-
ಗ್ರಾಮದಲ್ಲಿ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಟಿಕತೆಯ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ಮಾಡಿ ವಸ್ತುಸ್ಥಿತಿ ವರದಿ ಸಿದ್ದಪಡಿಸುವುದು.
-
ಗ್ರಾಮದ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕತೆಯ ಸ್ಥಿತಿಗತಿಗಳಲ್ಲಿ ಇರುವ ಕೊರತೆಗಳ ಬಗ್ಗೆ ಪಟ್ಟಿ ಮಾಡುವುದು.
-
ಗ್ರಾಮದ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕತೆ ಬಗ್ಗೆ ವಾರ್ಷಿಕ ಸಮಗ್ರ ಕ್ರಿಯಾ ಯೋಜನೆ ತಯಾರಿಸುವುದು.
-
ಗ್ರಾಮದ ಆರೋಗ್ಯ, ನೈರ್ಮಲ್ಯ ಮತ್ತು ಪೌಷ್ಠಿಕತೆ ಬಗ್ಗೆ ಸರ್ಕಾರದ ವಿವಿಧ ಯೋಜನೆಗಳಲ್ಲಿ ದೊರಕುವ ಸೌಲಭ್ಯಗಳ ಬಗ್ಗೆ. ಕ್ರಿಯಾ ಯೋಜನೆಯಲ್ಲಿ ಅವಕಾಶ ಕಲ್ಪಿಸುವುದು.
-
ಕೊರತೆ ಇರುವ ಸಂಪನ್ಮೂಲವನ್ನು ಸಾರ್ವಜನಿಕ ವಂತಿಗೆ, ಸಹಭಾಗಿತ್ವಗಳಿಂದ ಪಡೆಯಲು ಕಮ ಕೈಗೊಳ್ಳುವುದು.
-
ಗ್ರಾಮದ ಎಲ್ಲಾ ಜನರಿಗೆ ಶುದ್ಧವಾದ ಕುಡಿಯುವ ನೀರು ದೊರೆಯುತ್ತಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು.
7 ಗ್ರಾಮದ ಪ್ರತೀ ಕುಟುಂಬಗಳಿಗೂ ಶೌಚಾಲಯ ಇರುವ ಬಗ್ಗೆ ಮತ್ತು ಬಳಸುತ್ತಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು.
ಕ 8) ಗ್ರಾಮದ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ, ಅಂಗನವಾಡಿಗಳಲ್ಲಿ DA ಅ ಆಹಾರ ದೊರಕುತ್ತಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು.
9 ಗ್ರಾಮದ ಗರ್ಭಿಣಿಯರು, ಬಾಣಂತಿಯರಿಗೆ ದೊರಕುತ್ತಿರುವ ಪೌಷ್ಠಿಕ ಆಹಾರದ ಸೇರಿದಂತೆ ಎಲ್ಲಾ ಸೌಲಭ್ಯಗಳು ದೊರಕುತ್ತಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು. 10. ಗ್ರಾಮದ ಎಲ್ಲಾ ಪ್ರದೇಶದಲ್ಲಿ ರಸ್ತೆ, ಚರಂಡಿ, ಸಾರ್ವಜನಿಕ ಸ್ಥಳಗಳಲ್ಲಿ ಶುಚಿತ್ವ ಕಾಪಾಡುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು. 11) . ಗ್ರಾಮದ ವ್ಯಾಪ್ತಿಯ ಸಾರ್ವಜನಿಕ ಕೆರೆ, ಕುಂಟೆ, ತೆರೆದ ಬಾವಿ, ಕೊಳವೆ ಬಾವಿಗಳಲ್ಲಿ (ಬೋರ್ವೆಲ್) ನೀರು ಮಲೀನವಾಗದಂ೦ತೆ ಕ್ರಮ ಕೈಗೊಳ್ಳಯವುದು.
- ಪ್ರತಿ ತಿಂಗಳ ಮೂರನೇ ಶನಿವಾರದಂದು, ಗ್ರಾಮದಲ್ಲಿ 'ಗಾಮ ಆರೋಗ್ಯ ಮತ್ತು ಪೌಷ್ಠಿಕ ದಿನ' ಆಚರಿಸಿ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಕ್ರಮ ವಹಿಸುವುದು.
13), ಗ್ರಾಮದಲ್ಲಿ ಅಪೌಷಿಿಕತೆಯಿಂದ ಬಳಲುತ್ತಿರುವ ಎಲ್ಲಾ ಮಕ್ಕಳನ್ನು ಪ್ರಾರಂಭಿಕ ಹಂತದಲ್ಲೆ ಪತ್ತೆ ಹಚ್ಚಿ ಅಂತಹ ಮಕ್ಕಳಿಗೆ ಹತ್ತಿರದ ಪೌಷ್ಠಿಕ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ/ ಉಪಚಾರ ಮಾಡಿಸಿ, ಆ ಮಕ್ಕಳು ಗ್ರಾಮಕ್ಕೆ ಹಿಂತಿರುಗಿದ ನಂತರ ಅವರು ಸಾಮಾನ್ಯ ಪೌಷ್ಠಿಕ ಮಟ್ಟ ತಲುಪುವವರೆಗೆ ನಿಗಾವಹಿಸುವುದು.
-
ಗ್ರಾಮದಲ್ಲಿ ಅಂಗನವಾಡಿಯು ನೀಡಿತ್ತಿರುವ ಸೇವೆಗಳನ್ನು ಮೇಲ್ವಿಚಾರಣೆ ನಡೆಸುವುದು. ಮತ್ತು ಗ್ರಾಮದ ಮಹಿಳೆಯರ ಮತ್ತು ಮಕ್ಕಳ ಪೌಷ್ಠಿಕ ಮಟ್ಟವನ್ನು ಉತ್ತಮಪಡಿಸಲು ಸಹಕರಿಸುವುದು.
-
ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳ ನಿವಾರಣೆಗೆ ಸಾರ್ವತ್ರಿಕ ಚುಚ್ಚುಮದ್ದು ಕಾರ್ಯಕ್ರಮ ನಿಯಮಿತವಾಗಿ ನಡೆಯುವಂತೆ ಕ್ರಮ ವಹಿಸುವುದು.
16% ಆರೋಗ್ಯ ಸಹಾಯಕರು (ಕಿರಿಯ ಆರೋಗ್ಯ ಸಹಾಯಕಿ/ಸಹಾಯಕ, ಆಶಾ ಕಾರ್ಯಕರ್ತೆಯರು) ನಿಯಮಿತವಾಗಿ ಗ್ರಾಮಕ್ಕೆ ಬೇಟಿ ನೀಡುವಂತೆ ನೋಡಿಕೋಳ್ಳಬೇಕು, ಆ ಮೂಲಕ ಜನರಿಗೆ ಆರೋಗ್ಯ ಸೇವೆ ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿ ಸಿಗುವಂತೆ ಮಾಡಬೇಕು. 17. ಗರ್ಭಿಣಿ ಮಹಿಳೆಯರಿಗೆ ತುರ್ತಾಗಿ ಆಸ್ಪತ್ರೆಗೆ ಹೋಗಬೇಕಾದ ವಾಹನ ಸೌಲಭ್ಯದ ವ್ಯವಸ್ಥೆ ಮಾಡುವುದು, 18) ಪ್ರತಿ ಅಂಗನವಾಡಿ ಕೇಂದ್ರಗಳಲ್ಲಿ ಬಾಲವಿಕಾಸ ಸಮಿತಿ ರಚಿಸುವುದು ಮತ್ತು ಅಂಗನವಾಡಿಗಳಿಗೆ ಬೇಕಾದ ಸಹಾಯ, ನೆರವು ನೀಡುವುದು ಹಾಗೂ ಮಕ್ಕಳಿಗೆ ಪೌಷ್ಠಿಕ ಆಹಾರ ಸರಿಯಾಗಿ ಸಿಗುವಂತೆ ಮಾಡಲು ಸಂಂಬಂಧಪಟ್ಟ ಇಲಾಖೆಯೊಡನೆ ಸಮನ್ವಯ ಸಾಧಿಸುವುದು. 19) ಗ್ರಾಮದ ಜನರಲ್ಲಿ ಹೆಣ್ಣು ಭ್ರೂಣ ಹತ್ಯೆ ಬಾಲ್ಯ ವಿವಾಹ, ಅನಕ್ಷರತೆ, ಬಾಲ ಕಾರ್ಮಿಕ ಪದ್ಧತಿ ಹೋಗಲಾಡಿಸಲು ಕ್ರಮ Bed, BOP), QB.