ನಮೂನೆ - 3
(3ನೇ ನಿಯಮವನ್ನು ನೋಡಿ)
ಗೆ, ....................
................... ದಿನಾಂಕದ ನೋಟೀಸು ಸಂಖ್ಯೆ .................. ರ ಮೂಲಕ ಸದರಿ ನೋಟೀಸಿನಲ್ಲಿ ನಿರ್ದಿಷ್ಟಪಡಿಸಿದ ಪ್ರತಿಬಂಧಕ ಅಥವಾ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ತಮಗೆ ಅಗತ್ಯಪಡಿಸಿದ್ದುದರಿಂದ;
ಮತ್ತು, ಸದರಿ ನೋಟೀಸಿನಲ್ಲಿ ಅಥವಾ ತಾವು ಸಲ್ಲಿಸಿದ ಅಪೀಲಿನ ಮೇಲೆ ಮಾಡಿದ ಆದೇಶದಲ್ಲಿ ನಿರ್ದಿಷ್ಟಪಡಿಸಿದ ಕಾಲದೊಳಗೆ ಸದರಿ ನೋಟೀಸನ್ನು ತಾವು ಪಾಲಿಸದೆ ಇರುವುದರಿಂದ;
ಮತ್ತು, ಸದರಿ ನೋಟೀಸು ಅಥವಾ ಆದೇಶದಲ್ಲಿ ನಮೂದಿಸಿದ ಪ್ರತಿಬಂಧಕ ಅಥವಾ ಪರಿಹಾರ ಕ್ರಮಗಳನ್ನು ಕರ್ನಾಟಕ ಕೃಷಿ ಸಂಬಂಧಿ ಕೀಟಗಳು ಮತ್ತು ರೋಗಗಳ ಅಧಿನಿಯಮ, 1968 (1969ರ ಕರ್ನಾಟಕ ಅಧಿನಿಯಮ ಸಂ.1)ರ 7 ಅಥವಾ 9ನೇ ಪ್ರಕರಣಗಳ ಮೂಲಕ ಅಗತ್ಯಪಡಿಸಲಾದಂತೆ ಕೆಳಗೆ ಸಹಿಮಾಡಿದವರು ಅಥವಾ ಕೆಳಗೆ ಸಹಿ ಮಾಡಿದವರ ಮೇಲ್ವಿಚಾರಣೆಯಲ್ಲಿ ಕೈಗೊಂಡಿರುವುದರಿಂದ;
ಮತ್ತು, ಸದರಿ ಪ್ರತಿಬಂಧಕ ಅಥವಾ ಪರಿಹಾರ ಕ್ರಮಗಳಿಗೆ ವೆಚ್ಚವಾಗಿರುವ ........ ರೂ. ಗಳನ್ನು ತಾವು ಸಂದಾಯ ಮಾಡಬೇಕಾಗಿರುವುದರಿಂದ; (ಅದರ ವಿವರಗಳನ್ನು ಈ ಕೆಳಗೆ ನೀಡಲಾಗಿದೆ)
ಈಗ, ಸದರಿ ಅಧಿನಿಯಮದ 10ನೇ ಪ್ರಕರಣದ ಉಪಬಂಧಗಳಿಗೆ ಅನುಸಾರವಾಗಿ ಈ ನೋಟೀಸಿನ ದಿನಾಂಕದಿಂದ ................ ದಿನಗಳೊಳಗಾಗಿ ................ ರೂ. ಗಳ ಸದರಿ ಮೊತ್ತವನ್ನು ಸಂದಾಯ ಮಾಡುವಂತೆ ತಮ್ಮನ್ನು ಈ ಮೂಲಕ ಅಗತ್ಯಪಡಿಸಲಾಗಿದೆ.
(ಇಲ್ಲಿ ಪ್ರತಿಬಂಧಕ ಅಥವಾ ಪರಿಹಾರ ಕ್ರಮದ ವೆಚ್ಚಗಳ ತಗಾದೆಯ ವಿವರಗಳನ್ನು ನಿರ್ದಿಷ್ಟಪಡಿಸಿ).
ದಿನಾಂಕ:
ದಿನಾಂಕ: ಪರಿಶೀಲನಾಧಿಕಾರಿ.