಥವಾ ಪದವಿ ಪೂರ್ವ ಕಾಲೇಜುಗಳಲ್ಲಿ ಶಿಕ್ಷಕರ ಪ್ರಾರಂಭಿಕ ನೇಮಕ ಮಾಡುವಾಗ ಮೊದಲಿಗೆ ಸಿ-ವಲಯದಲ್ಲಿಯ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಖಚಿತಪಡಿಸಿಕೊಳ್ಳತಕ್ಕದ್ದು.
(2) ಈ ಅಧ್ಯಾದೇಶದ ಪ್ರಾರಂಭದ ದಿನಾಂಕದಂದು ಸೇವೆಯಲ್ಲಿರುವ ಮತ್ತು ಅಂಥ ಪ್ರಾರಂಭದ ದಿನಾಂಕಕ್ಕೆ ಮುಂಚೆ ಗ್ರಾಮೀಣ ಪ್ರದೇಶದಲ್ಲಿ ಯಾವುದೇ ವಲಯದಲ್ಲಿ ಕನಿಷ್ಠ ವರ್ಷಗಳ ಸೇವೆಯನ್ನು ಸಲ್ಲಿಸದಿರುವ ಒಬ್ಬ ಶಿಕ್ಷಕನನ್ನು, ಅವನ ನಿಕಟ ತರುವಾಯದ ವರ್ಗಾವಣೆಯ ಸಂದರ್ಭದಲ್ಲಿ ಮೊದಲಿಗೆ, ಆ ವಲಯದಲ್ಲಿ ಕಡಿಮೆ ವರ್ಷಗಳ ೀವೆಯನ್ನು ಸಲ್ಲಿಸಿರುವ ಒಬ್ಬ ಶಿಕ್ಷಕನಿಗಿಂತಲೂ ಆ ವಲಯದಲ್ಲಿ ಅವನಿಗಿಂತ ಹೆಚ್ಚು ವರ್ಷಗಳ ಸೇವೆಯನ್ನು ಸಲ್ಲಿಸಿದ ಸ ಶಿಕ್ಷಕನ ವರ್ಗಾವಣೆಗೆ ಆದ್ಯತೆ ನೀಡಿ ಒಂದೇ ಜೇಷ್ಠತಾ ಘಟಕದಲ್ಲಿರುವ ಎ-ವಲಯಕ್ಕಿಂತಲೂ ಬಿ-ವಲಯಕ್ಕೆ ಆದ್ಯತೆ ನೀಡಿ ಬಿ-ವಲಯಕ್ಕಿಂತಲೂ ಸಿ-ವಲಯಕ್ಕೆ ಆದ್ಯತೆ ನೀಡಿ ಸಿ-ವಲಯಕ್ಕೆ ವರ್ಗಾಯಿಸತಕ್ಕದ್ದು.
ವಿವರಣೆ:- ಈ ಪ್ರಕರಣದ ಉದ್ದೇಶಕ್ಕಾಗಿ "ಕನಿಷ್ಠ ಸಂಖ್ಯೆಯ ಸೇವಾ ವರ್ಷಗಳು" ಎಂದರೆ, ಒಂದು ವಲಯದಲ್ಲಿ 2 ವರ್ಷಗಳಿಗೆ ಕಡಿಮೆಯಲ್ಲದ ಮತ್ತು ಒಂದು ಗ್ರಾಮೀಣ ಪ್ರದೇಶದಲ್ಲಿಯ ಯಾವುವೇ ವಲಯಗಳಲ್ಲಿ 5 ವರ್ಷಗಳಿಗೆ ಕಡಿಮೆಯಲ್ಲದ ಸೇವೆ:
ಪರಂತು, ಗ್ರಾಮೀಣ ಪ್ರದೇಶಕ್ಕೆ ಒಬ್ಬ ಶಿಕ್ಷಕನ ಕಡ್ಡಾಯ ವರ್ಗಾವಣೆಗೆ ಸಂಬಂಧಪಡುವ ಉಪಬಂಧಗಳು,
(ಎ) ಐವತ್ತಮೂರು ವರ್ಷದ ವಯಸ್ಸಾದ ಶಿಕ್ಷಕನಿಗೆ;
(ಬಿ) ಯಾವುದೇ ಗ್ರಾಮೀಣ ಪ್ರದೇಶವನ್ನು ಒಳಗೊಳ್ಳದ ಜೇಷ್ಠತಾ ಘಟಕಕ್ಕೆ ನೇಮಕಗೊಂಡ ಶಿಕ್ಷಕನಿಗೆ, - ಅನ್ವಯಿಸಕ್ಕದ್ದಲ್ಲ.
(3) ಯಾವುದೇ ಒಂದು ನಿರ್ದಿಷ್ಟ ವಲಯದಲ್ಲಿ ಪ್ರಾರಂಭಿಕ ನೇಮಕ ಅಥವಾ ವರ್ಗಾವಣೆಗೆ ಯಾವುದೇ ಖಾಲಿ ಹುದ್ದೆ ದೊರೆಯದಿದ್ದರೆ, ಕನಿಷ್ಠ ಸಂಖ್ಯೆಯ ಸೇವಾ ವರ್ಷಗಳನ್ನು ಪೂರ್ಣಗೊಳಿಸಿದ ಒಬ್ಬ ಶಿಕ್ಷಕನನ್ನು, ಮತ್ತೊಂದು ವಲಯಕ್ಕೆ ಆದ್ಯತೆಯ ಕ್ರಮದಲ್ಲಿ ಸಿ-ವಲಯದಿಂದ ಬಿ-ವಲಯಕ್ಕೆ, ಬಿ-ವಲಯದಿಂದ ಎ-ವಲಯಕ್ಕೆ ಅಥವಾ ಎ-ವಲಯದಿಂದ ಅದೇ ಜೇಷ್ಠತಾ ಘಟಕದೊಳಗಿನ ನಗರ ಪ್ರದೇಶಕ್ಕೆ ವರ್ಗಾವಣೆ ಮಾಡುವ ಮೂಲಕ ಖಾಲಿ ಹುದ್ದೆಯನ್ನು ಸೃಜಿಸಬಹುದು:
ಪರಂತು, ಸಿ-ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಯಾಮೊಬ್ಬ ಶಿಕ್ಷಕನು ಬಿ-ವಲಯಕ್ಕೆ ವರ್ಗಾವಣೆಯಾಗಲು ಅರ್ಹನಾಗಿದ್ದು ಅದೇ ರೀತಿಯಾಗಿ ಬಿ-ವಲಯದಲ್ಲಿ ಸೇವೆಸಲ್ಲಿಸುತ್ತಿರುವ ಒಬ್ಬ ಶಿಕ್ಷಕನು ಎ-ವಲಯಕ್ಕೆ ವರ್ಗಾವಣೆಯಾಗಲು ಅರ್ಹನಾಗಿದ್ದು, ಅವನು ಸಂದರ್ಭಾನುಸಾರ ಸಿ-ವಲಯದಲ್ಲೇ ಅಥವಾ ಬಿ-ವಲಯದಲ್ಲೇ ಸೇವೆ ಲ್ಲಿಸುವುದನ್ನು ಮುಂದುವರಿಸಲು ಇಚ್ಛಿಸಿದರೆ, ಅವನು ಆಯಾ ವಲಯದಲ್ಲಿಯೇ ಸೇವೆಸಲ್ಲಿಸುವುದನ್ನು ಸ ಮುಂದುವರಿಸಲು ಅನುಮತಿ ನೀಡಬಹುದು.
(4) ನಗರ ಪ್ರದೇಶಲ್ಲಿರುವ ಮತ್ತು ಕರ್ನಾಟಕ ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು, 1957ರ 11ನೇ ನಿಯಮದ ಅಡಿಯಲ್ಲಿ ಶಿಸ್ತು ವ್ಯವಹರಣೆಗಳನ್ನು, ಕ್ರಿಮಿನಲ್ ವ್ಯವಹರಣೆಗಳನ್ನು ಎದುರಿಸುತ್ತಿರುವ ಅಥವಾ ಯಾವುದೇ ಕಾಲಬದ್ಧ ದಂಡನೆಯನ್ನು ಅನುಭವಿಸುತ್ತಿರುವ ಒಬ್ಬ ಶಿಕ್ಷಕನನ್ನು, ಸಿ-ವಲಯಕ್ಕೆ ವರ್ಗಾಯಿಸತಕ್ಕದ್ದು ಮತ್ತು ಸಿ-ವಲಯದಲ್ಲಿ ಯಾವುದೇ ಖಾಲಿ ಹುದ್ದೆಯು ಇರದಿದ್ದರೆ, ಅದೇ ಜೇಷ್ಠತಾ ಘಟಕದಲ್ಲಿ ಬಿ- ವಲಯದಲ್ಲಿನ ಯಾವುದೇ ಖಾಲಿ ಹುದ್ದೆಗೆ ವರ್ಗಾಯಿಸಬಹುದು:
ಪರಂತು, ಅಂಥ ಶಿಕ್ಷಕನು ಬಿ-ವಲಯದಲ್ಲಿ ಅಥವಾ ಸಿ-ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಅಂಥ ಶಿಸ್ತು ವ್ಯವಹರಣೆಗಳು, ಕ್ರಿಮಿನಲ್ ವ್ಯವಹರಣೆಗಳು ಅಥವಾ ಸಂದರ್ಭಾನುಸಾರ ದಂಡನೆ ಅವಧಿ ಪೂರ್ಣಗೊಳ್ಳುವವರೆಗೆ, ಅವನು ಕಾರ್ಯನಿರ್ವಹಿಸುತ್ತಿರುವ ಸ್ಥಳದಿಂದ ಅದೇ ವಲಯದಲ್ಲಿ ಇನ್ನೊಂದು ಸ್ಥಳಕ್ಕೆ ವರ್ಗಾಯಿಸತಕ್ಕದ್ದು, ಆದರೆ ಅವನನ್ನು, ಗ್ರಾಮೀಣ ಪ್ರದೇಶದಿಂದ ಹೊರಕ್ಕೆ ವರ್ಗಾವಣೆ ಮಾಡಕೂಡದು.
(5) ಈ ಅಧ್ಯಾದೇಶದ ಮೇರೆಗೆ ಶಿಕ್ಷಕನ ವರ್ಗಾವಣೆಯನ್ನು, ನಿಯಮಿಸಬಹುದಾದಂಥ ರೀತಿಯಲ್ಲಿ ನಡೆಸಲಾಗುವ ಕೌನ್ಸಿಲಿಂಗ್ ಪ್ರಕ್ರಿಯೆಯ ಮೂಲಕ ಮಾಡತಕ್ಕದ್ದು.