ಮೂಲ ಅಧಿನಿಯಮದ 15ನೇ ಪ್ರಕರಣದಲ್ಲಿ (2)ನೇ ಉಪಪ್ರಕರಣದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-
“(3) ಉತ್ಪಾದನಾ ಕೈಗಾರಿಕೆಗಳು ಅಥವಾ ಉತ್ಪಾದನಾ ಉದ್ಯಮಗಳು ಒದಗಿಸಬೇಕಾದ ಸ್ವಯಂ ಪ್ರಮಾಣ ಪತ್ರವು ಅಫಿಡವಿಟ್ಟಿನ ಸ್ವರೂಪದಲ್ಲಿರತಕ್ಕದ್ದು, ಅದು ಸಂಯೋಜಿತ ಅರ್ಜಿ ನಮೂನೆಯನ್ನು (14ನೇ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದಂತೆ) ಸಲ್ಲಿಸಲು ಕಡ್ಡಾಯ ದಸ್ತಾವೇಜು ಆಗಿರತಕ್ಕದ್ದು. ಉತ್ಪಾದನಾ ಕೈಗಾರಿಕೆ ಅಥವಾ ಉತ್ಪಾದನಾ ಉದ್ಯಮವು, 2ನೇ ಪ್ರಕರಣದ (1ನೇ ಖಂಡದಲ್ಲಿ ಪರಿಭಾಷಿಸಿದ ಅನ್ವಯಿಸಬಹುದಾದ ಎಲ್ಲಾ ಅಧಿನಿಯಮಗಳು, ನಿಯಮಗಳು, ಇತ್ಯಾದಿಯನ್ನು ಅವು ಪಾಲಿಸತಕ್ಕದ್ದಾಗಿ ಒಪ್ಪಿಗೆ ನೀಡಿಕೆಯ ಮೇಲೆ ಮುಚ್ಚಳಿಕೆಯೊಂದನ್ನು ಒದಗಿಸತಕ್ಕದ್ದು, ಹಾಗೂ ಆನಂತರದಲ್ಲಿ ಯಾವುದೇ ಉಲ್ಲಂಘನೆಯು ಕಂಡುಬಂದಲ್ಲಿ ಈ ಅಧಿನಿಯಮದ ಅಥವಾ ಅನ್ವಯಿಸಬಹುದಾದ ಯಾವುದೇ ಅಧಿನಿಯಮಗಳ ಅಡಿಯಲ್ಲಿ ದಂಡನಾ ಕ್ರಮಕ್ಕಾಗಿ ಅದು ಹೊಣೆಯಾಗಿರತಕ್ಕದ್ದು. ಉತ್ಪಾದನಾ ಕೈಗಾರಿಕೆ ಅಥವಾ ಉತ್ಪಾದನಾ ಉದ್ಯಮವು ಸಲ್ಲಿಸಿದ ಅರ್ಜಿಯು ಘಟಕದ ಅಂತರ್ಗತ ಸೇವೆಗಳಿಗಾಗಿ ನಿಯಮಿಸಿದ ಅಪೇಕ್ಷಿತ ಶುಲ್ಕದೊಂದಿಗೆ ಇರತಕ್ಕದ್ದು.”