ಸದರಿ ನಿಯಮಗಳ, ನಿಯಮ 9 ರಲ್ಲಿ,-
(i) ನೌಕರನ ಸಾವು ಸಂಭವಿಸಿದ ದಿನಾಂಕದಿಂದ ಒಂದು ವರ್ಷದೊಳಗಾಗಿ ಅರ್ಕ ವ್ಯಕ್ತಿಯು ಹುದ್ದೆಗೆ ಅರ್ಜಿಯನ್ನು ಸಲ್ಲಿಸತಕ್ಕದ್ದು ಎಂಬ ಪದಗಳಿಗೆ - "ಈ ನಿಯಮಗಳ ಮೇರೆಗೆ ನೇಮಕಾತಿಯನ್ನು ಕೋರುವ ಪ್ರತಿಯೊಬ್ಬ ಮೃತ ಗ್ರಾಮ ಪಂಚಾಯಿತಿ, ನೌಕರನ/ಳ ಅವಲಂ೦ಬಿತನು, ಗ್ರಾಮ ಪಂಚಾಯಿತಿ, ನೌಕರನು/ಳು ಮರಣ ಹೊಂದಿದ ದಿನಾಂಕದಿಂದ ಒಂದು ವರ್ಷದ ಒಳಗೆ ಕಾರ್ಯನಿರ್ವಹಿಸುತ್ತಿದ್ದ, ಗ್ರಾಮ ಪಂಚಾಯಿತಿಗೆ ಅರ್ಜಿಯನ್ನು ಸಲ್ಲಿಸತಕ್ಕದ್ದು ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.
ಪರಂತು, ಅಪ್ರಾಪ್ತ ವಯಸ್ಕರಾದ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ, ನೌಕರನು/ಳು ಮರಣ ಹೊಂದಿದ ದಿನಾಂಕದಿಂದ ಎರಡು ವರ್ಷಗಳ ಒಳಗೆ 18 ವರ್ಷಗಳನ್ನು ಪೂರೈಸಿರತಕ್ಕದ್ದು ಮತ್ತು ತದನಂತರ ಎರಡು ವರ್ಷಗಳ ಒಳಗೆ ಅರ್ಜಿಯನ್ನು ಸಲ್ಲಿಸತಕ್ಕದ್ದು.” (2)(2) ನೇ ಉಪ ನಿಯಮದಲ್ಲಿ,-
(1) (2) (i) Be DOZS ಬದಲಾಗಿ, ಈ ಮುಂದಿನದನ್ನು ಪ್ರತಿಸ್ಥಾಪಿಸತಕ್ಕದ್ದು, ಎಂದರೆ:-
"(i) ಮೃತ ಪುರುಷ ವಿವಾಹಿತಗ್ರಾಮ ಪಂಚಾಯತಿ ನೌಕರನ ಸಂದರ್ಭದಲ್ಲಿ ಆತನಿಗೆ ಅವಲಂಬಿತರಾಗಿದ್ದ ಮತ್ತು ಆತನೊಂದಿಗೆ ವಾಸವಾಗಿದ್ದ-
(ಎ) ವಿಧವಾ ಪತ್ನಿ; ಮತ್ತು
(ಬಿ) ಮೃತನ ವಿಧವಾ ಪತ್ನಿಯು ನೇಮಕಾತಿಗಾಗಿ ಅರ್ಹಳಿಲ್ಲದಿದ್ದಲ್ಲಿ ಅಥವಾ ಸಮುಚಿತ ಕಾರಣಕ್ಕಾಗಿ ಅವಳು ನೇಮಕಾತಿಯನ್ನು ಒಪ್ಪದಿದ್ದಲ್ಲಿ, ಮೃತ ಗ್ರಾಮ ಪಂಚಾಯತಿ ನೌಕರನ ವಿಧವಾ ಪತ್ನಿಯು ಆಯ್ಕೆ ಮಾಡಿದ ಆತನ ಮಗ ಅಥವಾ ಮಗಳು.
ಟಿಪ್ಪಣಿ: ಮೃತ ಗ್ರಾಮ ಪಂಚಾಯತಿ ನೌಕರನ ಪತ್ನಿಯು ಆತನಿಗೂ ಮೊದಲೇ ಮೃತಪಟ್ಟಿದ್ದಲ್ಲಿ, ಮಕ್ಕಳ ವಯಸ್ಸಿಗನುಗುಣವಾಗಿ ಆದ್ಯತೆಯನ್ನು ನೀಡತಕ್ಕದ್ದು.
(2) (ia) ಖಂಡದ ಬದಲಾಗಿ, ಈ ಮುಂದಿನದನ್ನು ಪ್ರತಿಸ್ಥಾಪಿಸತಕ್ಕದ್ದು, ಎಂದರೆ:-
(ia) ಮೃತ ಪುರುಷ ಅವಿವಾಹಿತ ಗ್ರಾಮ ಪಂಚಾಯತಿ ನೌಕರನ ಸಂದರ್ಭದಲ್ಲಿ ಆತನಿಗೆ ಅವಲಂ೦ಬಿತರಾಗಿದ್ದ ಮತ್ತು ಆತನೊಂದಿಗೆ ವಾಸವಾಗಿದ್ದ ಆತನ ತಂದೆ ಅಥವಾ ತಾಯಿಯು ಆಯ್ಕೆ ಮಾಡಿದ ಅಥವಾ ಅವರ ಆಯ್ಕೆಯಲ್ಲಿ ಭಿನ್ನಾಭಿಪ್ರಾಯವಿದ್ದಲ್ಲಿ, ಆತನ ತಾಯಿಯು ಆಯ್ಕೆ ಮಾಡಿದ ಸಹೋದರ ಅಥವಾ ಸಹೋದರಿ;
ಟಿಪ್ಪಣಿ: ಮೃತ ಗ್ರಾಮ ಪಂಚಾಯತಿ ನೌಕರನ ತಂದೆ/ ತಾಯಿ ಆತನಿಗೂ ಮೊದಲೇ ಮೃತಪಟ್ಟಿದ್ದಲ್ಲಿ, ಸಹೋದರ / ಸಹೋದರಿಯ ವಯಸ್ಸಿಗನುಗುಣವಾಗಿ ಆದ್ಯತೆಯನ್ನು ನೀಡತಕ್ಕದ್ದು. (3) (ii) ನೇಖಂಡದ ಬದಲಾಗಿ, ಈ ಮುಂದಿನದನ್ನು ಪ್ರತಿಸ್ಥಾಪಿಸತಕ್ಕದ್ದು, ಎಂದರೆ:-
(1 ಮೃತ ಮಹಿಳಾ ವಿವಾಹಿತ ಗ್ರಾಮ ಪಂಚಾಯತಿ ನೌಕರಳ ಸಂದರ್ಭದಲ್ಲಿ ಆಕೆಗೆ ಅವಲಂ೦ಬಿತರಾಗಿದ್ದ ಮತ್ತು ಆಕೆಯೊಂದಿಗೆ ವಾಸವಾಗಿದ್ದ.-
(ಎ) ಮೃತ ಗ್ರಾಮ ಪಂಚಾಯತಿ ನೌಕರಳ ವಿಧುರ ಪತಿಯು ಆಯ್ಕೆ ಮಾಡಿದ ಮಗ ಅಥವಾ ಮಗಳು ಮತ್ತು;
(ಬಿ) ಮಗ ಅಥವಾ ಮಗಳು ಅರ್ಹರಿಲ್ಲದಿದ್ದಲ್ಲಿ ಅಥವಾ ಯಾವುದೇ ಸಮುಚಿತ ಕಾರಣಕ್ಕಾಗಿ ನೇಮಕಾತಿಯನ್ನು ಒಪ್ಪದಿದ್ದಲ್ಲಿ, ಆಕೆಯ ವಿಧುರ ಪತಿ;
ಟಿಪ್ಪಣಿ: ಮೃತ ಗ್ರಾಮ ಪಂಚಾಯತಿ ನೌಕರಳ ಪತಿಯು ಆಕೆಗೂ ಮೊದಲೇ ಮೃತಪಟ್ಟಿದ್ದಲ್ಲಿ, ಮಕ್ಕಳ ವಯಸ್ಸಿಗನುಗುಣವಾಗಿ ಆದ್ಯತೆಯನ್ನು ನೀಡತಕ್ಕದ್ದು.
(4) (iiಎ) ನೇಖಂಡದ ಬದಲಾಗಿ, ಈ ಮುಂದಿನದನ್ನು ಪ್ರತಿಸ್ಥಾಪಿಸತಕ್ಕದ್ದು, ಎಂದರೆ:-
(iid) ಮೃತ ಮಹಿಳಾ ಅವಿವಾಹಿತ ಗ್ರಾಮ ಪಂಚಾಯತಿ ನೌಕರಳ ಸಂದರ್ಭದಲ್ಲಿ ಆಕೆಗೆ ಅವಲಂ೦ಬಿತರಾಗಿದ್ದ ಮತ್ತು ಆಕೆಯೊಂದಿಗೆ ವಾಸವಾಗಿದ್ದ ಆಕೆಯ ತಂದೆ ಅಥವಾ ತಾಯಿಯು ಆಯ್ಕೆ ಮಾಡಿದ ಅಥವಾ ಅವರ ಆಯ್ಕೆಯಲ್ಲಿ ಭಿನ್ನಾಭಿಪ್ರಾಯವಿದ್ದಲ್ಲಿ, ಆಕೆಯ ತಾಯಿಯು ಆಯ್ಕೆ ಮಾಡಿದ ಸಹೋದರ ಅಥವಾ ಸಹೋದರಿ;
ಟಿಪ್ಪಣಿ: ಮೃತ ಗ್ರಾಮ ಪಂಚಾಯತಿ ನೌಕರಳ ತಂದೆ / ತಾಯಿ ಆಕೆಗೂ ಮೊದಲೇ ಮೃತಪಟ್ಟಿದ್ದಲ್ಲಿ, ಸಹೋದರ / ಸಹೋದರಿಯ ವಯಸ್ಸಿಗನುಗುಣವಾಗಿ ಆದ್ಯತೆಯನ್ನು ನೀಡತಕ್ಕದ್ದು.
(5) (iiಎ) ಖಂಡದ ತರುವಾಯ ಈ ಮುಂದಿನ ಖಂಡವನ್ನು ಸೇರಿಸತಕ್ಕದ್ದು,
(iii) ಮೃತ ವಿವಾಹಿತ ಗ್ರಾಮ ಪಂಚಾಯತಿ ನೌಕರನ /ಳ ಪತ್ನಿ / ಪತಿ ಈಗಾಗಲೇ ಮೃತಪಟ್ಟಿದ್ದು ಮತ್ತು ಅವರಿಗೆ ಅಪ್ರಾಪ್ತ ವಯಸ್ಕ ಮಕ್ಕಳಿದ್ದ ಸಂದರ್ಭದಲ್ಲಿ, ಸಂಬಂಧಿತ ಕಾನೂನಿನ ಉಪಬಂಧಗಳನ್ವಯ ಆ ಮಕ್ಕಳೊಂದಿಗೆ ವಾಸಿಸುವ ಹಾಗೂ ಅವರನ್ನು ಪೋಷಿಸುವ ಪ್ರಮಾಣೀಕೃತ ಪೋಷಕರು.
(iv) ಮೃತ ನೌಕರನ ಕಾನೂನು ಬಾಹಿರ ಎರಡನೆ ಪತ್ನಿ ಮತ್ತು ತದನಂತರದ ಪತ್ನಿಗೆ ಜನಿಸಿದ ಮಕ್ಕಳು.
(6) 3ನೇ ಉಪನಿಯಮದ ತರುವಾಯ, ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:
“ಪರಂತು, ಈ ನಿಯಮಗಳ ಅಡಿಯಲ್ಲಿ ನೇಮಕಾತಿಯನ್ನು ಕೋರುವ ಮೃತ ಗ್ರಾಮ ಪಂಚಾಯತಿ ನೌಕರನ /ಳ ವಿಧವಾ ಪತ್ನಿ ಅಥವಾ ವಿಧುರ ಪತಿಗೆ ಈ ಮೇಲೆ ವಿರ್ದಿಷ್ಟಪಡಿಸಿರುವ ವಯೋಮಿತಿಯು ಅನ್ವಯವಾಗತಕ್ಕದ್ದಲ್ಲ. ಈ ಅವಲಂಬಿತರ ವಯೋಮಿತಿಯು ಅರ್ಜಿ ಸಲ್ಲಿಸುವ ಸಮಯದಲ್ಲಿ ಐವತ್ತೈದು ವರ್ಷಗಳನ್ನು ಮೀರತಕ್ಕದ್ದಲ್ಲ.