ಕರ್ನಾಟಕ ಪಂಚಾಯತ್ ರಾಜ್ (ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗಳ ಸ್ಥಾನಗಳನ್ನು ಆವರ್ತನೆಯ ಮೇಲೆ ಮೀಸಲಿಡುವ) ನಿಯಮಗಳು, 1998 ಈ ಮೂಲಕ ನಿರಸನಗೊಳಿಸಲಾಗಿದೆ.
ಪರಂತು, ಅಂತಹ ನಿರಸನವು,-
(ಎ) ನಿರಸಿತವಾದ ನಿಯಮಗಳ ಹಿಂದಿನ ಕಾರ್ಯಾಚರಣೆ ಅಥವಾ ನಿರಸಿತವಾಗುವುದಕ್ಕಿಂತ ಮೊದಲು ಮಾಡಲಾದ ಯಾವುದೇ ಕಾರ್ಯ ಅಥವಾ ಕೈಗೊಂಡ ಯಾವುದೇ ಕ್ರಮ; ಅಥವಾ
(ಬಿ) ನಿರಸಿತವಾದ ನಿಯಮಗಳಡಿಯಲ್ಲಿ ಗಳಿಸಿದ, ಪ್ರಾಪ್ತವಾದ, ವಹಿಸಲಾದ, ಯಾವುದೇ ಹಕ್ಕು ಹೊಣೆಗಾರಿಕೆ ಅಥವಾ ಬಾಧ್ಯತೆಯ ಮೇಲೆ;
ಪರಿಣಾಮ ಉಂಟು ಮಾಡತಕ್ಕದ್ದಲ್ಲ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ
(ಬಿ. ನವೀನ್ ಕುಮಾರ್)
ಸರ್ಕಾರದ ಅಧೀನ ಕಾರ್ಯದರ್ಶಿ, (ಜಿ.ಪಂ.) (ಪ್ರ)
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ