ಮೂಲ ಅಧಿನಿಯಮದ 14ನೇ ಪ್ರಕರಣದಲ್ಲಿ ಅದನ್ನು (1) ಎಂಬುದಾಗಿ ಮರು ಸಂಖ್ಯೆ ನೀಡತಕ್ಕದ್ದು ಮತ್ತು ಹಾಗೆ ಮರುಸಂಖ್ಯೆ ನೀಡಲಾದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
“(2) ಅರ್ಜಿದಾರರು ಸಂಯೋಜಿತ ಅರ್ಜಿ ನಮೂನೆಯೊಂದಿಗೆ 14ನೇ ಪ್ರಕರಣದ (1)ನೇ ಉಪಪ್ರಕರಣ ಹಾಗೂ 15ನೇ ಪ್ರಕರಣದ (3)ನೇ ಉಪಪ್ರಕರಣದ ಅಡಿಯಲ್ಲಿ ಅನುಕ್ರಮವಾಗಿ ಸಂಬಂಧಿತ ಶುಲ್ಕವನ್ನು ಮತ್ತು ಸ್ವಯಂ ಪ್ರಮಾಣಪತ್ರವನ್ನು ಒದಗಿಸುವ ಆಯ್ಕೆಯನ್ನು ಮಾಡಬಹುದು. ಅರ್ಜಿದಾರರು 15ನೇ ಪ್ರಕರಣದ (3)ನೇ ಉಪಪ್ರಕರಣದ ಅಡಿಯಲ್ಲಿರುವಂತೆ ಸ್ವಯಂ ಪ್ರಮಾಣ ಪತ್ರವನ್ನು ಒದಗಿಸುವ ಆಯ್ಕೆಯನ್ನು ಮಾಡದಿದ್ದ ಸಂದರ್ಭದಲ್ಲಿ ಅರ್ಜಿದಾರರು ಕೈಗಾರಿಕೆಯ ರಚನೆ ಅಥವಾ ಸ್ಥಾಪನೆಗೆ ಮೊದಲು ಎಲ್ಲಾ ಅಗತ್ಯ ಅನುಮೋದನೆಗಳನ್ನು ಪಡೆಯತಕ್ಕದ್ದು.
(3) ಉತ್ಪಾದನಾ ಕೈಗಾರಿಕೆ ಅಥವಾ ಉತ್ಪಾದನಾ ಉದ್ಯಮವು, ಅನ್ವಯಿಸಬಹುದಾದ ಅಧಿನಿಯಮಗಳು, ನಿಯಮಗಳು ಇತ್ಯಾದಿಗಳ ಅಡಿಯಲ್ಲಿ ಘಟಕದ ನಿರ್ವಹಣಾ ಕಾರ್ಯಾಚರಣೆಗಾಗಿ ಸಂಬಂಧಿತ ಅರ್ಜಿಗಳನ್ನು ನಿಯಮಿಸಿದ ಕಾಲಕ್ರಮಗಳಲ್ಲಿ, ಅಂದರೆ ಸ್ವೀಕೃತಿ ಪ್ರಮಾಣ ಪತ್ರವು ಮುಕ್ತಾಯಗೊಳ್ಳುವ ಆರು ತಿಂಗಳುಗಳಿಗೆ ಮೊದಲು ಸಲ್ಲಿಸತಕ್ಕದ್ದು. 13ನೇ ಪ್ರಕರಣದ (3)ನೇ ಉಪಪ್ರಕರಣದ ಅನುಸಾರವಾಗಿ ಸದರಿ ಕೈಗಾರಿಕೆಗೆ ಅಥವಾ ಉದ್ಯಮಕ್ಕೆ ಹೊರಡಿಸಲಾದ ಸ್ವೀಕೃತಿ ಪ್ರಮಾಣ ಪತ್ರವು ಈ ಉಪಪ್ರಕರಣದ ಅಡಿಯಲ್ಲಿ ಅನುಮೋದನೆಗಳನ್ನು ಪಡೆಯುವುದಕ್ಕಾಗಿ ಅವಶ್ಯಪೂರ್ವ ದಸ್ತಾವೇಜು ಆಗಿರತಕ್ಕದ್ದು.
ವಿವರಣೆ: 2ನೇ ಪ್ರಕರಣದ (111ನೇ ಉಪಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ ಅನ್ವಯಿಸಬಹುದಾದ ಅಧಿನಿಯಮಗಳು ಮತ್ತು ನಿಯಮಗಳ ಅಡಿಯಲ್ಲಿ ಅಗತ್ಯಪಡಿಸಿದಂತೆ ಸ್ವೀಕೃತಿ ಪ್ರಮಾಣ ಪತ್ರವು ಎಲ್ಲಾ ಅನುಮೋದನೆಗಳು ಅಥವಾ ಒಪ್ಪಿಗೆ ನೀಡಿಕೆಗಳಿಗಾಗಿ ಅನುಮೋದನಾ ದಸ್ತಾವೇಜು ಆಗಿರತಕ್ಕದ್ದು ಹಾಗೂ ನಿರ್ಮಾಣ ಅಥವಾ ಸ್ಥಾಪನೆಯ ಪ್ರಾರಂಭಕ್ಕೆ ಮೊದಲು ಅಗತ್ಯವಿರುವ ಅನುಮೋದನೆಗಳಾದ ಅನುಮೋದನೆ ಅಥವಾ ಒಪ್ಪಿಗೆ ನೀಡಿಕೆಯನ್ನು ಸ್ವೀಕರಿಸಿದೆ ಎಂಬುದಾಗಿ ಭಾವಿಸತಕ್ಕದ್ದು.
(4) 3ನೇ ಉಪಪ್ರಕರಣದ ಅನುಸಾರವಾಗಿ ಅನುಮೋದನೆಗಳನ್ನು ಪಡೆಯಲಾಗಿಲ್ಲದ ನಿದರ್ಶನಗಳಲ್ಲಿ ಸ್ವೀಕೃತಿ ಪ್ರಮಾಣಪತ್ರದ ಸಿಂಧುತ್ವವು ನಿಂತುಹೋಗಶಕ್ಕದ್ದು.
(5) (3) ಮತ್ತು (4)ನೇ ಉಪಪ್ರಕರಣಗಳ ಉಲ್ಲಂಘನೆಯ ನಿದರ್ಶನಗಳಲ್ಲಿ, ಸಂಬಂಧಿತ ಕ್ರಮವಹಿಸುವ ಇಲಾಖೆಗಳು ಅಥವಾ ಏಜೆನ್ಸಿಗಳು ಸಂಬಂಧಿತ ಅಧಿನಿಯಮಗಳ ಅಡಿಯಲ್ಲಿ ದಂಡನಾ ಕ್ರಮಗಳನ್ನು ಆರಂಭಿಸತಕ್ಕದ್ದು.”