ಮೂಲ ಅಧಿನಿಯಮದ 13ನೇ ಪ್ರಕರಣದಲ್ಲಿ,-
(i) (1)ನೇ ಉಪಪ್ರಕರಣದಲ್ಲಿ (ಜಿ) ಖಂಡದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
*(ಎಚ್) ಉತ್ಪಾದನಾ ಕೈಗಾರಿಕೆಗಳು ಅಥವಾ ಉದ್ಯಮಗಳಿಂದ ಸಂಯೋಜಿತ ಅರ್ಜಿ ನಮೂನೆಯನ್ನು ಸ್ವೀಕರಿಸಿದ ಮೇಲೆ, ಸಂಬಂಧಪಟ್ಟ ನೋಡಲ್ ಏಜೆನ್ಸಿಯು ಹೂಡಿಕೆ ಸಮಿತಿಗಳಿಂದ ಅಂದರೆ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ, ರಾಜ್ಯ ಮಟ್ಟದ ಏಕಗವಾಕ್ಷಿ ಒಪ್ಪಿಗೆ ನೀಡಿಕೆ ಸಮಿತಿ ಅಥವಾ ಜಿಲ್ಲಾ ಮಟ್ಟದ ಏಕಗವಾಕ್ಷಿ ಒಪ್ಪಿಗೆ ನೀಡಿಕೆ ಸಮಿತಿಗಳ ಅನುಮೋದನೆಯನ್ನು ಪಡೆದ ತರುವಾಯ, ನಿಯಮಿಸಿದ ನಮೂನೆಯಲ್ಲಿ ಅರ್ಜಿದಾರರಿಗೆ ಸ್ವೀಕೃತಿ ಪ್ರಮಾಣ ಪತ್ರವನ್ನು ಹೊರಡಿಸತಕ್ಕದ್ದು:
ಪರಂತು, ಯಾವ ಉದ್ದೇಶಕ್ಕಾಗಿ ಅದನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆಯೋ ಅಥವಾ ಯಾವ ಅನುಮತಿಗಾಗಿ ಅರ್ಜಿ ಸಲ್ಲಿಸಲಾಗಿದೆಯೋ ಆ ಉದ್ದೇಶಕ್ಕಾಗಿ ಭೂಮಿಯನ್ನು ಪರಿಗಣಿಸತಕ್ಕದ್ದು.
(ii) (2)ನೇ ಉಪಪ್ರಕರಣದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
“(3) ಉತ್ಪಾದನಾ ಕೈಗಾರಿಕೆ ಅಥವಾ ಉತ್ಪಾದನಾ ಉದ್ಯಮದ ಸಂಬಂಧದಲ್ಲಿ, (1)ನೇ ಉಪಪ್ರಕರಣದ (ಎಚ್) ಖಂಡದ ಅಡಿಯಲ್ಲಿ ಹೊರಡಿಸಿದ ಸ್ವೀಕೃತಿ ಪ್ರಮಾಣ ಪತ್ರವು, ಸಂಬಂಧಿತ ಇಲಾಖೆಗಳು ಮಂಜೂರು ಮಾಡಿದ ಅಥವಾ ಹೊರಡಿಸಿದ ಪ್ರಾರಂಭಿಕ Awd ವರ್ಷಗಳ ಅವಧಿಗಾಗಿ ಅಥವಾ ವಾಣಿಜ್ಯ ಕಾರ್ಯಾಚರಣೆಯ ಆರಂಭದ ದಿನಾಂಕದವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ, ಅದರ ಸ್ವೀಕೃತಿಯ ದಿನಾಂಕದಿಂದ, 2ನೇ ಪ್ರಕರಣದ (11ನೇ ಉಪಪ್ರಕರಣದಲ್ಲಿ ಪರಿಭಾಷಿಸಿದಂತೆ ಕೈಗಾರಿಕೆಯ ರಚನೆ ಅಥವಾ ಸ್ಥಾಪನೆಗಾಗಿ ಒಪ್ಪಿಗೆ ನೀಡಿಕೆಗಳು ಎಂಬುದಾಗಿ ಭಾವಿಸತಕ್ಕದ್ದು:
ಪರಂತು, ಕೈಗಾರಿಕೆಯ ರಚನೆಗಾಗಿ ಅಂಥ ಭಾವಿತ ಒಪ್ಪಿಗೆ ನೀಡಿಕೆಯು, ಯಾವ ಉದ್ದೇಶಕ್ಕಾಗಿ ಅದನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆಯೋ ಅಥವಾ ಯಾವ ಅನುಮತಿಗಾಗಿ ಅರ್ಜಿ ಸಲ್ಲಿಸಲಾಗಿದೆಯೋ ಆ ಭೂಮಿಗೆ ಮಾತ್ರವೇ ಆಗಿರತಕ್ಕದ್ದು ಮುಂದುವರೆದು, ಕಟ್ಟಡ ಉಪವಿಧಿಯ ಅನುಸಾರವಾಗಿ ನಿರ್ಮಾಣದಲ್ಲಿ ಮತ್ತು ಅನ್ವಯಿಸಬಹುದಾರ ಯಾವುದೇ ಅಧಿನಿಯಮ ಅಥವಾ ಅಂಥ ನಕ್ಷೆಯು ಜಾರಿಯಲ್ಲಿರುವ ಪ್ರಮುಖ ನಕ್ಷೆಯಲ್ಲಿ ನಿರ್ದಿಷ್ಟಪಡಿಸಿದ ಭೂಮಿಯ ಬಳಕೆಯಲ್ಲಿ ಯಾವುದೇ ಅನ್ಯಮಾರ್ಗವಿರತಕ್ಕದ್ದಲ್ಲ;
ಮತ್ತು ಪರಂತು, ಅನುಮೋದನೆಗಳು ಸ್ವಷ್ಟ ಹಕ್ಕು (Clear title) ಇಲ್ಲದ ಭೂಮಿ ಅಥವಾ ವಿವಾದಿತ, ನಿರ್ಬಂಧಿತ ಪ್ರವರ್ಗಗಳು ಮುಂತಾದವುಗಳ ಅಡಿಯಲ್ಲಿ ಬರುವ ಭೂಮಿಗಳ ಬಳಕೆಗಾಗಿ ಉತ್ಪಾದನಾ ಕೈಗಾರಿಕೆ ಅಥವಾ ಉತ್ಪಾದನಾ ಉದ್ಯಮಗಳಿಗೆ ಅಧಿಕಾರ ನೀಡತಕ್ಕದ್ದಲ್ಲ. ಈ ಅಧಿನಿಯಮದ ಉಪಬಂಧಗಳ ಅಡಿಯಲ್ಲಿ ಸ್ವಾಧೀನ ಪಡಿಸಿಕೊಳ್ಳಬಹುದಾದ ಅಥವಾ ಬಳಸಬಹುದಾದ ಪ್ರದೇಶದ ಗರಿಷ್ಠ ಪರಿಮಿತಿಯಲ್ಲಿ ಕರ್ನಾಟಕ ಭೂ ಸುಧಾರಣೆಗಳ ಅಧಿನಿಯಮ, 1961 ರ (1962ರ ಕರ್ನಾಟಕ ಅಧಿನಿಯಮ 10) 109ನೇ ಪ್ರಕರಣದ ಅಡಿಯಲ್ಲಿನ ಉಪಬಂಧಗಳಲ್ಲಿರುವಂತೆ ಮಿತಿಯಲ್ಲಿರತಕ್ಕದ್ದು.
ವಿವರಣೆ: (3)ನೇ ಉಪಪ್ರಕರಣದ ಅನುಸಾರವಾಗಿ ಉತ್ಪಾದನಾ ಕೈಗಾರಿಕೆ ಅಥವಾ ಉತ್ಪಾದನಾ ಉದ್ಯಮವು ಪನೆಯಾದರೆ, ವಾಣಿಜ್ಯ ಕಾರ್ಯಾಚರಣೆಯ ಪ್ರಾರಂಭಕ್ಕೆ ಮೊದಲು, 14ನೇ ಪ್ರಕರಣದ (2) ಮತ್ತು (3)ನೇ ಉಪಪ್ರಕರಣಗಳ ಅನುಸಾರವಾಗಿ ಅಗತ್ಯ ಒಪ್ಪಿಗೆಗಳನ್ನು ಅರ್ಜಿದಾರರು ಪಡೆಯುವುದು.
(4) ಅನುಮೋದನೆಗಳನ್ನು ಪಡೆಯುವುದಕ್ಕಾಗಿ ಮತ್ತು ಯೋಜನೆಯ ಅನುಷ್ಠಾನದ ಮೇಲ್ವಿಚಾರಣೆಗೆ ಹಲವು ಶಾಸನಗಳು, ಅಧಿನಿಯಮಗಳು, ನಿಯಮಗಳು ಅಥವಾ ವಿನಿಯಮಗಳ ಅಡಿಯಲ್ಲಿ ನೋಡಲ್ ಏಜೆನ್ಸಿಯ ಮೇರೆಗೆ ವಹಿಸಲಾದ ಹಲವು ಆಡಳಿತಾತ್ಮಕ ಅಥವಾ ಕ್ರಮಕೈಗೊಳ್ಳುವ ಇಲಾಖೆಗಳಿಗೆ (line departments) ನೆರವು ನೀಡುವುದು.
(5) ಅರ್ಜಿಗಳು ಅಥವಾ ಪ್ರಸಾವನೆಗಳು ಮತ್ತು ಹೊರಡಿಸಿದ ಸ್ವೀಕೃತಿ ಪ್ರಮಾಣ ಪತ್ರದ ದಾಖಲೆಯನ್ನು ನಿಗಾವಹಿಸುವುದು ಮತ್ತು ನಿರ್ವಹಿಸುವುದು.
(6) ರಾಜ್ಯ ಮಟ್ಟದ ನೋಡಲ್ ಏಜೆನ್ಸಿಯು, ಎಲ್ಲಾ ಯೋಜನೆ ಅರ್ಜಿಗಳು, ಅನುಮೋದನೆಗಳು ಅಥವಾ ಸ್ವೀಕೃತಿಗಳ ದತ್ತಾಂಶಮೂಲವನ್ನು (database) ಕೇಂದ್ರ ಸಂಗ್ರಹವಾಗಿ ಆನ್ಲೈನ್ ವ್ಯವಸ್ಥೆಗಳ ಮೂಲಕ ನಿರ್ವಹಿಸುವುದು.
ವಿವರಣೆ: ಸ್ವೀಕೃತಿ ಪ್ರಮಾಣ ಪತ್ರದ ವ್ಯಾಪ್ತಿಯ ಅಡಿಯಲ್ಲಿ ಅಗತ್ಯವಾಗಿ ಬರಬೇಕಾದ ಸೇವೆಗಳು, ಅನುಮೋದನೆಗಳು ಅಥವಾ ಉತ್ಪಾದನಾ ಉದ್ಯಮಗಳ ಪ್ರಾರಂಭಿಕ ಮೂರು ವರ್ಷಗಳ ಅವಧಿಗಾಗಿ ಅಥವಾ ವಾಣಿಜ್ಯ ಕಾರ್ಯಾಚರಣೆಯ ಆರಂಭದ ದಿನಾಂಕದವರೆಗೆ, ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಇಲಾಖೆಗಳು ನೀಡಿದ ಒಪ್ಪಿಗೆ ನೀಡಿಕೆಗಳೆಂದು ಪರಿಗಣಿಸತಕ್ಕದ್ದು. ಸೇವೆಗಳು, ಅನುಮೋದನೆಗಳು ಅಥವಾ ಒಪ್ಪಿಗೆ ನೀಡಿಕೆಗಳ ಪಟ್ಟಿಯು 2ನೇ ಪ್ರಕರಣದ (iii) Se ಖಂಡದಲ್ಲಿ ಪರಿಭಾಷಿಸಿದ ಒಪ್ಪಿಗೆ ನೀಡಿಕೆಗಳನ್ನು ಒಳಗೊಂಡಿರತಕ್ಕದ್ದು.