(ಎ) 4ನೇ ನಿಯಮದಲ್ಲಿನ (1ನೇ ಉಪನಿಯಮದ (ಬಿ) ರಲ್ಲಿ "ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ" ಎಂಬ ಪದಗಳಿಗೆ "ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ , ಸಮಾಜ ಕಲ್ಯಾಣ ಇಲಾಖೆ " ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.
(2) ಆಯ್ಕೆ ಸಮಿತಿಯಲ್ಲಿ (ಎಫ್) ನಂತರ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ,-
(ಜಿ) ಸಂಬಂಧಿಸಿದ ಗ್ರಾಮ ಪಂಚಾಯತಿ ಅಧ್ಯಕ್ಷರು
(3) 0ನೇ ಉಪನಿಯಮದಲ್ಲಿ “ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ ಕನಿಷ್ಠ ಒಂದು ಕನ್ನಡ ದಿನ ಪತ್ರಿಕೆಯನ್ನೊಳಗೊಂಡಂತೆ ಜಿಲ್ಲೆಯಲ್ಲಿ ಹೆಚ್ಚು ಪ್ರಸಾರದಲ್ಲಿರುವ ದಿನ ಪತ್ರಿಕೆಗಳಲ್ಲಿ, ನೇಮಕಾತಿಗಾಗಿ ಜಾಹೀರಾತು ಪ್ರಕಟಪಡಿಸತಕ್ಕದ್ದು ಎಂಬ ಪದಗಳಿಗೆ "ಅರ್ಹ ಅಭ್ಯರ್ಥಿಗಳಿಂದ ಕಡ್ಡಾಯವಾಗಿ ಅರ್ಜಿಗಳನ್ನು ಆಹ್ವಾನಿಸಿ ಕನಿಷ್ಠ ಒಂದು ಅಥವಾ ಎರಡು ಕನ್ನಡ ದಿನ ಪತ್ರಿಕೆಯನ್ನೊಳಗೊಂಡಂತೆ ಜಿಲ್ಲೆಯಲ್ಲಿ ಹೆಚ್ಚು ಪ್ರಸಾರದಲ್ಲಿರುವ ದಿನ ಪತ್ರಿಕೆಗಳಲ್ಲಿ, ನೇಮಕಾತಿಗಾಗಿ ಜಾಹೀರಾತು ಪ್ರಕಟಿಸತಕ್ಕದ್ದು,” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.