(1) ಗ್ರಾಮ ಆರೋಗ್ಯ, ನೈರ್ಮಲ್ಯ ಮತ್ತು DAD ಸಮಿತಿಯು ಈ ಕೆಳಕಂಡ ಸದಸ್ಯರನ್ನು ಒಳಗೊಂಡಿರತಕ್ಕದ್ದು.-
| ಕ್ರ.ಸಂ | ಸದಸ್ಯರು | ಪದನಾಮ |
| (1) | ಗ್ರಾಮದ ಗ್ರಾಮ ಪಂಚಾಯತಿ ಸದಸ್ಯರಲ್ಲಿ ಗ್ರಾಮ ಪಂಚಾಯತಿಯು ಆಯ್ಕೆ ಮಾಡಿದ ಸದಸ್ಯ. | ಅಧ್ಯಕ್ಷರು |
| (2) | ಗ್ರಾಮದ ಗ್ರಾಮ ಪಂಚಾಯತಿ ಸದಸ್ಯರಲ್ಲಿ ಗ್ರಾಮ ಪಂಚಾಯತಿಯು ಆಯ್ಕೆ ಮಾಡಿದ ಸದಸ್ಯ. (ಸದಸ್ಯರು ಇಬ್ಬರಿಗಿಂತ ಹೆಚ್ಚಾದಲ್ಲಿ ಗ್ರಾಮ ಪಂಚಾಯತಿ ಮೂಲಕ ಆಯ್ಕೆ ಮಾಡುವುದು) | ಉಪಾಧ್ಯಕ್ಷರು |
| (3) | ಗ್ರಾಮ ಸಭೆಯಿಂದ ಆಯ್ಕೆಯಾದ ಈ ಕೆಳಕಂಡ ವರ್ಗದ 15 ಸದಸ್ಯರು, ಇವರಲ್ಲಿ ಕವಿಷ್ಟ 8 ಜನ ಮಹಿಳೆಯರು, ಕನಿಷ್ಟ3 ಅನುಸೂಚಿತ ಜಾತಿ ಅನುಸೂಚಿತ ಪಂಗಡದವರು, ಇಬ್ಬರು ಸ್ತ್ರೀಶಕ್ತಿ ಸ್ವಸಹಾಯ ಸಂಘದ ಸದಸ್ಯರು, ಗ್ರಾಮದಲ್ಲಿ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕತೆಗೆ ಸಂಬಂಧಿಸಿದ ವಿಷಯದಲ್ಲಿ ಪರಿಣಿತಿಯುಳ್ಳ, ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳ BIdH ಒಬ್ಬರು, .. ಗ್ರಾಮದ ಯುಪತಿ/ಯುವಕ ಮಂಡಳದ ಪ್ರತಿನಿಧಿ- ತಲಾ ಒಬ್ಬರು. | ಸದಸ್ಯರು |
| (4) | ಆಯಾ ಗ್ರಾಮಕ್ಕೆ ಸಂಬಂಧಿಸಿದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ಕಿರಿಯ ಪುರುಷ ಆರೋಗ್ಯ ಸಹಾಯಕ, ಪ್ರಾಥಮಿಕ ಶಾಲಾ ಶಿಕ್ಷಕರು-ಒಬ್ಬರು (ಮಹಿಳೆಯರಿಗೆ. ಆದ್ಯತೆ), ಗ್ರಾಮದಲ್ಲಿರುವ ಎಲ್ಲಾ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು. | ಪದನಿಮಿತ್ತ ಸದಸ್ಯರು |
| (5) | ಗ್ರಾಮದ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಲ್ಲಿ ಸಮಿತಿಯು ಆಯ್ಕೆ ಮಾಡಿದ ಆಶಾ ಕಾರ್ಯಕರ್ತೆ. | ಸದಸ್ಯ ಕಾರ್ಯದರ್ಶಿ |
(2) ಸಮಿತಿಯ ಯಾವೊಬ್ಬ ಸದಸ್ಯರಿಗೂ ಗೌರವಧನ ಅಥವಾ ಇತರೆ ಸಂಭಾವನೆ ಇರುವುದಿಲ್ಲ.