ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ಅಧಿನಿಯಮ, 1994 ಪ್ರಕರಣಗಳ ಕ್ರಮ ಪಟ್ಟಿ
ಉದ್ದೇಶಗಳು ಮತ್ತು ಕಾರಣಗಳ ಹೇಳಿಕೆ ಪ್ರಕರಣಗಳು: \ ಅಧ್ಯಾಯ I
ಪ್ರಾರಂಭಿಕ
- ಚಿಕ್ಕ ಹೆಸರು, ವ್ಯಾಪ್ತಿ ಮತ್ತು ಪ್ರಾರಂಭ.
- ಪರಿಭಾಷೆಗಳು.
- ಆಯೋಗದ ರಚನೆ.
- ಆಧ್ಯಕ್ಷ ಮತ್ತು ಸದಸ್ಯರ ಪದಾವಧಿ ಮತ್ತು ಸೇವಾ ಷರತ್ತುಗಳು.
- ಸದಸ್ಯತ್ವದ ಸ್ಥಾನಕ್ಕೆ ಅನರ್ಹತೆಗಳು.
- ಕಾರ್ಯದರ್ಶಿ.
- ಆಯೋಗದ ಸಿಬ್ಬಂದಿ.
- ಆಯೋಗದ ಸಭೆಗಳು.
- ರಿಕ್ತತೆ ಇತ್ಯಾದಿಗಳು ಆಯೋಗದ ವ್ಯವಹರಣೆಗಳನ್ನು ಅನೂರ್ಜಿತಗೊಳಿಸತಕ್ಕದ್ದಲ್ಲ.
- ಆಯೋಗದ ಪ್ರಕಾರ್ಯಗಳು. 10ಎ. ಆಯೋಗದ ಅಧಿಕಾರಗಳು.
- ಸದ್ಭಾವನೆಯಿಂದ ಕೈಗೊಳ್ಳಲಾದ ಕ್ರಮಕ್ಕೆ ರಕ್ಷಣೆ.
- ಆಯೋಗದ ಆಯವ್ಯಯ ಪತ್ರ ಮತ್ತು ಸರ್ಕಾರದಿಂದ ಅನುದಾನಗಳು.
- ಲೆಕ್ಕ ಪತ್ರ ಮತ್ತು ಲೆಕ್ಕಪರಿಶೋಧನೆ.
- ವಾರ್ಷಿಕ ವರದಿ.
- ವಾರ್ಷಿಕ ವರದಿಯನ್ನು ಮತ್ತು ಲೆಕ್ಕ ಪರಿಶೋಧನಾ ವರದಿಯನ್ನು ವಿಧಾನಮಂಡಲದಲ್ಲಿ ಮಂಡಿಸತಕ್ಕದ್ದು.
- ಅಧ್ಯಕ್ಷರು, ಮುಂತಾದವರು ಲೋಕ ನೌಕರರಾಗಿರತಕ್ಕದ್ದು.
- ನಿಯಮ ರಚನಾಧಿಕಾರ.
- ತೊಂದರೆಗಳ ನಿವಾರಣೆಗೆ ಅಧಿಕಾರ. ಉದ್ದೇಶಗಳು ಮತ್ತು ಕಾರಣಗಳ ಹೇಳಿಕೆ
1994ರ ಅಧಿನಿಯಮ ಸಂಖ್ಯೆ 31.Š ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ 15 ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೊಳಿಸುವಲ್ಲಿ ನಿರಂತರ ಗಮನ ಹರಿಸಿರುವುದಲ್ಲದೇ ಅಲ್ಪಸಂಖ್ಯಾತರ ಸಾಮಾಜಿಕ, ಶೈಕ್ಷಣಿಕ ಮತ್ತು ಅರ್ಥಿಕ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ ಸರ್ಕಾರವು ಇತ್ತೀಚೆಗೆ ಬಹಳಷ್ಟು ಕ್ರಮಗಳನ್ನು ಕೈಗೊಂಡಿದೆ. ರಾಜ್ಯ ಅಲ್ಪಸಂಖ್ಯಾತರ ಆಯೋಗವು ಅಲ್ಪಸಂಖ್ಯಾತರ ಸಾಮಾಜಿಕŠಆರ್ಥಿಕ ಮತ್ತು ಶೈಕ್ಷಣಿಕ ಮೀಕ್ಷೆಯನ್ನು ನಡೆಸಿದೆ. ಈ ರೀತಿಯ ಸಮೀಕ್ಷೆಯು ರಾಷ್ಟ್ರದಲ್ಲಿ ಇದೇ ಮೊದಲ ಸ ¨ Áರಿಯದಾಗಿದೆ. ಅಲ್ಪಸಂಖ್ಯಾತರ ಸರ್ವತೋಮುಖ ಅಭಿವೃದ್ಧಿಯನ್ನು ಪರಿಶೀಲಿಸುವ ದೃಷ್ಟಿಯಿಂದ ಸರ್ಕಾರವು, ರಾಜ್ಯ ಅಲ್ಪಸಂಖ್ಯಾತರ ಆಯೋಗಕ್ಕೆ ಶಾಸನಬದ್ಧ ಅಧಿಕಾರ ನೀಡಲು ಉದ್ದೇಶಿಸಿದೆ. (1994ರ ವಿಧಾನ ಸಭಾ ವಿಧೇಯಕ ಸಂಖ್ಯೆ 18 ರಲ್ಲಿದ್ದಂತೆ)
II
2011ರ ಅಧಿನಿಯಮ ಸಂಖ್ಯೆ 35.- ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ಅಧಿನಿಯಮ, 1994ನ್ನು ಈ ಮುಂದಿನ ಉಪಬಂಧಗಳನ್ನು ಕಲ್ಪಿಸುವುದಕ್ಕಾಗಿ ತಿದ್ದುಪಡಿ ಮಾಡುವುದು ಅವಶ್ಯವೆಂದು ಪರಿಗಣಿಸಲಾಗಿದೆ,-
(1) ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ ಪದವಿಯನ್ನು ಪಡೆದಿರುವವರನ್ನು ಆಯೋಗದ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡುವುದು;
(2) ಇತರ ಎಂಟು ಸದಸ್ಯರ ಪೈಕಿ ಕ್ರಿಶ್ಚಿಯನ್, ಜೈನ್, ಬೌದ್ಧ ಮತ್ತು ಸಿಖ್ ಈ ಪ್ರತಿಯೊಂದು ಸಮುದಾಯದಿಂದ ಕನಿಷ್ಠ ಒಬ್ಬರಿಗೆ ಸದಸ್ಯತ್ವ ನೀಡುವುದು;
(3) ಸದಸ್ಯರಿಗೆ ಸಂಬಳ ಮತ್ತು ಭತ್ಯೆಗಳಿಗೆ ಬದಲಾಗಿ ಭತ್ಯೆಗಳನ್ನು ಸಂದಾಯ ಮಾಡುವುದು;
(4) ಆಯೋಗದ ಹೆಚ್ಚುವರಿ ಕರ್ತವ್ಯವಾಗಿ ಪ್ರಧಾನ ಮಂತ್ರಿಗಳ ಹೊಸ 15 ಅಂಶದ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಶಿಫಾರಸ್ಸುಗಳನ್ನು ಮಾಡುವುದು. ಆದ್ದರಿಂದ ಈ ವಿಧೇಯಕ.
(2011ರ ವಿಧಾನಸಭೆಯ ವಿಧೇಯಕ ಸಂಖ್ಯೆ:28, ಕಡತ ಸಂಖ್ಯೆ:ಸಂವ್ಯಶಾಇ 44 ಶಾಸನ 2010) (ಭಾರತ ಸಂವಿಧಾನದ 7ನೇ ಅನುಸೂಚಿಯ 2ನೇ ಪಟ್ಟಿಯ 5ನೇ ನಮೂದನೆಯಡಿಯಲ್ಲಿ ಬರುತ್ತದೆ.)
III
2016ರ ಅಧಿನಿಯಮ ಸಂಖ್ಯೆ 13.- ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ಅಧಿನಿಯಮ, 1994ನ್ನು,- (1) ಆಯೋಗದ ರಚನೆಯಲ್ಲಿ ಅಲ್ಪಸಂಖ್ಯಾತ ಸಮುದಾಯವಾದ ಪಾರ್ಸಿಗಳ ಪ್ರಾತಿನಿಧ್ಯಕ್ಕಾಗಿ ಉಪಬಂಧ ಕಲ್ಪಿಸುವುದಕ್ಕೆ ಮತ್ತು (2) ಆಯೋಗಕ್ಕೆ ಸಿವಿಲ್ ನ್ಯಾಯಾಲಯದ ಅಧಿಕಾರವನ್ನು ಪ್ರಧಾನ ಮಾಡುವುದಕ್ಕೆ - ತಿದ್ದುಪಡಿ ಮಾಡುವುದು ಅವಶ್ಯವೆಂದು ಪರಿಗಣಿಸಲಾಗಿದೆ. ಆದ್ದರಿಂದ ಈ ವಿಧೇಯಕ. (2016ರ ವಿಧಾನಸಭೆಯ ವಿಧೇಯಕ ಸಂಖ್ಯೆ 03:, ಕಡತ ಸಂಖ್ಯೆ:-ಸಂವ್ಯಶಾಇ 09 ಶಾಸನ 2015) (ಭಾರತ ಸಂವಿಧಾನದ 7ನೇ ಅನುಸೂಚಿಯ 2ನೇ ಪಟ್ಟಿಯ 32ನೆಯ ನಮೂದನೆಯಡಿಯಲ್ಲಿ ಬರುತ್ತದೆ.
1994ರ ಕರ್ನಾಟಕ ಅಧಿನಿಯಮ ಸಂಖ್ಯೆ 31 (1994ರ ಅಕ್ಟೋಬರ್ ಮೂರನೇ ದಿನಾಂಕದಂದು ಕರ್ನಾಟಕ ರಾಜ್ಯಪತ್ರದ ವಿಶೇಷ ಂಚಿಕೆಯಲ್ಲಿ ಮೊದಲು ಪ್ರಕಟವಾಗಿದೆ) ಸ
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ಅಧಿನಿಯಮ, 1994 (1994ರ ಸೆಪ್ಟೆಂಬರ್ ಮೂವತ್ತನೆ ದಿನಾಂಕದಂದು ರಾಜ್ಯಪಾಲರ ಅನುಮತಿಯನ್ನು ಪಡೆಯಲಾಗಿದೆ) (2011ನೇ ಅಧಿನಿಯಮ ಸಂಖ್ಯೆ 35 ಮತ್ತು 2016ರ ಅಧಿನಿಯಮ ಂಖ್ಯೆ13ರಲ್ಲಿ ತಿದ್ದುಪಡಿಯಾದಂತೆ) ಸ
ಅಲ್ಪಸಂಖ್ಯಾತರಿಗೆ ರಾಜ್ಯ ಆಯೋಗವನ್ನು ರಚಿಸಲು ಮತ್ತು ಅದಕ್ಕೆ ಸಂಬಂಧಪಟ್ಟ ಅಥವಾ ಅದಕ್ಕೆ ಅನುಷಂಗಿಕವಾದ ವಿಷಯಗಳಿಗೆ ಉಪಬಂಧ ಕಲ್ಪಿಸಲು ಒಂದು ಅಧಿನಿಯಮ. ಅಲ್ಪಸಂಖ್ಯಾತರಿಗೆ ರಾಜ್ಯ ಆಯೋಗವನ್ನು ರಚಿಸುವುದು ಮತ್ತು ಅದಕ್ಕೆ ಸಂಬಂಧಪಟ್ಟ ಅಥವಾ ಅದಕ್ಕೆ ಅನುಷಂಗಿಕವಾದ ವಿಷಯಗಳಿಗೆ ಉಪಬಂಧ ಕಲ್ಪಿಸುವುದು ಯುಕ್ತವಾಗಿರುವುದರಿಂದ;
ಇದು ಭಾರತ ಗಣರಾಜ್ಯದ ನಲವತ್ತೈದನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗತಕ್ಕದ್ದು.Š
ಪ್ರಾರಂಭಿಕ
- ಚಿಕ್ಕ ಹೆಸರು, ವ್ಯಾಪ್ತಿ ಮತ್ತು ಪ್ರಾರಂಭ.Š (1) ಈ ಅಧಿನಿಯಮವನ್ನು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ಅಧಿನಿಯಮ, 1994 ಎಂದು ಕರೆಯತಕ್ಕದ್ದು.
(2) ಇದು ಕರ್ನಾಟಕ ರಾಜ್ಯದಾದ್ಯಂತ ವ್ಯಾಪ್ತಿಯಲ್ಲಿರತಕ್ಕದ್ದು.
(3) ಇದು ಕೂಡಲೇ ಜಾರಿಯಲ್ಲಿ ಬರತಕ್ಕದ್ದು. 2. ಪರಿಭಾಷೆಗಳು.Š ಈ ಅಧಿನಿಯಮದಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,Š (ಎ) ‘‘ಆಯೋಗ'' ಎಂದರೆ ಅಧಿನಿಯಮದ 3ನೇ ಪ್ರಕರಣದ ಅಡಿಯಲ್ಲಿ ರಚಿತವಾದ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ;
(ಬಿ) ‘‘ಸರ್ಕಾರ'' ಎಂದರೆ ಕರ್ನಾಟಕ ಸರ್ಕಾರ;
(ಸಿ) ‘‘ ಸದಸ್ಯ'' ಎಂದರೆ ಆಯೋಗದ ಒಬ್ಬ ಸದಸ್ಯ;
(ಡಿ) ‘‘ಅಲ್ಪಸಂಖ್ಯಾತರು'' ಎಂದರೆ ಸರ್ಕಾರವು ಅಲ್ಪಸಂಖ್ಯಾತರೆಂದು ಮಾನ್ಯತೆ ನೀಡಿದ, ಕರ್ನಾಟಕ ರಾಜ್ಯದಲ್ಲಿ ವಾಸಿಸುತ್ತಿರುವ ಅಲ್ಪಸಂಖ್ಯಾತ ಮುದಾಯಗಳಿಗೆ ಸೇರಿದ ವ್ಯಕ್ತಿಗಳು. ಸ 3. ಆಯೋಗದ ರಚನೆ.Š (1) ಈ ಅಧಿನಿಯಮದ ಪ್ರಾರಂಭದ ತರುವಾಯ ಆದಷ್ಟು ಬೇಗನೆ ರ್ಕಾರವು, ಈ ಅಧಿನಿಯಮದ ಅಡಿಯಲ್ಲಿ ತನಗೆ ಪ್ರದತ್ತವಾದ ಅಧಿಕಾರಗಳನ್ನು ಸ ಚಲಾಯಿಸಲು ಮತ್ತು ವಹಿಸಲಾದ ಪ್ರಕಾರ್ಯಗಳನ್ನು ನೆರವೇರಿಸಲು, ಬೆಂಗಳೂರಿನಲ್ಲಿ ಕೇಂದ್ರಕಾರ್ಯಸ್ಥಾನ ಹೊಂದಿರುವ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ಎಂದು ಕರೆಯಲಾಗುವ ಒಂದು ನಿಕಾಯವನ್ನು ರಚಿಸತಕ್ಕದ್ದು. 1 [(2) ಆಯೋಗವು ಈ ಕೆಳಗಿನವರನ್ನು ಹೊಂದಿರತಕ್ಕದ್ದು,-
(ಎ) ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವ್ಯಕ್ತಿಯು ಅಧ್ಯಕ್ಷರಾಗಿರತಕ್ಕದ್ದು ಹಾಗೂ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದಿರುವ, ಅಲ್ಪಸಂಖ್ಯಾತ ಮುದಾಯದಿಂದ ಮತ್ತು ಕ್ರಿಶ್ಚಿಯನ್, ಜೈನ್, ಬೌದ್ಧ, ಸ
2 2 [ಸಿಖ್ ಮತ್ತು ಝೋರಾಸ್ಟ್ರಿಯನ್ (ಪಾರ್ಸಿ)] ಈ ಪ್ರತಿಯೊಂದು ಸಮುದಾಯದಿಂದ ಒಬ್ಬರಿಗಿಂತ ಕಡಿಮೆ ಇಲ್ಲದಂತೆ ಇತರ ಎಂಟು ಸದಸ್ಯರನ್ನು ಹೊಂದಿರತಕ್ಕದ್ದು. 3 3 [ ಪರಂತು, ಅಂಥ ಸದಸ್ಯರ ಪೈಕಿ ಕನಿಷ್ಠ ಪಕ್ಷ ಒಬ್ಬರು ಮಹಿಳೆಯಾಗಿರತಕ್ಕದ್ದು.]
(ಬಿ) ಸರ್ಕಾರದ ಉಪ ಕಾರ್ಯದರ್ಶಿಯವರ ದರ್ಜೆಗಿಂತ ಕಡಿಮೆಯಲ್ಲದ ದರ್ಜೆಯ ಅಧಿಕಾರಿಯಾಗಿರುವ ಸರ್ಕಾರದಿಂದ ನೇಮಿಸಲ್ಪಟ್ಟ ಆಯೋಗದ ಕಾರ್ಯದರ್ಶಿಯನ್ನು ಹೊಂದಿರತಕ್ಕದ್ದು.
- 2011ರ ಅಧಿನಿಯಮ ಸಂಖ್ಯೆ: 35ರ ಮೂಲಕ ದಿನಾಂಕ: 16.07.2011ರಿಂದ ಪ್ರತಿಯೋಜಿಸಲಾಗಿದೆ.
- 2016ರ ಅಧಿನಿಯಮ ಸಂಖ್ಯೆ: 13ರ ಮೂಲಕ ದಿನಾಂಕ: 26.04.2016ರಿಂದ ಪ್ರತಿಯೋಜಿಸಲಾಗಿದೆ.
- 2016ರ ಅಧಿನಿಯಮ ಸಂಖ್ಯೆ: 13ರ ಮೂಲಕ ದಿನಾಂಕ: 26.04.2016ರಿಂದ ೀರಿಸಲಾಗಿದೆ. ಸ
- ಅಧ್ಯಕ್ಷ ಮತ್ತು ಸದಸ್ಯರ ಪದಾವಧಿ ಮತ್ತು ಸೇವಾ ಷರತ್ತುಗಳು.:- (1) ಸರ್ಕಾರದ ಇಚ್ಫೆಗೊಳಪಟ್ಟು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ಅವರು ಪದವನ್ನು ಧಾರಣಮಾಡಿದ ದಿನಾಂಕದಿಂದ ಮೂರು ವರ್ಷಗಳ ಅವಧಿಯವರೆಗೆ ತಮ್ಮ ಪದವನ್ನು ಧಾರಣ ಮಾಡತಕ್ಕದ್ದು. (2) ಆಯೋಗದ ಅಧ್ಯಕ್ಷ ಅಥವಾ ಯಾರೇ ಸದಸ್ಯ ಸರ್ಕಾರಕ್ಕೆ ತನ್ನ ಸಹಿಯೊಂದಿಗೆ ಪತ್ರ ಬರೆದು ತನ್ನ ಪದಕ್ಕೆ ರಾಜೀನಾಮೆ ನೀಡಬಹುದು. ಆದರೆ ಅವನ ರಾಜೀನಾಮೆಯು ಅಂಗೀಕಾರವಾಗುವವರೆಗೆ ಪದದಲ್ಲಿ ಮುಂದುವರೆಯತಕ್ಕದ್ದು.
1 [(3) ಅಧ್ಯಕ್ಷರು ನಿಯಮಿಸಬಹುದಾದಂಥ ವೇತನ ಮತ್ತು ಭತ್ಯೆಗಳನ್ನು ಹಾಗೂ ಇತರ 1 ದಸ್ಯರು ನಿಯಮಿಸಬಹುದಾದಂಥ ಭತ್ಯೆಗಳನ್ನು ಸ್ವೀಕರಿಸತಕ್ಕದ್ದು.] ಸ
1 (4) [ಅಧ್ಯಕ್ಷರಿಗೆ ಸಂದಾಯ ಮಾಡಬೇಕಾದ ವೇತನ ಮತ್ತು ಭತ್ಯೆಗಳನ್ನು ಹಾಗೂ 1 ಇತರ ಸದಸ್ಯರಿಗೆ ಸಂದಾಯ ಮಾಡಬೇಕಾದ ಭತ್ಯೆಗಳನ್ನು] 12ನೇ ಪ್ರಕರಣದ (2)ನೇ ಉಪŠಪ್ರಕರಣದಲ್ಲಿ ಉಲ್ಲೇಖಿಸಲಾದ ಅನುದಾನಗಳಿಂದ ಭರಿಸತಕ್ಕದ್ದು.
(5) ಸದಸ್ಯನ ಪದದಲ್ಲಿ ಉಂಟಾಗುವ ಆಕಸ್ಮಿಕ ರಿಕ್ತತೆಯನ್ನು ಸಂಬಂಧಪಟ್ಟ ಪ್ರಾಧಿಕಾರವು ಆದಷ್ಟು ಬೇಗನೆ ಭರ್ತಿಮಾಡತಕ್ಕದ್ದು ಮತ್ತು ಹಾಗೆ ನಾಮನಿರ್ದೇಶಿತನಾದ ದಸ್ಯನು ತನ್ನ ಪೂರ್ವಾಧಿಕಾರಿಯ ಪದiÁವಧಿಯು ಮುಕ್ತಾಯವಾಗದ ಭಾಗದವರೆಗೆ ಸ ಪದಧಾರಣ ಮಾಡತಕ್ಕದ್ದು.
- 2011ರ ಅಧಿನಿಯಮ ಸಂಖ್ಯೆ: 35ರ ಮೂಲಕ ದಿನಾಂಕ: 16.07.2011ರಿಂದ ಪ್ರತಿಯೋಜಿಸಲಾಗಿದೆ.
- ಸದಸ್ಯತ್ವದ ಸ್ಥಾನಕ್ಕೆ ಅನರ್ಹತೆಗಳು.Š (1) ಒಬ್ಬ ವ್ಯಕ್ತಿಯು,- (ಎ) ಸರ್ಕಾರದ ಅಭಿಪ್ರಾಯದಲ್ಲಿ ನೈತಿಕ ಅಧಃಪತನವನ್ನೊಳಗೊಳ್ಳುವ ಒಂದು ಅಪರಾಧಕ್ಕಾಗಿ ಅಪರಾಧಿಯೆಂದು ನಿರ್ಣೀ