ನಿಯಮ 6 ರ ನಂತರ ಈ ಕಳಕಂಡ ಪರಂ೦ತುವನ್ನು ಸೇರಿಸತಕ್ಕದ್ದು, ಎಂದರೆ.-
ಪರಂತು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 113ರಂತೆ ನೇಮಕಗೊಂಡು ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅನುಮೋದನೆ ಪಡೆದಿದ್ದು, ಗ್ರಾಮ ಪಂಚಾಯಿತಿಗಳ ವಾಟರ್ ಆಪರೇಟರ್/ಅಟೆಂಡಂಡ್/ಕ್ಲೀನರ್ಸ್ ಗಳಿಗೆ ಬಿಲ್ ಕಲೆಕ್ಟರ್/ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಬಡ್ತಿ ನೀಡುವಾಗ ಪುನಃ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅನುಮೋದನೆ ಪಡೆಯುವ ಅವಶ್ಯಕತೆ ಇರುವುದಿಲ್ಲ.