ಮೂಲ ಅಧಿನಿಯಮದ 19ನೇ ಪ್ರಕರಣದಲ್ಲಿ, 19ನೇ ಪ್ರಕರಣವನ್ನು ಅದರ (1) ನೇ ಉಪಪ್ರಕರಣವಾಗಿ ಮರುಸಂಖ್ಯೆ ನೀಡತಕ್ಕದ್ದು ಮತ್ತು ಹಾಗೆ ಮರುಸಂಖ್ಯೆ ನೀಡಲಾದ (1)ನೇ ಉಪ ಪ್ರಕರಣದ ತರುವಾಯ ಈ ಮುಂದಿನವನ್ನು ಸೇರಿಸತಕ್ಕದ್ದು, ಎಂದರೆ:-
“(2) ಯಾವುದೇ ಉತ್ಪಾದನಾ ಕೈಗಾರಿಕೆ ಅಥವಾ ಉದ್ಯಮವು ಸ್ವೀಕೃತಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸುವಾಗ ನೋಡಲ್ ಏಜೆನ್ಸಿಗೆ ನೀಡಿದ ಮುಚ್ಚಳಿಕೆ ಅಥವಾ ಸ್ವಯಂ ಪ್ರಮಾಣಪತ್ರದಲ್ಲಿ ನಿರ್ದಿಷ್ಟಪಡಿಸಿದ ಷರತ್ತುಗಳನ್ನು ಪಾಲಿಸುವಲ್ಲಿ ವಿಫಲವಾದರೆ ಅಥವಾ ಕೈಗಾರಿಕಾ ಯೋಜನೆಗಳನ್ನು ಅನುಷ್ಠಾನಗೊಳಿಸುವಾಗ ಅನ್ವಯಿಸಬಹುದಾದ ಅಧಿನಿಯಮ ಅಥವಾ ನಿಯಮದಲ್ಲಿನ ಯಾವುದೇ ಖಂಡವನ್ನು ಉಲ್ಲಂಘಿಸಿದರೆ, ಅಪರಾಧ ನಿರ್ಣೀತವಾದ ಮೇಲೆ ಮೊದಲ ಅಪರಾಧಕ್ಕಾಗಿ ಒಂದು ಲಕ್ಷ ರೂಪಾಯಿಗಳವರೆಗೆ ವಿಸ್ತರಿಸಬಹುದಾದ ಜುಲ್ಮಾನೆಯೊಂದಿಗೆ ಮತ್ತು ಎರಡನೇ ಹಾಗೂ ಮುಂದುವರಿದ ಅಪರಾಧಕ್ಕಾಗಿ ಎರಡು ಲಕ್ಷ ರೂಪಾಯಿಗಳವರೆಗೆ ವಿಸ್ತರಿಸಬಹುದಾದ ಜುಲ್ಮಾನೆಯೊಂದಿಗೆ ದಂಡಿತವಾಗತಕ್ಕದ್ದು ಇದರ ಜೊತೆಗೆ, ಸಂಬಂಧಿತ ಇಲಾಖೆಗಳು ಸಂಬಂಧಪಟ್ಟ ಅಧಿನಿಯಮಗಳ ಅಡಿಯಲ್ಲಿ ದಂಡನಾ ಕ್ರಮವನ್ನು ಪ್ರಾರಂಭಿಸತಕ್ಕದ್ದು.
(3) ಪರಿಭಾವಿತ ಒಪ್ಪಿಗೆ ನೀಡಿಕೆ ಅವಧಿಯಲ್ಲಿ, ನಿಗದಿತ ಕಾಲಕ್ರಮಗಳೊಳಗಾಗಿ ಸಂಬಂಧಿತ ಇಲಾಖೆಯ ಅಧಿಕಾರಿಯು ಸೇವೆ ಅಥವಾ ಅನುಮೋದನೆಯನ್ನು ಒದಗಿಸದಿದ್ದ ಸಂದರ್ಭದಲ್ಲಿ, ಸಕಾಲ ಸೇವೆಗಳ ಅಧಿನಿಯಮ, 2011ರ (2012ರ ಕರ್ನಾಟಕ ಅಧಿನಿಯಮ 1) ಉಪಬಂಧಗಳ ಅನುಸಾರವಾಗಿ ಅಂಥ ಅಧಿಕಾರಿಯ ವಿರುದ್ಧ ದಂಡನಾ ಕ್ರಮಗಳನ್ನು ತೆಗೆದುಕೊಳ್ಳತಕ್ಕದ್ದು.” ವಜೂಭಾಯಿ ವಾಲಾ ಕರ್ನಾಟಕದ ರಾಜ್ಯಪಾಲರು
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
(ಕೆ. ದ್ವಾರಕನಾಥ್ ಬಾಬು) ಸರ್ಕಾರದ ಕಾರ್ಯದರ್ಶಿ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ.
PARLIAMENTARY AFFAIRS AND LEGISLATION SECRETARIAT
NOTIFICATION
No.: DPAL 40 SHASANA 2020, BEGALURU, DATED: 02.07.2020
The Karnataka Industries (Facilitation) (Amendment) Ordinance, 2020- ಇದಕ್ಕೆ 2020 ರ ಜುಲೈ ತಿಂಗಳ 01ನೇ ದಿನಾಂಕದಂದು ರಾಜ್ಯಪಾಲರ ಒಪ್ಪಿಗೆ ದೊರೆತಿದ್ದು, ಸಾಮಾನ್ಯ ತಿಳುವಳಿಕೆಗಾಗಿ ಇದನ್ನು 2020ರ ಕರ್ನಾಟಕ ಅಧ್ಯಾದೇಶ ಸಂಖ್ಯೆ: 2 ಎಂಬುದಾಗಿ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಬೇಕೆಂದು ಆದೇಶಿಸಲಾಗಿದೆ.
KARNATAKA ORDINANCE NO. 12 OF 2020
THE KARNATAKA INDUSTRIES (FACILITATION) (AMENDMENT) ORDINANCE, 2020
(Promulgated by the Governor of Karnataka in the Seventy first year of the Republic of India and First published in the Karnataka Gazette Extra-ordinary on the 2"¢ day of July, 2020)
An Ordinance further to amend the Karnataka Industries (Facilitation) Act, 2002.
Whereas both the Houses of the state legislature are not in session and Honorable Governor of Karnataka is satisfied that the circumstances exist which render it necessary for him to take immediate action, further to amend the Karnataka Industries (Facilitation) Act, 2002 (Karnataka Act 45 of 2003) for the purposes hereinafter appearing;