7ನೇ ಪ್ರಕರಣದ ಅಥವಾ 9ನೇ ಪ್ರಕರಣದ ಮೇರೆಗೆ ಕಾರ್ಯಗತಗೊಳಿಸಲಾದ ಯಾವುದೇ ಪ್ರತಿಬಂಧಕ ಅಥವಾ ಪರಿಹಾರ ಕ್ರಮಗಳ ವೆಚ್ಚವನ್ನು ನಿರ್ಧರಿಸುವ ಉದ್ದೇಶಕ್ಕಾಗಿ ಪ್ರಚಲಿತ ಮಾರುಕಟ್ಟೆ ದರಗಳಲ್ಲಿ ಮಜೂರಿಗಳು, ಸಾಮಗ್ರಿ, ಉಪಕರಣಗಳ ಬಳಕೆ ಮತ್ತು ಅಂಥ ಇತರ ಸಂಬಂಧಪಟ್ಟ ಸಂಗತಿಗಳನ್ನು ಪರಿಗಣನೆಗೆ ತೆಗೆದುಕೊಳ್ಳತಕ್ಕದ್ದು.
1 5. ಅಪೀಲುಗಳು.- (1) 1 8 ಮತ್ತು 11ನೇ ಪ್ರಕರಣಗಳ [ಸಂಬಂಧಪಟ್ಟ ಕೃಷಿ ವಿಭಾಗೀಯ ಜಂಟಿ ನಿರ್ದೇಶಕರು] ಉದ್ದೇಶಗಳಿಗಾಗಿ ನಿಯಮಿಸಲಾದ ಪ್ರಾಧಿಕಾರಿಯಾಗಿರತಕ್ಕದ್ದು.
- ‘‘ಕೃಷಿ ನಿರ್ದೇಶಕರು'' ಎಂಬ ಪದಗಳಿಗೆ ಬದಲಾಗಿ ಜಿ.ಎಸ್.ಆರ್ 260 ದಿನಾಂಕ 3.8.1974ರ ಮೂಲಕ 19.9.1974 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ. (2) 8ನೇ ಪ್ರಕರಣದ ಮೇರೆಗಿನ ಅಪೀಲು, ಪರಿಶೀಲನಾಧಿಕಾರಿಯು ಅಪೀಲುದಾರನ ಮೇಲೆ ಜಾರಿಮಾಡಿದ ಮೂಲ ನೋಟೀಸಿನ ಜೊತೆಗೆ ಇರತಕ್ಕದ್ದು.
(3) 11ನೇ ಪ್ರಕರಣದ ಮೇರೆಗಿನ ಅಪೀಲು, ಅಧಿಭೋಗದಾರನ ಮೇಲೆ ಜಾರಿಮಾಡಿದ ಮೂಲ ತಗಾದೆ ನೋಟೀಸಿನ ಜೊತೆಗೆ ಇರತಕ್ಕದ್ದು.
(4) ಅಪೀಲು ಪ್ರಾಧಿಕಾರವು, ಅಪೀಲುದಾರನಿಗೆ 8ನೇ ಪ್ರಕರಣದ (3)ನೇ ಉಪ-ಪ್ರಕರಣ ಮತ್ತು 11ನೇ ಪ್ರಕರಣದ (2)ನೇ ಉಪ-ಪ್ರಕರಣದ ಮೇರೆಗೆ ತಾನು ಹೊರಡಿಸಿದ ಆದೇಶದ ಒಂದು ಪ್ರತಿಯನ್ನು ಕೊಡತಕ್ಕದ್ದು.
ನಮೂನೆ - 1 (3ನೇ ನಿಯಮವನ್ನು ನೋಡಿ) ಗೆ, .....................
ಕರ್ನಾಟಕ ಕೃಷಿ ಸಂಬಂಧಿ ಕೀಟಗಳ ಮತ್ತು ರೋಗಗಳ ಅಧಿನಿಯಮ, 1968 (1969ರ ಕರ್ನಾಟಕ ಅಧಿನಿಯಮ ಸಂ.1)ರ 3ನೇ ಪ್ರಕರಣದ ಮೇರೆಗೆ ಹೊರಡಿಸಿದ ................. ದಿನಾಂಕ .................... ಕ್ರಮಾಂಕದ ಮತ್ತು ..................... ದಿನಾಂಕದ ರಾಜಪತ್ರದಲ್ಲಿ ಪ್ರಕಟಿಸಲಾದಂಥ ಅಧಿಸೂಚನೆಯಲ್ಲಿ ನಮೂದಿಸಲಾದಂತೆ.-
(i) ಅಂಥ ಭೂಮಿ, ನೀರು ಅಥವಾ ಆವರಣದಲ್ಲಿ ಯಾವುದೇ ಹಾನಿಕರ ಕಳೆ, ಪರೋಪಜೀವಿ, ಉಪದ್ರವ ಕೀಟಗಳು ಅಥವಾ ಸಸ್ಯರೋಗವು ಕಾಣಿಸಿ ಕೊಂಡಿದೆಯೇ; ಮತ್ತು
(ii) ಪಾಲಿಸಬೇಕೆಂದು ನಿರ್ದೇಶಿಸಲಾದ ಪ್ರತಿಬಂಧಕ ಅಥವಾ ಪರಿಹಾರಕ ಕ್ರಮಗಳನ್ನು ಪಾಲಿಸಲಾಗಿದೆಯೇ ಇಲ್ಲವೇ - ಎಂಬುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶಕ್ಕಾಗಿ ನಿಮ್ಮ ಮೇಲೆ ನೋಟೀಸನ್ನು ಜಾರಿಮಾಡಿದ ಕಾಲದಿಂದ (ಕಾಲದ ಅವಧಿಯನ್ನು ನಿರ್ದಿಷ್ಟಪಡಿಸಿ) ................... ರ ತರುವಾಯ ಕೆಳಗಿನ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಭೂಮಿ ಅಥವಾ ಆವರಣದ ಮೇಲೆ ಈ ಕೆಳಗೆ ಸಹಿಮಾಡಿರುವವರು ಪ್ರವೇಶಿಸುತ್ತಾರೆ ಎಂದು ಸದರಿ ಅಧಿನಿಯಮದ 6ನೇ ಪ್ರಕರಣದ ಮೇರೆಗೆ ಈ ನೋಟೀಸಿನ ಮೂಲಕ ತಿಳಿಸಲಾಗಿದೆ.