(1) (2)ನೇ ಉಪ ನಿಯಮದಲ್ಲಿ ಉಪಬಂಧಿಸದುದನ್ನುಳಿದ ಆಯೋಗಕ್ಕೆ ಮಂಜೂರು ಮಾಡಲಾದ ಎಲ್ಲಾ ಹುದ್ದೆಗಳನ್ನು ರಾಜ್ಯ ಸಿವಿಲ್ ೀವೆಗಳು:ವಿಶ್ವಾವಿದ್ಯಾಲಯಗಳು: ಸ್ಥಳೀಯ ಪ್ರಾಧಿಕಾರಗಳು: ಸಾರ್ವಜನಿಕ ವಲಯ ಸ ಉದ್ದಿಮೆಗಳು: ಸ್ವಾಯುತ್ತ ಸಂಸ್ಥೆಗಳು:ನಿಗಮಗಳಿಂದ, ಸಮಾನವೇತನ ಶ್ರೇಣಿ ಮತ್ತು ದರ್ಜೆಯನ್ನು ಹೊಂದಿರುವ ಅಧಿಕಾರಿಗಳು: ನೌಕರರನ್ನು ಪ್ರತಿನಿಯೋಜನೆಯ ಮೇರೆಗೆ ¨ sರ್ತಿ ಮಾಡತಕ್ಕದ್ದು, ಅಥವಾ ಯಾವುದೇ ಸೇವೆಗಳಿಂದ ನಿವೃತ್ತಿ ಹೊಂದಿದವರನ್ನು ಕರಾರು ಆಧಾರದ ಮೇಲೆ ನೇಮಕ ಮಾಡತಕ್ಕದ್ದು. ಪ್ರತಿನಿಯೋಜನೆಯ ಮತ್ತು ಕರಾರು ಆಧಾರದ ಮೇಲೆ ಮಾಡಲಾಗುವ ನೇಮಕಾತಿಗಳು, ಕರ್ನಾಟಕ ಸಿವಿಲ್ ಸೇವಾ (ಸಾಮನ್ಯ ನೇಮಕಾತಿ) ನಿಯಮಗಳು-1977ರ ಅನ್ವಯ ಮತ್ತು ಕಾಲಕಾಲಕ್ಕೆ ಹೊರಡಿಸಲಾಗುವ ರ್ಕಾರದ ಆದೇಶಗಳಿಗೆ ಒಳಪಟ್ಟಿರತಕ್ಕದ್ದು, ಸ
(2) ಅಧ್ಯಕ್ಷರ ಆಪ್ತ ಸಿಬ್ಬಂದಿ ವರ್ಗಕ್ಕೆ ಮಂಜೂರು ಮಾಡಲಾದ ಸಿಬ್ಬಂದಿಯನ್ನು Áಧ್ಯವಾದಷ್ಟು ಮಟ್ಟಿಗೆ ಮೇಲೆ ನಿರ್ಧಿಷ್ಟಪಡಿಸಲಾದ ವಿಧಾನದಲ್ಲಿ ಪ್ರತಿನಿಯೋಜನೆ ಆಧಾರದ ಸ ಮೇಲೆ ಮತ್ತು ಕಾಲಕಾಲಕ್ಕೆ ಸರ್ಕಾರವು ಅಧ್ಯಕ್ಷರಿಗೆ ನೀಡುವ ಸ್ಥಾನಮಾನಗಳಿಗನುಸಾರವಾಗಿ ಹ ನೇಮಕ ಮಾಡಬಹುದು. ಮೇಲೆ ಹೇಳಿದ ಮೂಲಗಳಿಂದ ಸೂಕ್ತ ಸಿಬ್ಬಂದಿಯು ಸ ದೊರೆಯದಿದ್ದಲ್ಲಿ ಅಧ್ಯಕ್ಷರ ಆಪ್ತ ಕಾರ್ಯದರ್ಶಿಯ ಹುದ್ದೆಯನ್ನು ಹೊರತುಪಡಿಸಿ ಇತರೆ ಎಲ್ಲಾ ಹುದ್ದೆಗಳಿಗೆ ಸೂಕ್ತ ನಿಬಂಧನೆಗಳು ಮತ್ತು ಷರತ್ತುಗಳ ಮೇಲೆ ಕರಾರು ಆಧಾರದ ಮೇಲೆ ನೇಮಕ ಮಾಡಬಹುದು. ಕರಾರು ಆಧಾರದ ಮೇಲೆ ನೇಮಕ ಮಾಡಲಾದ ಅಂಥ ಎಲ್ಲಾ ಹುದ್ದೆಗಳು ಅಧ್ಯಕ್ಷರ ಪದದ ಅವಧಿಯೊಂದಿಗೆ ಮುಕ್ತಾಯವಾಗತಕ್ಕದ್ದು, 1 [“5ಎ.ಆಯೋಗದಿಂದ ತನಿಖೆ ಮತ್ತು ವಿಚಾರಣೆ:- (1) ಆಯೋಗವು, ಅಲ್ಪಸಂಖ್ಯಾತರ ುರಕ್ಷತೆಗಳು, ರಕ್ಷಣೆ, ಕ್ಷೇಮಾಭಿವೃದ್ಧಿ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳನ್ನು ಸ ತನಿಖೆ ಮಾಡಲು ಅಥವಾ ಆಯೋಗವು ನೇರವಾಗಿ ತನಿಖೆ ಅಥವಾ ವಿಚಾರಣೆ ನಡೆಸಲು ತೀರ್ಮಾನಿಸಿರುವಂಥ ನಿರ್ದಿಷ್ಟ ದೂರುಗಳ ಬಗ್ಗೆ ವಿಚಾರಣೆ ನಡೆಸಲು ಉಪವೇಶನಗಳನ್ನು ನಡೆಸಬಹುದು. ಅಂಥ ಉಪವೇಶನಗಳನ್ನು ಆಯೋಗದ ಕೇಂದ್ರ ಸ್ಥಳದಲ್ಲಾಗಲಿ ಅಥವಾ ರಾಜ್ಯದ ಯಾವುದೇ ಇತರ ಸ್ಥಳದಲ್ಲಾಗಲಿ ನಡೆಸಬಹುದು.
(2) ಆಯೋಗವು, ವಿಚಾರಣೆ ನಡೆಸಲು ಉದ್ದೇಶಿಸಿದ ಪಕ್ಷಕಾರರಿಗೆ ಯುಕ್ತ ನೋಟೀಸನ್ನು ನೀಡಿದ ನಂತರ ಮತ್ತು ಅಗತ್ಯವಿದ್ದರೆ ಸಾರ್ವಜನಿಕರ ಮಾಹಿತಿಗಾಗಿ ಸೂಕ್ತ ಪ್ರಕಟಣೆಯನ್ನು ನೀಡುವ ಮೂಲಕಉಪವೇಶನಗಳನ್ನು ನಡೆಸತಕ್ಕದ್ದು.ಸಂಬಂಧಿಸಿದ ವಿಷಯದಿಂದ ಬಾಧಿತವಾಗಿರುವಂಥ ಅಲ್ಪಸಂಖ್ಯಾತ ಸಮುದಾಯದ ಸದಸ್ಯರಿಗೆ ತನಿಖೆ ಅಥವಾ ವಿಚಾರಣೆಯ ಮಾಹಿತಿಯನ್ನು ನೋಟೀಸು ಅಥವಾ ಪ್ರಚಾರದ ಮೂಲಕ ನೀಡುವ ಬಗ್ಗೆ ಎಚ್ಚರ ವಹಿಸತಕ್ಕದ್ದು.
(3) ತನಿಖೆ ಅಥವಾ ವಿಚಾರಣೆಯು ನಡೆಯುವ ಸಮಯದಲ್ಲಿ ಆಯೋಗವು, ಪ್ರಮಾಣವಚನ ಅಥವಾ ಶಪಥ ಪತ್ರಗಳ ಮೇಲೆ ಸಾಕ್ಷ್ಯವನ್ನು ಪಡೆಯಬಹುದು. ಆಯೋಗವು ಅವಶ್ಯವೆಂದು ಪರಿಗಣಿಸಿದರೆ, ತನಿಖೆ ಅಥವಾ ವಿಚಾರಣೆಯ ಅವಧಿಯಲ್ಲಿ ಸಾಕ್ಷ್ಯವನ್ನು ತೆಗೆದುಕೊಳ್ಳುವ ಉದ್ದೇಶಕ್ಕಾಗಿ, ಯಾರೇ ವ್ಯಕ್ತಿಯ ಖುದ್ದು ಹಾಜರಾತಿಅವಶ್ಯಕವೆಂದು ಪರಿಗಣಿಸಿದರೆನಮೂನೆ-1 ರಲ್ಲಿ ಆ ವ್ಯಕ್ತಿಗಳಿಗೆ ಸಮನ್ಸುಗಳನ್ನು ಜಾರಿಗೊಳಿಸಬಹುದು.ಸಮನ್ಸುಗಳನ್ನು ಸ್ವೀಕರಿಸಿದ ದಿನಾಂಕದಿಂದ ಆಯೋಗದ ಮುಂದೆ ಹಾಜರಾಗಬೇಕೆಂದು ನಿರ್ದೇಶಿಸಿದ ವ್ಯಕ್ತಿಗೆ ಸಮನ್ಸುಗಳಲ್ಲಿ ಕನಿಷ್ಠ ಏಳು ದಿನಗಳ ನೋಟೀಸನ್ನು ನೀಡತಕ್ಕದ್ದು.
(4) ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರುಗಳ ಸ್ವತ್ತು, ಸೇವೆ ಅಥವಾ ಉದ್ಯೋಗ ಮತ್ತು ಇತರ ವಿಷಯಗಳ ಸಂಬಂಧ ಅವ್ಯವಹಿತ ಬೆದರಿಕೆ ಇರುವಲ್ಲಿ ಮತ್ತು ಆಯೋಗದತೀವ್ರ ನಿಗಾ ವಹಿಸುವ ಅವಶ್ಯಕತೆ ಇರುವಾಗ ಆಯೋಗವು ವಿವಾದಾಂಶವನ್ನುಕೈಗೆತ್ತಿಕೊಂಡಿದೆ ಎಂದು ಅವರಿಗೆ ತಿಳಿಸಲು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಫ್ಯಾಕ್ಸ್ ಅಥವಾ ಇ-ಮೇಲ್ ಮೂಲಕ ಸೂಚನೆ ನೀಡಿ ಸಂಜ್ಞೇಯತೆಗೆ ತೆಗೆದುಕೊಳ್ಳತಕ್ಕದ್ದು. ಫ್ಯಾಕ್ಸ್ ಅಥವಾ ಇ-ಮೇಲ್ಗೆ ತುರ್ತು ಪ್ರತ್ಯುತ್ತರವನ್ನು ಸಂಬಂಧಪಟ್ಟ ಪ್ರಾಧಿಕಾರದಿಂದ ತರಿಸಿಕೊಳ್ಳತಕ್ಕದ್ದು.ಒಂದು ವಾರದೊಳಗೆ ಯಾವುದೇ ಪತ್ರ ಬರದಿದ್ದಲ್ಲಿ,ಶೀಘ್ರ ನೋಟಿಸಿನ ಮೂಲಕಸಂಬಂಧಪಟ್ಟ ಪ್ರಾಧಿಕಾರವನ್ನು ಸಮನ್ ಮಾಡತಕ್ಕದ್ದು.
5ಬಿ. ಕೆಲವು ದಾಖಲೆಗಳನ್ನು ರಹಸ್ಯವಾಗಿಡುವುದು:- ಆಯೋಗವು, ಸಭೆಗಳಲ್ಲಿ ಅಥವಾ ಅನ್ಯಥಾ ತೀರ್ಮಾನಗಳ ಮೂಲಕ ಯಾವುದೇ ವಿಷಯದ ಬಗ್ಗೆ ಮಾಡಲಾದ ಯಾವುದೇ ವರದಿಯ ಒಳಾಂಶಗಳನ್ನು ರಹಸ್ಯವಾಗಿ ಇಟ್ಟುಕೊಳ್ಳಬೇಕು ಮತ್ತು ಅಂಥ ವರದಿಯನ್ನುನೋಡಲು ಅಧಿಕೃತಗೊಳಿಸಲಾದ ವ್ಯಕ್ತಿಯ ಹೊರತಾಗಿ ಯಾರೇ ಇತರ ವ್ಯಕ್ತಿಗೆ ಬಹಿರಂಗಪಡಿಸಬಾರದೆಂದು ನಿರ್ದೇಶಿಸಬಹುದು.
5ಸಿ. ಕಾನೂನು ಕ್ರಮಗಳು:- (1) ಆಯೋಗವು, ಸಿವಿಲ್ ನ್ಯಾಯಾಲಯದ ಅಧಿಕಾರಗಳನ್ನು ಚಲಾಯಿಸುವಾಗ ಜಾರಿಗೊಳಿಸಲು ಅಗತ್ಯಪಡಿಸಲಾದ ಎಲ್ಲಾ ಮನ್ಸುಗಳು ಹಾಗೂ ವಾರೆಂಟ್ಗಳನ್ನು ಗೊತ್ತುಪಡಿಸಿದ ನಮೂನೆಯಲ್ಲಿ ಸ ಕಾರ್ಯದರ್ಶಿಯವರ ಸಹಿಯೊಂದಿಗೆ ಹೊರಡಿಸತಕ್ಕದ್ದು ಹಾಗೂ ಆಯೋಗದ ಮೊಹರನ್ನು ಹೊಂದಿರತಕ್ಕದ್ದು. ಕಾನೂನು ಕ್ರಮಗಳ ಜಾರಿಗಾಗಿ ಅನ್ವಯವಾಗುವ ಸಿವಿಲ್ ಪ್ರಕ್ರಿಯಾ ಂಹಿತೆಯ ಉಪಬಂಧಗಳನ್ನು ಆಯೋಗವು ಪಾಲಿಸತಕ್ಕದ್ದು. ಸ
(2) ವಿಚಾರಣೆಗಾಗಿ ನೀಡುವ ನೋಟೀಸು ನಮೂನೆ-II ರಲ್ಲಿರತಕ್ಕದ್ದು, Áರ್ವಜನಿಕ ನೋಟೀ ಸು ನಮೂನೆ-III ರಲ್ಲಿರತಕ್ಕದ್ದು ಮತ್ತು ಸ ಹೊರಡಿಸಬೇಕಾದಸಮನ್ಸುಗಳುನಮೂನೆ- IV ರಲ್ಲಿರತಕ್ಕದ್ದು, ವಾರೆಂಟುಗಳನ್ನು ಈ ನಿಯಮಗಳಿಗೆ ಅನುಬಂಧಿಸಿದ ನಮೂನೆ-V ರಲ್ಲಿ ಹೊರಡಿಸತಕ್ಕದ್ದು.
5ಡಿ. ಪತ್ರಗಳು ಹಾಗೂ ನೋಟೀಸುಗಳ ಜಾರಿ:- ದಸ್ತಾವೇಜುಗಳು ಇತ್ಯಾದಿಗಳ ಲ್ಲಿಕೆಗಾಗಿಆಯೋಗವು ಹೊರಡಿಸಿರುವ ಪತ್ರಗಳು ಮತ್ತು ನೋಟಿಸುಗಳಿಗೆ ಕಾರ್ಯದರ್ಶಿ ಸ ಅಥವಾ ಅಧೀನ ಕಾರ್ಯದರ್ಶಿಯ ಶ್ರೇಣಿಗಿಂತ ಕಡಿಮೆಯಲ್ಲದ ಅಧಿಕಾರಿಯು ಸಹಿ ಮಾಡತಕ್ಕದ್ದು.
5ಇ. ಆಯೋಗದ ಉಪವೇಶನಗಳು:- (1) ಒಂದು ವಿಷಯವನ್ನು ಆಯೋಗವು ನೇರವಾಗಿ ತನಿಖೆ ಅಥವಾ ವಿಚಾರಣೆ ಮಾಡಬೇಕಾದಾಗ, ಆಯೋಗದ ಉಪವೇಶನಗಳನ್ನು ನಡೆಸುವ ಮೂಲಕ ಮಾಡಬಹುದು. ಅಂಥ ಉಪವೇಶನದ ಸಂದರ್ಭದಲ್ಲಿ ಅಧ್ಯಕ್ಷರನ್ನು ಒಳಗೊಂಡಂತೆ ಕನಿಷ್ಠ ನಾಲ್ಕು ಮಂದಿ ಸದಸ್ಯರುಗಳ ಕೋರಂ ಇರತಕ್ಕದ್ದು.ಆಯೋಗದ ಉಪವೇಶನಗಳನ್ನು ಅವಶ್ಯಕತೆಗೆ ಅನುಸಾರವಾಗಿ ನಡೆಸತಕ್ಕದ್ದು.
(2) ಉಪವೇಶನದ ಸಭೆಗಳನ್ನು ಕೇಂದ್ರ ಕಛೇರಿ ಹಾಗೂ ಇತರ ್ಥಳಗಳಲ್ಲಿಯೂ ಸಾಮಾನ್ಯವಾಗಿ ಮುಂಚಿತವಾಗಿ ಮತ್ತು ಯುಕ್ತವಾಗಿ ತಿಳಿಸುವ ಮೂಲಕ ಸ ಪ್ರತಿ ತಿಂಗಳು ನಡೆಸಬಹುದು.
5ಎಫ್. ಸಾಕ್ಷಿದಾರರಿಗೆ ಪ್ರಯಾಣ ವೆಚ್ಚಗಳನ್ನು ಸಂದಾಯ ಮಾಡುವುದು:- (1) ಆಯೋಗವು, ಸಭೆಯಲ್ಲಿ ಆಯೋಗದ ಮುಂದೆ ಹಾಜರಾಗಲು ಕರೆಯಲಾದಂಥ ವ್ಯಕ್ತಿಗಳಿಗೆ, Áರ್ವಜನಿಕ ಸಾರಿಗೆಯ ಮೂಲಕ ಪ್ರಯಾಣಿಸಿದ ವಾಸ್ತವಿಕ ವೆಚ್ಚವಾಗಿರತಕ್ಕ ಪ್ರಯಾಣ ಸ ವೆಚ್ಚಗಳನ್ನು ಸಂದಾಯ ಮಾಡಬಹುದು. 8 ಕಿ.ಮೀ ಅಥವಾ 8 ಕಿ.ಮೀ.ಗಿಂತ ಕಡಿಮೆ ದೂರ ಪ್ರಯಾಣಿಸಲಾದ ಯಾರೇ ವ್ಯಕ್ತಿಯು ಪ್ರಯಾಣ ವೆಚ್ಚವನ್ನು ಪಡೆಯಲು ಹಕ್ಕುಳ್ಳವನಾಗಿರತಕ್ಕದ್ದಲ್ಲ. ವ್ಯಕ್ತಿಯು, ಆಯೋಗದ ಮುಂದೆ ಅದರ ಸಭೆಯಲ್ಲಿ ಹಾಜರಿದ್ದ ದಿನಗಳಿಗಾಗಿ ದಿನಭತ್ಯೆಯನ್ನು ಪಡೆಯತಕ್ಕದ್ದು.
(2) ಸರ್ಕಾರಿ ಅಥವಾ ಸಾರ್ವಜನಿಕ ಉದ್ದಿಮೆ ನೌಕರರಾಗಿರುವ ವ್ಯಕ್ತಿಗಳನ್ನು ಆಯೋಗದ ಮುಂದೆ ಹಾಜರಾಗಲು ಅಥವಾ ದಾಖಲೆಗಳನ್ನು ಹಾಜರುಪಡಿಸಲು ಮನ್ಮಾಡಿದರೆ, ಅದನ್ನು ಕರ್ತವ್ಯದ ಮೇಲಿನ ಅವಧಿಯೆಂದು ಭಾವಿಸತಕ್ಕದ್ದು ಸ
(3) ಆಯೋಗದ ಸದಸ್ಯ ಕಾರ್ಯದರ್ಶಿಯು ಹಾಗೆ ಹಾಜರಾಗುವ ಂಬಂಧಪಟ್ಟ ವ್ಯಕ್ತಿಗಳಿಗೆ ಮೇಲಿನಂತೆ ಸಂದಾಯ ಮಾಡುವಂಥ ಕ್ಲೇಮುಗಳನ್ನು ಸ ುನಿಶ್ಚಿತಪಡಿಸಿಕೊಳ್ಳಲು ಸೂಕ್ತ ವಿಧಾನವನ್ನು ರೂಪಿಸಬಹುದು. ಸ
(4) ಮೇಲೆ ಹೇಳಲಾದ ಪ್ರಯಾಣ ವೆಚ್ಚಗಳಿಗಾಗಿ ಕ್ಲೇಮು, ವ್ಯಕ್ತಿಯು ಸ್ವಂತ ಒಪ್ಪಿಗೆಯ ಮೇಲೆ ಮಾಡುವ ಯಾವುದೇ ತನಿಖೆ ಅಥವಾ ವಿಚಾರಣೆಯಲ್ಲಿ ಆಯೋಗವು ಮನ್ಸು ಜಾರಿಗೊಳಿಸಿದ ಸೂಚನೆ ಅಥವಾ ನೋಟಿಸಿಗಾಗಿ ಆಯೋಗದ ಮುಂದೆ ಸ ಹಾಜರಾಗುವಂಥ ವ್ಯಕ್ತಿಯ ಸಂಬಂಧದಲ್ಲಿ ಅನ್ವಯಿಸತಕ್ಕದ್ದಲ್ಲ.
5ಜಿ. ಆಯೋಗದ ಸಲಹಾಕಾರ್ಯ:- ಆಯೋಗವು ತನ್ನ ಸದಸ್ಯ ಕಾರ್ಯದರ್ಶಿಯವರ ಮೂಲಕ ಸಭೆಗಳು, ವೈಯಕ್ತಿಕ ಸಂಪರ್ಕಗಳು, ಭೇಟಿಗಳು ಹಾಗೂ ಇತರ ಪತ್ರವ್ಯವಹಾರಗಳ ಮುಖಾಂತರ ರಾಜ್ಯ ಸರ್ಕಾರದ ಇಲಾಖೆಗಳು/ ಇತರ ಸಂಸ್ಥೆಗಳೊಂದಿಗೆ ಪರಸ್ಪರ ಸಂವಾದ ನಡೆಸತಕ್ಕದ್ದು. ಈ ಸಂಬಂಧದಲ್ಲಿ ಮಾಹಿತಿಯನ್ನು, ಸಾಕಷ್ಟು ಮುಂಚಿತವಾಗಿ ಸಂಬಂಧಪಟ್ಟ ಇಲಾಖೆ/ ಸಂಸ್ಥೆಗಳಿಗೆ ಕಳುಹಿಸಬೇಕು.
5ಹೆಚ್.ರಾಜ್ಯ ಯೋಜನಾ ಮಂಡಳಿಯೊಂದಿಗೆ ಪರಸ್ಪರ ವ್ಯವಹರಣೆ:- ಆಯೋಗವು, ರಾಜ್ಯ ಯೋಜನಾ ಮಂಡಳಿಯು ಸ್ಥಾಪಿಸಿದಂಥಹ ಸಮಿತಿಗಳು, ಕಾರ್ಯನಿರ್ವಾಹಕ ಮೂಹಗಳು ಹಾಗೂ ಇತರೆ ಸಂಸ್ಥೆಗಳ ಪ್ರಾತಿನಿಧ್ಯವನ್ನು ಹೊಂದುವ ಮೂಲಕ ಸೂಕ್ತ ಸ ಹಂತಗಳಲ್ಲಿ ರಾಜ್ಯ ಮಂಡಳಿಯೊಂದಿಗೆ ಪರಸ್ಪರ ವ್ಯವಹರಿಸತಕ್ಕದ್ದು. ಆಯೋಗವು ಅಲ್ಪಸಂಖ್ಯಾತರಿಗೆ ಸಂಬಂಧಪಟ್ಟ ಎಲ್ಲಾ ಕಾರ್ಯಕ್ರಮಗಳು ಹಾಗೂ ಯೋಜನೆ ಹಾಗೂ ಅಭಿವೃದ್ಧಿ ಮತ್ತು ಮೌಲ್ಯಮಾಪನದ ವಿಧಾನಗಳಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳ ಪ್ರತಿಗಳನ್ನು ಕಳುಹಿಸಲು ಯೋಜನಾ ಮಂಡಳಿಯನ್ನು ಕೋರಬಹುದು.
5ಐ. ಆಯೋಗದ ಪ್ರಕಾರ್ಯಗಳ ಮೇಲ್ವಿಚಾರಣೆ:-ಆಯೋಗವು, ಕಾಲಕಾಲಕ್ಕೆ ಅಲ್ಪಸಂಖ್ಯಾತರಿಗಾಗಿ ಉಪಬಂಧಿಸಲಾದ ಸುರಕ್ಷತೆಗಳು ಹಾಗೂ ಇತರ ಸಾಮಾಜಿಕ, ಆರ್ಥಿಕ ಅಭಿವೃದ್ಧಿಪರ ಕ್ರಮಗಳಿಗೆ ಸಂಬಂಧಪಟ್ಟಂತೆ ತಾನು ಮೇಲ್ವಿಚಾರಣೆ ಮಾಡುವ ವಿಷಯಗಳು ಅಥವಾ ಸಂಗತಿಗಳು ಮತ್ತು ಕ್ಷೇತ್ರಗಳನ್ನು ನಿರ್ಧರಣೆ ಮಾಡಬಹುದು.
5ಜೆ. ವಿವರ ಪಟ್ಟಿಕೆಗಳು ಹಾಗೂ ವರದಿಗಳನ್ನು ಗೊತ್ತುಪಡಿಸುವುದು:- (1) ಆಯೋಗವು ಮೇಲ್ವಿಚಾರಣೆ ಮಾಡಬೇಕಾದಂಥ ವಿಷಯದ ನಿಯಂತ್ರಣ ಹೊಂದಿರುವ ಯಾವುದೇ ಪ್ರಾಧಿಕಾರವು, ಆಯೋಗವು ಅಗತ್ಯಪಡಿಸಿದಂತೆ ವರದಿಗಳನ್ನು ಒದಗಿಸತಕ್ಕದ್ದು.
(2) ಆಯೋಗವು, ಕಾಲಕಾಲಕ್ಕೆ ಅಲ್ಪಸಂಖ್ಯಾತರಿಗಾಗಿ ಇರುವ ಸುರಕ್ಷತಾ ಕ್ರಮಗಳ ಅನುಷ್ಠಾನದ ಪ್ರಭಾರ ಹೊಂದಿರುವಂಥ ರಾಜ್ಯ ಸರ್ಕಾರಿ ಇಲಾಖೆಗಳು, ಸ್ಥಳೀಯ ಂಸ್ಥೆಗಳು, ನಿಗಮಿತ ನಿಕಾಯಗಳು ಅಥವಾ ಯಾವುದೇ ಇತರ ಪ್ರಾಧಿಕಾರಗಳಿಂದ ಸ ಯಾವುದೇ ನಿರ್ದಿಷ್ಟ ವಿಷಯ ಅಥವಾ ಸಂಗತಿಯ ಬಗ್ಗೆ ಮಾಹಿತಿ ಹಾಗೂ ದತ್ತಾಂಶವನ್ನು ಒದಗಿಸಲು ಸೂಚನೆಗಳನ್ನು ನೀಡಬಹುದು.
5ಕೆ. ಅನುಸರಣ ಕ್ರಮ:- (1) ಮೇಲ್ವಿಚಾರಣೆ ಕಾರ್ಯವನ್ನು ಪರಿಣಾಮಕಾರಿಯಾಗಿ ಮಾಡುವ ಸಲುವಾಗಿ ಆಯೋಗವು ಮಾಹಿತಿಯನ್ನು ಪಡೆದುಕೊಂಡ ತರುವಾಯ ಹಾಗೂ ನಿರ್ಣಯವನ್ನು ತೆಗೆದುಕೊಂಡ ಮೇಲೆ ರಕ್ಷಣಾ ಕಾರ್ಯಗಳ ಅನುಷ್ಠಾನದಲ್ಲಿ ಗಮನಿಸಿರುವಂಥ ನ್ಯೂನತೆಗಳನ್ನು ವಿವರಿಸಿ, ಸಂಬಂಧಪಟ್ಟ ಪ್ರಾಧಿಕಾರಕ್ಕೆ ವಿಷಯಗಳನ್ನು Áಧ್ಯವಾದಷ್ಟು ಬೇಗನೆ ತಿಳಿಸಬೇಕು ಹಾಗೂ ಅಗತ್ಯ ಕ್ರಮಗಳ ಬಗ್ಗೆ ಸಲಹೆಯನ್ನು ಸ ನೀಡಬೇಕು.
5ಎಲ್. ಈ ನಿಯಮಗಳಲ್ಲಿ ನಿರ್ದಿಷ್ಟಪಡಿಸಿಲ್ಲದ ವಿಷಯಗಳ ಬಗ್ಗೆ ತೀರ್ಮಾನ:- ಈ ನಿಯಮಗಳಲ್ಲಿ ಯಾವುದೇ ಉಪಬಂಧವನ್ನು ಕಲ್ಪಿಸದಿರುವಂಥ ವಿಷಯಕ್ಕೆ ಸಂಬಂಧಿಸಿದಂತೆ ಪ್ರಶ್ನೆಯು ಉದ್ಭವಿಸಿದರೆ, ಸರ್ಕಾರದ ತೀರ್ಮಾನವೇ ಅಂತಿಮವಾಗಿರತಕ್ಕದ್ದು.
5ಎಮ್. ಮೌಲ್ಯಮಾಪನ ಮತ್ತು ಅಧ್ಯಯನಗಳು:- (1) ಆಯೋಗವು, ಈ ಸಂಬಂಧದಲ್ಲಿ ಹೊರಡಿಸಲಾದ ನಿರ್ಣಯಗಳ ಮೂಲಕ ರಾಜ್ಯದಲ್ಲಿ ಅಲ್ಪಸಂಖ್ಯಾತರ ಅನುಕೂಲಕ್ಕಾಗಿ ಯಾವುದೇ ಮೌಲ್ಯಮಾಪನ ಹಾಗೂ ಅಧ್ಯಯನಗಳನ್ನು ಕೈಗೊಳ್ಳಬಹುದು.
(2) ಅಂಥ ಪ್ರತಿಯೊಂದು ಮೌಲ್ಯಮಾಪನ ಹಾಗೂ ಅಧ್ಯಯನಗಳ ತರುವಾಯ ವರದಿಯೊಂದನ್ನು ಆಯೋಗದ ಮುಂದೆ ಮಂಡಿಸತಕ್ಕದ್ದು ಹಾಗೂ ಆಯೋಗವು ತಾನು ೂಕ್ತವೆಂದು ಭಾವಿಸಬಹುದಾದಂಥ ಕ್ರಮವನ್ನು ಕೈಗೊಳ್ಳಬಹುದು ಅಥವಾ ತನ್ನ ಸ ಶಿಫಾರಸ್ಸಿನೊಂದಿಗೆ ಅಧ್ಯಯನದ ವರದಿಯ ಪ್ರತಿಯನ್ನು ಸೂಕ್ತ ಕ್ರಮಕ್ಕಾಗಿ ಸರ್ಕಾರಕ್ಕೆ 1 ಕಳುಹಿಸಬಹುದು.] 1. 2017ರ ನಿಯಮಗಳ ಸಂಖ್ಯೆ: ಎಂಡಬ್ಲ್ಯೂಡಿ 229 ಎಲ್ಎಂಎಲ್ 2016, ಬೆಂಗಳೂರು ಮೂಲಕ ದಿನಾಂಕ: 10.07.2017 ರಂದು ಸೇರಿಸಲಾಗಿದೆ.