ನಮೂನೆ-Ii
ವಿಚಾರಣೆ ನೋಟೀಸು
(5ಸಿ ನಿಯಮದ (2)ನೇ ಉಪ-ನಿಯಮವನ್ನು ನೋಡಿ)
ಪ್ರಕರಣ ಸಂಖ್ಯೆ: ……………………
ಗೆ: _
ನೀವು ಈ ಆಯೋಗದಲ್ಲಿ ದಾಖಲಿಸಿದ ಮತ್ತು ನೋಂದಾಯಿಸಿದ ದೂರು ದಿನಾಂಕ: ಮತ್ತು ಪ್ರಕರಣ ಸಂಖ್ಯೆ……………………ನ್ನು ಪರಿಶೀಲನೆ/ ವಿಚಾರಣೆಗಾಗಿ …………………… ಆಯೋಗದ ಮುಂದೆ ಪ್ರಚುರಪಡಿಸಲಾಗಿದೆಯೆಂದು ತಿಳಿದುಕೊಳ್ಳುವುದು. ಈ ಕೆಳಗೆ ನಿರ್ಧಿಷ್ಟಪಡಿಸಿದ ಸ್ಥಳದಲ್ಲಿ ಮತ್ತು ಸಮಯದಲ್ಲಿ ಹಾಜರಾಗಬೇಕೆಂದು ಈ ಮೂಲಕ ನಿಮಗೆ ನಿರ್ದೇಶಿಸಲಾಗಿದೆ.ನೀವು ಖುದ್ದಾಗಿ ಅಥವಾ ಅಧಿಪ್ರಮಾಣಿತ ಪ್ರತಿನಿಧಿಯ ಮೂಲಕ ಹಾಜರಾಗಬಹುದು.ನಿಮ್ಮ ದೂರಿನ ಸಮರ್ಥನೆಗಾಗಿ ಸಾಕ್ಷ್ಯವನ್ನು ಹಾಜರುಪಡಿಸಲು ಮತ್ತು ಅದರ ಸಮರ್ಥನೆಗಾಗಿ ದಸ್ತಾವೇಜಿನ ಸಾಕ್ಷ್ಯವನ್ನು ಹಾಜರುಪಡಿಸುವುದಕ್ಕೆ ಸಹ ನೀವು ಹಕ್ಕುಳ್ಳವರಾಗಿದ್ದೀರಿ.ನೀವು, ಆಯೋಗವು ಯಾವುದೇ ಸಾಕ್ಷಿಯನ್ನು ಸಮನ್ಸ್ ಮಾಡಬೇಕೆಂದು ಬಯಸಿದಲ್ಲಿ, ವಿಚಾರಣಾ ದಿನಾಂಕಕ್ಕೆ ಸಾಕಷ್ಟು ಮುಂಚಿತವಾಗಿ ಅಂಥ ಸಾಕ್ಷಿಗಳ ಹೆಸರು ಮತ್ತು ವಿಳಾಸದ ಪಟ್ಟಿಯನ್ನು ಆಯೋಗಕ್ಕೆ ಒದಗಿಸಬೇಕು.
ವಿಚಾರಣೆಯ ದಿನಾಂಕ:
ವಿಚಾರಣೆಯ ಸಮಯ ಮತ್ತು ಸ್ಥಳ:
ಕಾರ್ಯದರ್ಶಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ.
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ