ಈ ನಿಯಮಗಳು ಪ್ರಾರಂಭಗೊಂಡ ನಂತರ ಯಾವುದೇ ಕ್ಷೇತ್ರ ವಿಂಗಡನೆಯಲ್ಲಿ,-
(ಎ) ಮತಕ್ಷೇತ್ರದ ಪ್ರದೇಶವು, ಈ ಮೊದಲ ಮತಕ್ಷೇತ್ರದ ಹೆಚ್ಚಿನ ಪ್ರದೇಶವನ್ನು ಹೊಂದಿದಲ್ಲಿ, ಈ ನಿಯಮಗಳಡಿ ಆವರ್ತನೆಯನ್ನು ಮಾಡುವ ಸಲುವಾಗಿ ಅದನ್ನು ಈ ಹಿಂದಿನ ಮತಕ್ಷೇತ್ರದ ಅನುಕ್ರಮ ಮತ ಕ್ಷೇತ್ರವೆಂದು ಪರಿಗಣಿಸತಕ್ಕದ್ದು;
(ಬಿ) ಮತಕ್ಷೇತ್ರ ಅಥವಾ ಮತಕ್ಷೇತ್ರಗಳಿಂದ ರಚಿಸಲಾದ ಒಂದು ಮತಕ್ಷೇತ್ರವನ್ನು, ಹಿಂದಿನ ಮತಕ್ಷೇತ್ರದ ಸಣ್ಣ ಪ್ರದೇಶ ಅಥವಾ ಮತಕ್ಷೇತ್ರಗಳ ಸಣ್ಣ ಪ್ರದೇಶದ ವಿಲೀನಗಳೊಂದಿಗೆ ರಚಿತವಾಗಿತ್ತದೊ ಆ ಮತಕ್ಷೇತ್ರ ಹೊಸ ಮತಕ್ಷೇತ್ರವಾಗಿರತಕ್ಕದ್ದು. ಈ ಮತಕ್ಷೇತ್ರಕ್ಕೆ ಮೇಲಿನ ನಿಯಮ (3) ರಡಿಯಲ್ಲಿ ಮೀಸಲಾತಿಯನ್ನು ಹೊಸದಾಗಿ ಪ್ರಾರಂಭಿಸತಕ್ಕದ್ದು;
(ಸಿ) ಮತ್ತೊಂದು ಮತಕ್ಷೇತ್ರ ಅಥವಾ ಮತಕ್ಷೇತ್ರಗಳ ಪ್ರದೇಶವನ್ನು ಸೇರಿಸುವ ಮೂಲಕ ವಿಸ್ತರಿಸಲಾದ ಮತಕ್ಷೇತ್ರದಲ್ಲಿ ಈ ರೀತಿ ಸೇರ್ಪಡೆಗೊಳ್ಳುವ ಹಿಂದಿನ ಕ್ಷೇತ್ರದ ಆವರ್ತನೆಯ ಮೀಸಲನ್ನು ಮುಂದುವರೆಸತಕ್ಕದ್ದು; ಮತ್ತು
(ಡಿ) ಎರಡು ಅಥವಾ ಹೆಚ್ಚಿನ ಮತಕ್ಷೇತ್ರಗಳ ವಿಲೀನದಿಂದ ರಚಿಸಲಾದ ಮತಕ್ಷೇತ್ರಕ್ಕೆ, ಈ ಪೈಕಿ ದೊಡ್ಡ ಮತಕ್ಷೇತ್ರದ ಮೀಸಲನ್ನು ಮುಂದುವರೆಸತಕ್ಕದ್ದು;