(1) ಗ್ರಾಮ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕ ಸಮಿತಿಯ ಪ್ರತಿ ತಿಂಗಳಿಗೊಮ್ಮೆ ಸಭೆ ಸೇರುವುದು ಅಥವಾ ಅವಶ್ಯವಿದ್ನಾಗ ಅದ್ಯಕ್ಷರು ಮೂರು ದಿನಗಳು ಮುಂಚಿತವಾಗಿ ನೋಟೀಸ್ ನೀಡಿ ವಿಶೇಷ ಸಭೆ ಕರೆಯಬಹುದು.
-
ಸಮಿತಿಯ ಸಭೆಯು ಕೋರಂ ಪದನಿಮಿತ್ತ ಸದಸ್ಯರನ್ನು ಹೊರತುಪಡಿಸಿ 1/3 ಭಾಗದ ಸದಸ್ಯರು ಆಗಿರತಕ್ಕದ್ದು.
-
ಈ ಸಮಿತಿಯು ತೆಗೆದುಕೊಂಡ ನಿರ್ಣಗಳನ್ನು ಸಮಿತಿಯ ಕಾರ್ಯದರ್ಶಿಯು ನಿರ್ಣಯಗಳ ಮೇಲೆ ಕೈಗೊಂಡ ಕ್ರಮಗಳ ಸಮೇತ ಗ್ರಾಮ ಪಂಚಾಯತಿಗೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೇಲಧಿಕಾರಿಗಳಿಗೆ ವರದಿ ಮಾಡುವುದು.