ಈ ನಿಯಮಗಳಲ್ಲಿ ಸಂದರ್ಭಕ್ಕೆ ಅನ್ಯಥಾ ಅಗತ್ಯವಿರದ ಹೊರತು:-
(ಎ) 'ಅಧಿನಿಯಮ' ಎಂದರೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 (1993 ರ ಕರ್ನಾಟಕ ಅಧಿನಿಯಮ ಸಂಖ್ಯೆ 14) ಎಂದು ಕರೆಯುವುದು.
(ಬಿ) “ಜನಗಣತಿಯ ಸಂಖ್ಯೆಗಳು” ಎಂದರೆ ಜನಗಣತಿ ಅಧಿನಿಯಮ 1948ರ (ಕೇಂದ್ರ ಅಧಿನಿಯಮ 1948ರ 37) ಉಪಬಂಧಗಳನ್ವಯ ಭಾರತದ ಮಹಾ ನೋಂದಣಾಧಿಕಾರಿಗಳು ಹಾಗೂ ಜನಗಣತಿಯ ಆಯುಕ್ತರ ಕಛೇರಿಯಿಂದ ಪ್ರಕಟವಾದ ಕಳೆದ ಹಿಂದಿನ ಜನಗಣತಿ ವರದಿ.
(ಸಿ) “ಆಯೋಗ” ಎಂದರೆ ಅಧಿನಿಯಮದ ಪ್ರಕರಣ 308ರಡಿಯಲ್ಲಿನ ರಾಜ್ಯ ಚುನಾವಣಾ ಆಯೋಗ.
(ಡಿ) “ಕ್ಷೇತ್ರ ವಿಂಗಡಣೆ” ಎಂದರೆ ಜನಗಣತಿ ಅಂಕಿ-ಅಂಶಗಳನ್ನು ಆಧರಿಸಿ ಕ್ಷೇತ್ರಗಳ ಗಡಿಗಳ ಮರುಹೊಂದಾಣಿಕೆ ಮತ್ತು ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿಗಳಿಗೆ ಸ್ಥಾನಗಳ ಮರು ಹೊಂದಾಣಿಕೆ ಅಥವಾ ನಿಗದಿಪಡಿಸುವಿಕೆ ಎಂದು ಅರ್ಥೈಸುವುದು.
(ಇ) “ಅಡ್ಡ ಮೀಸಲಾತಿ” ಮೀಸಲಿರಿಸಿದ ಸ್ಥಾನಗಳನ್ನು ಒಳಗೊಂಡಂತೆ ಪ್ರತಿಯೊಂದು ವರ್ಗದಲ್ಲಿಯೂ ಮಹಿಳೆಯರಿಗೆ ಮೀಸಲಿರಸಬೇಕಾದ ಸ್ಥಾನಗಳು.
(ಎಫ್) “ಸ್ಥಾನಗಳು” ಅಂದರೆ ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗಳ ಸ್ಥಾನಗಳು.
(ಜಿ) “ಪ್ರಕರಣ” ಎಂದರೆ ಅಧಿನಿಯಮದ ಪ್ರಕರಣ.
(2) ಈ ನಿಯಮಗಳಲ್ಲಿ ಬಳಸಲಾದ ಮತ್ತು ಪರಿಭಾಷಿಸಿಲ್ಲದ ಇತರೆ ಪದಗಳು ಮತ್ತು ಪದಜೋಡಣೆಗಳಿಗೆ, ಆದರೆ ಅಧಿನಿಯಮದಲ್ಲಿ ಪರಿಭಾಷಿಸಲಾದಂತೆ ಅನುಕ್ರಮವಾಗಿ ಅರ್ಥವನ್ನು ಹೊಂದಿರತಕ್ಕದ್ದು.