(1) ಪ್ರತಿ ಜಿಲ್ಲಾ ಪಂಚಾಯತಿಯಲ್ಲಿ ಸ್ಥಾನಗಳ ಸಂಖ್ಯೆಯನ್ನು ಪ್ರತಿ ಮೀಸಲಿರಿಸಿದ ಮತ್ತು ಮೀಸಲಿರಿಸದ ಪ್ರವರ್ಗಗಳ ಸ್ಥಾನಗಳು; ಮೀಸಲಿರಿಸಿದ ಮತ್ತು ಮೀಸಲಿರಿಸದ ಸ್ಥಾನಗಳಲ್ಲಿ ಮಹಿಳೆಯರಿಗೆ ಸ್ಥಾನಗಳ ನಿರ್ಧಾರಣವನ್ನು ಅಧಿನಿಯಮದ ಪ್ರಕರಣ 161, 162 ಮತ್ತು 163ರ ಉಪ-ಬಂಧಗಳನ್ವಯ ನಿರ್ಧರಿಸತಕ್ಕದ್ದು;
ರಾಜ್ಯ ಚುನಾವಣಾ ಆಯೋಗವು ಜಿಲ್ಲಾ ಪಂಚಾಯತಿಯಲ್ಲಿ ಅನುಸೂಚಿತ ಪಂಗಡಗಳಿಗೆ ಸೇರಿದ ವ್ಯಕ್ತಿಗಳಿಗೆ ಮೀಸಲಿರಿಸಿದ ಸ್ಥಾನಗಳ ಪೈಕಿ ಅನುಸೂಚಿತ ಪಂಗಡಗಳ ಜನಸಂಖ್ಯೆ ಹೆಚ್ಚು ಇರುವ ತಾಲ್ಲೂಕುಗಳಿಗೆ ಆಧ್ಯತೆಯನ್ನು ನೀಡಿ ಜಿಲ್ಲೆಯಲ್ಲಿರುವ ತಾಲ್ಲೂಕುಗಳಿಗೆ ಒಂದೊಂದು ಸ್ಥಾನವನ್ನು ಆವರ್ತನೆಯ ಮೂಲಕ ಹಂಚಿಕೆ ಮಾಡತಕ್ಕದ್ದು;
ಪರಂತು, ಅನುಸೂಚಿತ ಪಂಗಡಗಳಿಗೆ ಸೇರಿದ ವ್ಯಕ್ತಿಗಳಿಗೆ ಮೀಸಲಿರಿಸಿದ ಸ್ಥಾನಗಳ ಸಂಖ್ಯೆಯು ಜಿಲ್ಲೆಯಲ್ಲಿನ ತಾಲ್ಲೂಕುಗಳ ಸಂಖ್ಯೆಗಿಂತ ಹೆಚ್ಚಿಗೆಯಾಗಿದ್ದರೆ, ಈ ಖಂಡದ ಅಡಿಯಲ್ಲಿ ಹಂಚಿಕೆ ಮಾಡಿದ ತರುವಾಯ ಉಳಿದ ಸ್ಥಾನಗಳನ್ನು ಅನುಸೂಚಿತ ಪಂಗಡಗಳ ಜನಸಂಖ್ಯೆ ಹೆಚ್ಚು ಇರುವ ತಾಲ್ಲೂಲುಗಳಿಗೆ ಆದ್ಯತೆ ನೀಡಿ ಆ ತಾಲ್ಲೂಕುಗಳಿಗೆ ಮತ್ತು ಹಂಚಿಕೆ ಮಾಡತಕ್ಕದ್ದು.
ಅನುಸೂಚಿತ ಜಾತಿಗಳಿಗೆ ಮೀಸಲಾದ ಸ್ಥಾನಗಳನ್ನು ಮೇಲಿನ ಉಪಬಂಧಗಳಲ್ಲಿ ಅನುಸೂಚಿತ ಪಂಗಡಗಳಿಗೆ ಸ್ಥಾನಗಳನ್ನು ಮೀಸಲಿರಿಸಿದ ರೀತಿಯಲ್ಲಿಯೇ ಆವರ್ತನೆಯ ಮೇರೆಗೆ ಹಂಚಿಕೆ ಮಾಡತಕ್ಕದ್ದು;
(2) ಆಯೋಗವು, ಜಿಲ್ಲಾ ಪಂಚಾಯತಿಯಲ್ಲಿನ ಆವರ್ತನೆಯ ಮೀಸಲಾತಿ ಮತ್ತು ಇರತೆ ವಿಷಯಗಳಿಗೆ ನಿಯಮ 3ರ ಉಪಬಂಧಗಳನ್ನು ಯಥೋಚಿತವಾಗಿ ಅನುಸರಿಸತಕ್ಕದ್ದು;