(1) 6ನೇ ಪ್ರಕರಣದ ಮೇರೆಗಿನ ನೋಟೀಸು ನಮೂನೆ 1 ರಲ್ಲಿರತಕ್ಕದ್ದು ಮತ್ತು ಪರಿಶೀಲನಾಧಿಕಾರಿಯು 6ನೇ ಪ್ರಕರಣದ ಮೇರೆಗೆ ಕೊಡಲಾದ ನೋಟೀಸುಗಳ ರಿಜಿಸ್ಟರನ್ನು ನಮೂನೆ 4 ರಲ್ಲಿ ಇಡತಕ್ಕದ್ದು.
(2) 8ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೇರೆಗಿನ ನೋಟೀಸು ನಮೂನೆ 2 ರಲ್ಲಿರತಕ್ಕದ್ದು ಮತ್ತು ಪರಿಶೀಲನಾಧಿಕಾರಿಯು 8ನೇ ಪ್ರಕರಣದ ಮೇರೆಗೆ ಕೊಡಲಾದ ನೋಟೀಸುಗಳ ರಿಜಿಸ್ಟರನ್ನು ನಮೂನೆ 5 ರಲ್ಲಿ ಇಡತಕ್ಕದ್ದು.
(3) 7ನೇ ಪ್ರಕರಣ ಅಥವಾ 9ನೇ ಪ್ರಕರಣದ ಮೇರೆಗಿನ ಯಾವುದೇ ಪ್ರತಿಬಂಧಕ ಅಥವಾ ಪರಿಹಾರ ಕ್ರಮಗಳ ವೆಚ್ಚಗಳ ತಗಾದೆ ನೋಟೀಸು ನಮೂನೆ 3ರಲ್ಲಿರತಕ್ಕದ್ದು.
(4) 8ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೇರೆಗಿನ ನೋಟೀಸನ್ನು ಮತ್ತು 10ನೇ ಪ್ರಕರಣದ ಮೇರೆಗಿನ ತಗಾದೆ ನೋಟೀಸನ್ನು, ನೋಟೀಸಿನ ದ್ವಿಪ್ರತಿಗಳಲ್ಲೊಂದನ್ನು ಅಧಿಭೋಗದಾರನಿಗೆ ಖುದ್ದಾಗಿ ತಲುಪಿಸುವ ಅಥವಾ ಕೊಡುವ ಮೂಲಕ, ಅಥವಾ ಅವನ ಕುಟುಂಬದ ಯಾರೇ ಒಬ್ಬ ವಯಸ್ಕ ಪುರುಷ ಸದಸ್ಯನ ಅಥವಾ ಒಬ್ಬ ಅಧಿಕೃತ ಏಜಂಟನ ಬಳಿ ನಕಲುಗಳಲ್ಲಿ ಒಂದನ್ನು ಕೊಡುವ ಮೂಲಕ ಅಥವಾ ಅಧಿಭೋಗದಾರನು ಸಾಮಾನ್ಯವಾಗಿ ವಾಸಿಸುವ ಮನೆಯ ಯಾವುದೇ ಎದ್ದುಕಾಣುವ ಭಾಗದ ಮೇಲೆ ನೋಟೀಸಿನ ನಕಲುಗಳಲ್ಲಿ ಒಂದನ್ನು ಅಂಟಿಸುವ ಮೂಲಕ ಜಾರಿ ಮಾಡತಕ್ಕದ್ದು ಮತ್ತು ಆ ತರುವಾಯ ನೋಟೀಸನ್ನು ಅಧಿಭೋಗದಾರನಿಗೆ ಕ್ರಮಬದ್ಧವಾಗಿ ಜಾರಿಮಾಡಲಾಗಿದೆಯೆಂದು ಭಾವಿಸತಕ್ಕದ್ದು.
1 [(5) 7ನೇ ಮತ್ತು 9ನೇ ಪ್ರಕರಣಗಳ ಮೇರೆಗೆ ಕೈಗೊಂಡ ಪ್ರತಿಬಂಧಕ ಅಥವಾ ಪರಿಹಾರಗಳ, 10ನೇ ಪ್ರಕರಣದ ಮೇರೆಗೆ ಭೂಕಂದಾಯದ ಬಾಕಿಯಂತೆ ವಸೂಲು ಮಾಡಬಹುದಾದ, ವೆಚ್ಚದ ತಗಾದೆಯನ್ನು ತೋರಿಸುವ 1 ತಃಖ್ತೆಯು 6ನೇ ನಮೂನೆಯಲ್ಲಿರತಕ್ಕದ್ದು.] 1. ‘‘ಕೃಷಿ ನಿರ್ದೇಶಕರು'' ಎಂಬ ಪದಗಳಿಗೆ ಬದಲಾಗಿ ಜಿ.ಎಸ್.ಆರ್ 260 ದಿನಾಂಕ 3.8.1974ರ ಮೂಲಕ 19.9.1974 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.