ಈ ನಿಯಮಗಳಲ್ಲಿ ವಿಷಯಕ್ಕೆ ಅಥವಾ ಸಂದರ್ಭಕ್ಕ ಬೇರೆ ಅರ್ಥದ ಅಗತ್ಯ ಇರದಿದ್ದರೆ.-
(ಎ) “ಅಧಿನಿಯಮ” ಎಂದರೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993. (1993 ರ ಕರ್ನಾಟಕ ಅಧಿನಿಯಮ ಸಂಖ್ಯೆ 14);
(ಬಿ) “ಅಧ್ಯಕ್ಷರು” ಎಂದರೆ ಸಂಬಂಧಪಟ್ಟ ಗ್ರಾಮದ ಚುನಾಯಿತ ಗ್ರಾಮ ಪಂಚಾಯಿತಿ ಸದಸ್ಯರುಗಳಿಂದ ಗ್ರಾಮ ಪಂಚಾಯತಿ ಮೂಲಕ ಆಯ್ಕೆಯಾದ ಗ್ರಾಮ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕ ಸಮಿತಿ ಅಧ್ಯಕ್ಷ;
(A) "ಉಪಾದ್ಯಕ್ಷರು” ಎಂದರೆ ಗ್ರಾಮ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕ ಸಮಿತಿಯ ಉಪಾಧ್ಯಕ್ಷ (ಸಮಿತಿಯ ಸದಸ್ಯರುಗಳಿಂದ ಆಯ್ಕೆಯಾದ ಆ ಗ್ರಾಮದ ಗ್ರಾಮ ಪಂಚಾಯತಿ ಒಬ್ಬ ಸದಸ್ಯ)
(ಡಿ) ಗ್ರಾಮ” ಎಂದರೆ ಕಂದಾಯ ಇಲಾಖೆಯು ಗುರುತಿಸಿರುವ ಕಂದಾಯ ಗ್ರಾಮ ಹಾಗೂ ಅದರೊಡನೆ ಹೊಂದಿಕೊಂಡಿರುವ ಉಪಗ್ರಾಮಗಳು; ಮತ್ತು
(ಇ) “ಸಮಿತಿ”. ಎಂದರೆ ನಿಯಮ 3 ರಡಿಯಲ್ಲಿ ರಚಿಸಲ್ಪಟ್ಟ ಗ್ರಾಮ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕ ಸಮಿತಿ.
(ಎಫ್) “ಸಮಿತಿ ಕಾರ್ಯದರ್ಶಿ” ಈ ಗ್ರಾಮದ ವ್ಯಾಪ್ತಿಯ ಆಶಾ ಕಾರ್ಯಕರ್ತೆ (ಒಬ್ಬರಿಗಿಂತ ಹೆಚ್ಚು ಆಶಾ ಕಾರ್ಯಕರ್ತೆಯರಿದ್ದರೆ ಹಿರಿತನ ಮತ್ತು ಅರ್ಹತೆಯ ಮೇಲೆ ಸಮಿತಿಯು ಆಯ್ಕೆ ಮಾಡಿದ ಆಶಾ ಕಾರ್ಯಕರ್ತೆ).