(1) ತಾಲ್ಲೂಕು ಪಂಚಾಯತಿಯಲ್ಲಿ ಪ್ರತಿಯಯೊಂದು ಪ್ರವರ್ಗಗಳಿಗೆ ಮೀಸಲಿಡಲಾದ ಹಾಗೂ ಮೀಸಲಿರಿಸದ ಸ್ಥಾನಗಳನ್ನು ಹಾಗೂ ಮೀಸಲಿರಿಸಲಾದ ಹಾಗೂ ಮೀಸಲಿರಿಸಿದ ಪ್ರವರ್ಗಗಳಲ್ಲಿ ಮಹಿಳೆಯರಿಗೆ ಸ್ಥಾನಗಳನ್ನು ಅಧಿನಿಯಮದ ಪ್ರಕರಣ 123ರಂತೆ ಮತ್ತು ಸಂವಿಧಾನ ಪರಿಚ್ಛೇದ 243D ರಂತೆ ನಿರ್ಧರಿಸತಕ್ಕದ್ದು;
(2) ಈ ನಿಯಮಗಳ ಉಪನಿಯಮ (3) ರಲ್ಲಿ ನಿರ್ದಿಷ್ಟಪಡಿಸಿದ ಮೀಸಲು ಕ್ರಮದಂತೆ ಪ್ರತಿ ತಾಲ್ಲೂಕು ಪಂಚಾಯತಿ ಪ್ರದೇಶದ ಕ್ಷೇತ್ರಗಳಲ್ಲಿ ಸ್ಥಾನಗಳ ಮೀಸಲಾತಿಯನ್ನು ಆವರ್ತನೆಯ ಮೇಲೆ ನಿಗದಿತ ಅನುಕ್ರಮದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಮಾಡತಕ್ಕದ್ದು;
(3) ಪ್ರತಿ ತಾಲ್ಲೂಕು ಪಂಚಾಯತಿಯಲ್ಲಿ ಈ ಕೆಳಗಿನ ವಿಷಯಗಳನ್ನು ಪರಿಗಣೆನೆಗೆ ತಗೆದುಕೊಂಡು ಸ್ಥಾನಗಳ ಮೀಸಲಾತಿಯನ್ನು ಮಾಡತಕ್ಕದ್ದು, ಅವುಗಳೆಂದರೆ:-
(ಎ) ಸಂವಿಧಾನದ (73 ರ ತಿದ್ದುಪಡಿ) ಅಧಿನಿಯಮ 1992ರ ನಂತರ ನಡೆದ ಸಾರ್ವಜನಿಕ ಚುನಾವಣೆಯಿಂದ ಪ್ರಾರಂಭಿಸಿ ಹಿಂದಿನ ಸಾರ್ವತ್ರಿಕ ಚುನಾವಣೆಗಳಲ್ಲಿನ ಮೀಸಲಾತಿಯನ್ನು ಪರಿಗಣಿಸಿ ಪ್ರತಿಯೊಂದು ಪ್ರಾದೇಶಿಕ ಚುನಾವಣಾ ಕ್ಷೇತ್ರದಲ್ಲಿ ಮುಂದಿನ ಚುನಾವಣೆಗೆ ಆವರ್ತನೆಯ ಮೇಲೆ ಪ್ರವರ್ಗಗಳ ಮೀಸಲಾತಿಯನ್ನು ನಿರ್ಧರಿಸತಕ್ಕದ್ದು;
(ಬಿ) ಆದ್ದರಿಂದ, ರಾಜ್ಯ ಚುನಾವಣಾ ಆಯೋಗವು ತಾಲ್ಲೂಕಿನ ಜನಸಂಖ್ಯೆಯಲ್ಲಿ ಶೇಕಡಾವಾರು ಅತೀ ಹೆಚ್ಚು ಅನುಸೂಚಿತ ಪಂಗಡಗಳ ಜನಸಂಖ್ಯೆ ಇರುವ ಮತ ಕ್ಷೇತ್ರಗಳನ್ನು ಅವರೋಹಣ ಕ್ರಮದಲ್ಲಿ ಪಟ್ಟಿ ಮಾಡತಕ್ಕದ್ದು;
(ಸಿ) ರಾಜ್ಯ ಚುನಾವಣಾ ಆಯೋಗವು ತಾಲ್ಲೂಕಿನ ಜನಸಂಖ್ಯೆಯಲ್ಲಿ ಶೇಕಡಾವಾರು ಅತೀ ಹೆಚ್ಚು ಅನುಸೂಚಿತ ಜಾತಿ ಜನಸಂಖ್ಯೆ ಇರುವ ಮತ ಕ್ಷೇತ್ರಗಳನ್ನು ಅವರೋಹಣ ಕ್ರಮದಲ್ಲಿ ಪಟ್ಟಿಮಾಡತಕ್ಕದ್ದು;
(ಡಿ) ಆಯೋಗವು ಅನುಸೂಚಿತ ಪಂಗಡಗಳಿಗೆ ಸೇರಿದ ವ್ಯಕ್ತಿಗಳಿಗಾಗಿ ಮೀಸಲಿರಿಸಿದ ಸ್ಥಾನಗಳನ್ನು ತಾಲ್ಲೂಕಿನ ಜನಸಂಖ್ಯೆಯಲ್ಲಿ ಅನುಸೂಚಿತ ಪಂಗಡಗಳ ಜನಸಂಖ್ಯೆಯ ಶೇಕಡಾವಾರು ಅತಿ ಹೆಚ್ಚು ಇರುವಂತಹ ಮತಕ್ಷೇತ್ರಗಳ ಆವರ್ತನೆಯ ಮೇಲೆ ನಿರ್ಧರಿಸತಕ್ಕದ್ದು, ಆದಾಗ್ಯೂ ಈಗಾಗಲೇ ಸದರಿ ಮತ ಕ್ಷೇತ್ರಕ್ಕೆ ಈ ಹಿಂದೆ ಅನುಸೂಚಿತ ಪಂಗಡ ಸ್ಥಾನ ಹಂಚಿಕೆಯಾಗಿದ್ದಲ್ಲಿ, ಅದೇ ಮೀಸಲಾತಿಯು ಪುನರಾವರ್ತನೆಯಾಗುತ್ತಿಲ್ಲವೆನ್ನುವುದನ್ನು ಖಾತರಿ ಪಡಿಸಿಕೊಳ್ಳುವುದು ಮತ್ತು ಅನುಸೂಚಿತ ಪಂಗಡದ ಮೀಸಲಾತಿಯ ಶೇಕಡಾವಾರು ಹೆಚ್ಚಿನ ಅನುಸೂಚಿತ ಪಂಗಡಗಳ ಜನಸಂಖ್ಯೆಯಿರುವ ನಂತರದ ಸ್ಥಾನಕ್ಕೆ ಮೇಲಿನ ಉಪನಿಯಮ (1) ರ ನಿಬಂಧನೆಗಳು ಹಾಗೂ ಷರತ್ತುಗಳಿಗೊಳಪಟ್ಟು ನಿಗದಿಗೊಳಿಸತಕ್ಕದ್ದು;
(ಇ) ಆಯೋಗವು ಅನುಸೂಚಿತ ಪಂಗಡದಿಂದ ಮಹಿಳೆಯರಿಗೆ ಸ್ಥಾನಗಳ ಮೀಸಲಾತಿ ಹಂಚಿಕೆ (ಅಡ್ಡ ಮೀಸಲಾತಿ) ಮಾಡುವಾಗ, ಅನುಸೂಚಿತ ಪಂಗಡದ ಸ್ಥಾನವನ್ನು ಹಂಚಿಕೆ ಮಾಡಲು ಅರ್ಹವಾಗಿರುವ ಮತಕ್ಷೇತ್ರಗಳ ಪೈಕಿ ಅತಿ ಹೆಚ್ಚಿನ ಅನುಸೂಚಿತ ಪಂಗಡಗಳ ಮಹಿಳಾ ಜನಸಂಖ್ಯೆಯಿರುವ ಮತಕ್ಷೇತ್ರಕ್ಕೆ ಹಂಚಿಕೆ ಮಾಡತಕ್ಕದ್ದು;
(ಎಫ್) ಆಯೋಗವು ಅನುಸೂಚಿತ ಜಾತಿಗೆ ಸೇರಿದ ವ್ಯಕ್ತಿಗಳಿಗೆ ಮೀಸಲಿರಿಸಿದ ಸ್ಥಾನಗಳನ್ನು ತಾಲ್ಲೂಕಿನ ಜನಸಂಖ್ಯೆಯಲ್ಲಿ ಶೇಕಡಾವಾರು ಅನುಸೂಚಿತ ಜಾತಿಯ ಜನಸಂಖ್ಯೆಯು ಅತೀ ಹೆಚ್ಚು ಇರುವಂತಹ ಮತಕ್ಷೇತ್ರಗಳಿಗೆ ಆವರ್ತನೆಯ ಮೇಲೆ ನಿರ್ಧರಿಸತಕ್ಕದ್ದು, ಆದಾಗ್ಯೂ , ಈಗಾಗಲೇ ಸದರಿ ಮತಕ್ಷೇತ್ರಕ್ಕೆ ಈ ಹಿಂದೆ ಅನುಸೂಚಿತ ಜಾತಿ ಸ್ಥಾನ ಹಂಚಿಕೆಯಾದಲ್ಲಿ ಅದೇ ಮೀಸಲಾತಿಯು ಪನರಾವರ್ತನೆಯಾಗುತ್ತಿಲ್ಲವೆನ್ನುವುದನ್ನು ಖಾತರಿ ಪಡಿಸಿಕೊಳ್ಳುವುದು ಮತ್ತು ಅನುಸೂಚಿತ ಜಾತಿಯ ಮೀಸಲಾತಿಯು ಶೇಕಡಾವಾರು ಹೆಚ್ಚಿನ ಅನುಸೂಚಿತ ಜಾತಿಯ ಜನಸಂಖ್ಯೆಯಿರುವ ನಂತರದ ಸ್ಥಾನಕ್ಕೆ ಮೇಲಿನ ಉಪನಿಯಮ (1)ರ ನಿಬಂಧನೆಗಳು ಹಾಗೂ ಷರತ್ತುಗಳಿಗೊಳಪಟ್ಟು ನಿದಗಿಗೊಳಿಸತಕ್ಕದ್ದು;
(ಜಿ) ಆಯೋಗವು ಅನುಸೂಚಿತ ಜಾತಿಯ ಮಹಿಳೆಯರ ಮೀಸಲಾತಿ ಸ್ಥಾನಗಳಿಗೆ ಹಂಚಿಕೆ (ಅಡ್ಡ ಮೀಸಲಾತಿ) ಮಾಡುವಾಗ ಅನುಸೂಚಿತ ಜಾತಿಯ ಸ್ಥಾನವನ್ನು ಹಂಚಿಕೆ ಮಾಡಲು ಅರ್ಹವಾಗಿರುವ ಮತಕ್ಷೇತ್ರಗಳ ಪೈಕಿ ಅತೀ ಹೆಚ್ಚಿನ ಅನುಸೂಚಿತ ಜಾತಿ ಮಹಿಳಾ ಜನಸಂಖ್ಯೆಯಿರುವ ಮತಕ್ಷೇತ್ರಕ್ಕೆ ಹಂಚಿಕೆ ಮಾಡತಕ್ಕದ್ದು;
(ಎಚ್) ತಾಲ್ಲೂಕು ಪಂಚಾಯತಿಯಲ್ಲಿ ಅನುಸೂಚಿತ ಪಂಗಡ ಮತ್ತು ಅನುಸೂಚಿತ ಜಾತಿ ಮೀಸಲಾತಿಯನ್ನು ನಿಗದಿಪಡಿಸಿದ ಸಂದರ್ಭದಲ್ಲಿ ಅಂತಹ ಮೀಸಲಾತಿಯನ್ನು ಶೇಕಡಾ ಐವತ್ತು ತಲುಪಿದಲ್ಲಿ ಅಥವಾ ಅದಕ್ಕಿಂತ ಹೆಚ್ಚಾದಲ್ಲಿ, ಅಂತಹ ಆಯೋಗವು ತಾಲ್ಲೂಕು ಪಂಚಾಯತಿಯಲ್ಲಿ ಹಿಂದುಳಿದ ವರ್ಗಗಳಿಗೆ ಯಾವುದೇ ಮೀಸಲಾತಿಯನ್ನು ಹಂಚಿಕೆ ಮಾಡತಕ್ಕದ್ದಲ್ಲ, ಮತ್ತು
(ಐ) ಈ ಮೇಲೆ ತಿಳಿಸಲಾದ ಉಪನಿಮಯ(ಎಚ್) ರ ಉಪಬಂಧಗಳಿಗೊಳಪಟ್ಟು ಆಯೋಗದಿಂದ ತಾಲ್ಲೂಕು ಪಂಚಾಯತಿಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾದ ಸ್ಥಾನಗಳನ್ನು ಕಾರ್ಯಸಾಧ್ಯವಾಗುವ ಮಟ್ಟಿಗೆ ಆವರ್ತನೆಯ ಮೇಲೆ ಹಂಚಿಕೆ ಮಾಡತಕ್ಕದ್ದು;
ಪರಂತು, ಹಿಂದಿನ ಅವಧಿಯಲ್ಲಿ ಒಂದು ಮತಕ್ಷೇತ್ರಕ್ಕೆ ಹಿಂದುಳಿದ ವರ್ಗ-ಎ ಅಥವಾ ಹಿಂದುಳಿದ ವರ್ಗ-ಬಿಎಂದು ಮೀಸಲಾತಿ ಹಂಚಿಕೆ ಮಾಡಿದ್ದಲ್ಲಿ, ಅದೇ ಉಪ-ಪ್ರವರ್ಗದ ಮೀಸಲಾತಿಯನ್ನು ಪುನರಾವರ್ತಿಸತಕ್ಕದ್ದಲ್ಲ;
(ಜೆ) ಆಯೋಗವು ಯಥಾಸಾದ್ಯವಾದ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಹಿಂದುಳಿದ ವರ್ಗಗಳಲ್ಲಿ ಮಹಿಳೆಯರಿಗೆ ಮೀಸಲಾದ ಸ್ಥಾನಗಳನ್ನು ಆವರ್ತನೆಯ ಮೇಲೆ ಹಂಚಿಕೆ ಮಾಡತಕ್ಕದ್ದು;
(ಕೆ) ಮೇಲೆ ಹೇಳಲಾದ ಹಂತಗಳನ್ನು ಪೂರ್ಣಗೊಳಿಸಿದ ನಂತರ, ಮೀಸಲಿಸಿರಿದ ಸ್ಥಾನಗಳಿಂದ (ಸಾಮಾನ್ಯ) ಮಹಿಳೆಯರಿಗೆ ಸ್ಥಾನವನ್ನು ಮೀಸಲಿಡುವಾಗ, ಮತಕ್ಷೇತ್ರದ ಒಟ್ಟು ಜನಸಂಖ್ಯೆಯಲ್ಲಿ ಅತ್ಯಂತ ಹೆಚ್ಚಿನ ಮಹಿಳಾ ಜನಸಂಖ್ಯೆ ಹೊಂದಿರುವ ಮತಕ್ಷೇತ್ರಕ್ಕೆ, ಆಯೋಗವು ಹಂಚಿಕೆ ಮಾಡತಕ್ಕದ್ದು ಅಥವಾ ಕಾಯ್ದಿರಿಸತಕ್ಕದ್ದು;
ಪರಂತು, ಸಾಧ್ಯವಾದಷ್ಟು ಹತ್ತಿರದಲ್ಲಿ ಪುನರಾವರ್ತನೆಯಾಗತಕ್ಕದ್ದಲ್ಲ;
(ಎಲ್ ) ಪ್ರತಿಯೊಂದು ಪ್ರವರ್ಗದಲ್ಲಿ ಮಹಿಳೆಯರಿಗೆ ಮೀಸಲಿಡಲಾದ ಸ್ಥಾನಗಳು ಮತ್ತು ಮೀಸಲಿರಿಸದ ಸ್ಥಾನಗಳ (ಸಾಮಾನ್ಯ) ಪೈಕಿ ಮಹಿಳೆಯರಿಗೆ ಮೀಸಲಿಡಲಾದ ಸ್ಥಾನಗಳು ಸಾಧ್ಯವಾದಷ್ಟು ಮಟ್ಟಿಗೆ ಪುನರಾವರ್ತನೆಯಾಗತಕ್ಕದ್ದಲ್ಲ ಮತ್ತು ಮೀಸಲಿರಿಸಲಾದ ಹಾಗೂ ಮೀಸಲಿರಿಸಿದ ಸ್ಥಾನಗಳ ಪೈಕಿ ಮಹಿಳೆಯರಿಗಾಗಿ ಇರುವಂತಹ ಮೀಸಲಾತಿಯು ಸಂಬಂಧಪಟ್ಟ ಪ್ರವರ್ಗ ಅಥವಾ ಮೀಸಲಿರಿಸಿದ ಸ್ಥಾನಗಳ ಪೈಕಿ ಅತ್ಯಂತ ಹೆಚ್ಚಿನ ಮಹಿಳಾ ಜನಸಂಖ್ಯೆಯನ್ನು ಹೊಂದಿರುವ ನಂತರದ ಮತಕ್ಷೇತ್ರಕ್ಕೆ ಪ್ರವಹಿಸತಕ್ಕದ್ದು;